‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ..ಇನ್ನೊಂದಷ್ಟನ್ನು ಬೀಳ್ಕೊಡಬೇಕಿದೆ’

By Web Desk  |  First Published Sep 23, 2019, 12:11 AM IST

ಟ್ರಂಪ್ ಗುಣಗಾನ ಮಾಡಿದ ಭಾರತದ ಪ್ರಧಾನಿ/ ಮುಂದಿನ ಸಾರಿಯೂ ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಬರಲಿದೆ / 50 ಸಾವಿರಕ್ಕೂ ಅಧಿಕ ಭಾರತೀಯರನ್ನು ಉದ್ದೇಶಿಸಿ ಮೋದಿ ಐತಿಹಾಸಿಕ ಭಾಷಣ/ ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ/ 2019ರ ಚುನಾವಣೆ ಇಡೀ ಪ್ರಪಂಚಕ್ಕೆ ಒಂದು ಪಾಠ/ ಭಯೋತ್ಪಾದನೆ ವಿರುದ್ಧ ಹೋರಾಟ ನಿರಂತರ/ ಭಾರತದ ಆರ್ಥಿಕತೆ ಸದೃಢವಾಗಿದೆ/ ಹಣದುಬ್ಬರ ನಿಯಂತ್ರಣದಲ್ಲಿದೆ.


ಹೂಸ್ಟನ್‌[ಸೆ.22]: ಹೂಸ್ಟನ್‌ನ ಎನ್‌ಆರ್‌ಜಿ ಫುಟ್ಬಾಲ್‌ ಮೈದಾನದಲ್ಲಿ ಎಲ್ಲಿ ನೋಡಿದರಲ್ಲಿ ಭಾರತದ ತ್ರಿವರ್ಣ ಧ್ವಜಗಳು.. ಮೋದಿ ಮೋದಿ ಘೋಷಣೆ..ಜನಗಣ ಮನ .. ಇದಕ್ಕೆಲ್ಲ ಕಾರಣ ಅಮೆರಿಕದ ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ‘ಹೌಡಿ-ಮೋದಿ’ ಸಮಾವೇಶ.

ಮೊದಲು ಪೀಠಿಕೆಯ ರೀತಿ ಮಾತನಾಡಿದ ಮೋದಿ ಮತ್ತು ಟ್ರಂಪ್ ಒಬ್ಬರನ್ನೊಬ್ಬರು ಪರಿಚಯ ಮಾಡಿಸಿ ಹಾಡಿ ಹೊಗಳಿದರು. ಹಾಗಾದರೆ ಮೋದಿ ಭಾಷಣದ ಹೈಲೈಟ್ಸ್ ಏನು?

Latest Videos

undefined

* ಭಾರತ ಸವಾಲುಗಳಿಂದ ಓಡುತ್ತಿಲ್ಲ, ಸವಾಲುಗಳನ್ನ ಎದುರಿಸುತ್ತಿದ್ದೇವೆ. ಭಾರತ 5 ಟ್ರಿಲಿಯನ್ ಆರ್ಥಿಕತೆ ಹೊಂದುವ ಗುರಿ ಹೊಂದಿದೆ. ಉದ್ಯಮಿ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ.ಸ್ನೇಹಕ್ಕೆ ಸ್ನೇಹ..ಪ್ರೀತಿಗೆ
 

ಪ್ರೀತಿ... ಮೋದಿ-ಟ್ರಂಪ್ ಜುಗಲ್‌ಬಂದಿ, ಪಾಕ್‌ಗೆ ಫಜೀತಿ

* ಹಲವು ಅನಿಶ್ಚಿತತೆ ನಡುವೆ ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಭಾರತ ವಿದೇಶಿ ಬಂಡಾವಾಳ ಹೂಡಿಕೆದಾರರ ಸ್ವರ್ಗವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಲವು ನೀತಿ ಸಡಿಲಿಕೆ ಮಾಡಲಾಗಿದೆ.

* ಭಾರತದ 2019ರ ಲೋಕಸಭೆ ಚುನಾವಣೆ  ದೇಶದ ಪ್ರಜಾಪ್ರಭುತ್ವದ ಹೆಗ್ಗಳಿಕೆಯನ್ನು ಪ್ರಪಂಚಕ್ಕೆ ಪರಿಚಯಿಸಿತು

* 61 ಕೋಟಿ ಜನರು ಈ ಬಾರಿ ಮತದಾನ ಮಾಡಿದರು. ಅಮೆರಿಕ ಜನಸಂಖ್ಯೆಯ ದುಪ್ಪಟ್ಟು ಜನ ಭಾರತದಲ್ಲಿ ಮತದಾನ ಮಾಡಿದರು. 8 ಕೋಟಿ ಹೊಸ ಮತದಾರರು ಈ ಬಾರಿ ಮತ ಚಲಾಯಿಸಿದರು

* ಹಿಂದೆಂದೂ ಕಾಣದ ರೀತಿ ಅತಿ ಹೆಚ್ಚು ಮಹಿಳೆಯರು ಮತ ಚಲಾಯಿಸಿದರು.. ಅಲ್ಲದೇ ಗೆದ್ದು ಬಂದರು.

* ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ, ಇದೇ ನಮ್ಮ ಶಕ್ತಿ, ಇದೇ ನಮಗೆ ಪ್ರೇರಣೆ

*ನಾವು ಎಲ್ಲಿ ಹೋಗುತ್ತೇವೆಯೋ ಅಲ್ಲಿಗೆ ಪ್ರಜಾಪ್ರಭುತ್ವದ ಸಂಸ್ಕಾರವನ್ನೂ ಜತೆಗೆ ತೆಗೆದುಕೊಂಡು ಹೋಗುತ್ತೇವೆ

*ಮೋದಿ ಒಬ್ಬನೇ ಏನೂ ಅಲ್ಲ, ನಾನು 130 ಕೋಟಿ ಜನರ ಆದೇಶ ಪಾಲಿಸುವ ಸಾಧಾರಣ ವ್ಯಕ್ತಿ

* ಭಾರತದ ಎಲ್ಲ ಪ್ರಾದೇಶಿಕ ಭಾಷೆಯಲ್ಲೂ ‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದ ಮೋದಿ

ಹೊಸ ಎಫ್‌ಡಿಐ ನೀತಿ: ಫ್ಲಿಪ್ ಕಾರ್ಟ್, ವಾಲ್‌ಮಾರ್ಟ್ ದೋಸ್ತಿಗೆ ಭೀತಿ!

*  ರಾಜ್ಯಸಭೆಯಲ್ಲಿ ನಮಗೆ ಬಹುಮತ  ಆದರೂ ಅನೇಕ ಶಾಸನಗಳು ಎರಡೂ ಸಭೆಗಳಲ್ಲಿ ಅಂಗೀಕಾರವಾಗಿದೆ

* ಆರ್ಟಿಕಲ್ 370 ರದ್ದು ಮಾಡಲು ಎಲ್ಲರೂ ಸಮ್ಮತಿ ಕೊಟ್ಟರು. ಇದಕ್ಕೆ ಎಲ್ಲರೂ ಎದ್ದು ನಿಂತು ಸಂಸದರಿಗೆ ಅಭಿನಂದನೆ ಸಲ್ಲಿಸಬೇಕು.

* ಆರ್ಟಿಕಲ್ 370 ರದ್ದತಿಯಿಂದ ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಅವರಿಗೆ ಅಶಾಂತಿ ಬೇಕು. ಆಂತಕವಾದವನ್ನ ಪಾಲನೆ ಪೋಷಣೆ ಮಾಡುವವರು. ಅವರು ಯಾರು ಎನ್ನುವುದು ವಿಶ್ವಕ್ಕೆ ಚೆನ್ನಾಗಿ ಗೊತ್ತಿದೆ

* ಅಮೆರಿಕ 9-11 ಹಾಗೂ ಮುಂಬೈ ದಾಳಿಕೋರರು ಎಲ್ಲಿನವರು? ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಬೇಕಿದೆ. ಟ್ರಂಪ್ ಕೂಡ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

* ದೇಶದಲ್ಲಿ 70 ವರ್ಷಗಳಿಂದ ನಮ್ಮ ಮುಂದೆ ದೊಡ್ಡ ಸವಾಲು ಇತ್ತು ಅದೆಲ್ಲವನ್ನು ಮೀರಿ ನಿಂತಿದ್ದೇವೆ.

*  ಆರ್ಟಿಕಲ್ 370ಗೂ ನಾವು ಬೀಳ್ಕೊಡುಗೆ ಕೊಟ್ಟಿದ್ದೇವೆ. ಕಾಶ್ಮೀರ, ಲಡಾಕ್ ಜನರು ಸೌಲಭ್ಯ ವಂಚಿತರಾಗಿದ್ದರು. ಇದರಿಂದ ಭಯೋತ್ಪಾದನಾ ಕೃತ್ಯ ಜಾಸ್ತಿಯಾಗಿತ್ತು ಈಗ ಇತರೆ ಭಾರತೀಯರ ರೀತಿ, ಕಾಶ್ಮೀರ, ಲಡಾಕ್ ಜನರಿಗೂ ಸಕಲ ಸೌಲಭ್ಯ ಸಿಗಲಿದೆ.

"

 

 

 

 

"

 

click me!