ಎಟಿಎಂ ಮೆಷೀನ್'ನಿಂದ ಲೈಂಗಿಕ ರೋಗವೂ ಬಂದೀತು ಹುಷಾರ್..!

By Suvarna Web DeskFirst Published Nov 18, 2016, 10:12 AM IST
Highlights

ಮನುಷ್ಯ ಸೇರಿದಂತೆ ಸಸ್ತನಿ ಪ್ರಾಣಿಗಳ ಗುದದ್ವಾರದಲ್ಲಿ ವಾಸಿಸುವ, ಲೈಂಗಿಕವಾಗಿ ರೋಗ ಹರಡುವ ಟ್ರೈಕೋಮೊನಾಸ್ ವಜೈನಾಲಿಸ್ ಎಂಬ ಮಾನವ ಪರಾವಲಂಬಿ ಜೀವಿಯೂ ಈ ಎಟಿಎಂನ ಕೀಪ್ಯಾಡ್'ಗಳಲ್ಲಿರುವುದು ಪತ್ತೆಯಾಗಿದೆ.

ಬೆಂಗಳೂರು(ನ. 18): ನೋಟ್ ನಿಷೇಧದ ಬಳಿಕ ಜನರು ಪ್ರತೀ ದಿನವೂ ಎಟಿಎಂಗೆ ಮುಗಿಬಿದ್ದು ಹಣಪಡೆಯಲು ಯತ್ನಿಸುತ್ತಿರುವ ದೃಶ್ಯ ತೀರಾ ಸಾಮಾನ್ಯವಾಗಿದೆ. ಎಟಿಎಂ ಬಳಕೆಯ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದೆ. ಈ ವೇಳೆ, ಕ್ಯಾಷ್ ಪಡೆಯುವ ಹತಾಶೆಯಲ್ಲಿರುವ ಎಟಿಎಂ ಬಳಕೆದಾರರಿಗೆ ಆತಂಕ ತರುವ ಸುದ್ದಿಯೊಂದು ಬಂದೆರಗಿದೆ. ಎಟಿಎಂ(ಆಟೊಮೇಟೆಡ್ ಟೆಲ್ಲರ್ ಮೆಷಿನ್)ನ ಕೀಬ್ಯಾಡ್ ವಿವಿಧ ಪ್ರಕಾರದ ಅಪಾಯಕಾರಿ ಬ್ಯಾಕ್ಟೀರಿಯಗಳ ಅವಾಸಸ್ಥಾನವಾಗಿದೆ ಎಂದು ಸಂಶೋಧನೆಯೊಂದು ಅಭಿಪ್ರಾಯಪಟ್ಟಿದೆ. ಮನುಷ್ಯ ಸೇರಿದಂತೆ ಸಸ್ತನಿ ಪ್ರಾಣಿಗಳ ಗುದದ್ವಾರದಲ್ಲಿ ವಾಸಿಸುವ, ಲೈಂಗಿಕವಾಗಿ ರೋಗ ಹರಡುವ ಟ್ರೈಕೋಮೊನಾಸ್ ವಜೈನಾಲಿಸ್ ಎಂಬ ಮಾನವ ಪರಾವಲಂಬಿ ಜೀವಿಯೂ ಈ ಎಟಿಎಂನ ಕೀಪ್ಯಾಡ್'ಗಳಲ್ಲಿರುವುದು ಪತ್ತೆಯಾಗಿದೆ ಎಂದು ಐಎಎನ್'ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಷ್ಟೇ ಅಲ್ಲ, ಟೆಲಿವಿಷನ್, ಬಚ್ಚಲು ಮನೆ, ಅಡುಗೆ ಮನೆ, ಹಾಸಿಗೆ-ದಿಂಬು ಇತ್ಯಾದಿ ಮನುಷ್ಯ ಬಳಸುವ ವಸ್ತುಗಳಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಸೂಕ್ಷ್ಮಜೀವಿಗಳು ಎಟಿಎಂ ಮೆಷೀನ್'ನಲ್ಲಿ ಪತ್ತೆಯಾಗಿವೆ. ಜೊತೆಗೆ, ಮನುಷ್ಯ ತಿಂದು ಕೈನಲ್ಲಿ ಉಳಿದ ಆಹಾರ ಉಳಿಕೆಯಿಂದ ಡಿಎನ್'ಎ ತುಣುಕುಗಳು ಈ ಮೆಷೀನ್'ನಲ್ಲಿ ಕಂಡುಬಂದಿವೆ ಎಂದು ಸಂಶೋಧಕರು ಹೇಳುತ್ತಾರೆ.

Latest Videos

ಅಂದಹಾಗೆ, ನ್ಯೂಯಾರ್ಕ್ ಯೂನಿವರ್ಸಿಟಿಯ ಸಂಶೋಧಕರ ತಂಡಗಳು ಅಮೆರಿಕದ ವಿವಿಧೆಡೆ ಎಟಿಎಂ ಮೆಷೀನ್'ಗಳ ಮೇಲೆ ಅಧ್ಯಯನ ಮಾಡಿ ಈ ವಿಷಯವನ್ನು ಪತ್ತೆ ಮಾಡಿವೆ ಎನ್ನಲಾಗಿದೆ.

click me!