ಮನೆ ಕೊಳ್ಳುವವರಿಗೆ ಗುಡ್ ನ್ಯೂಸ್

By Web DeskFirst Published Nov 21, 2018, 11:07 AM IST
Highlights

ಮನೆ ಕೊಳ್ಳಬೇಕು ಎಂದುಕೊಂಡವರಿಗೆ ಇಲ್ಲಿದೆ ಗುಡ್ ನ್ಯೂಸ್. ಪರಿಸರ ನಿಯಮ ಪಾಲನೆ ಅಧಿಕಾರವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ವರ್ಗಾಯಿಸಿದೆ. ಇದರಿಂದ ಮನೆಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. 

ನವದೆಹಲಿ: 20 ಸಾವಿರ ಚದರ ಮೀಟರ್‌ನಿಂದ 50 ಸಾವಿರ ಚದರ ಮೀಟರ್ ವಿಸ್ತೀರ್ಣದವರೆಗಿನ ಯೋಜನೆಗಳಿಗೆ ಸಂಬಂಧಿಸಿದ ಪರಿಸರ ನಿಯಮ ಪಾಲನೆ ಅಧಿಕಾರವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ವರ್ಗಾಯಿಸಿದೆ. ಇದರಿಂದಾಗಿ ಮನೆಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. 

ಜತೆಗೆ ವಸತಿ ಯೋಜನೆಗಳು ಕನಿಷ್ಠ ಒಂದು ವರ್ಷ ಬೇಗನೆ ಪೂರ್ಣಗೊಳ್ಳಲು ಅನು ಕೂಲವಾಗಲಿದೆ. ಕೇಂದ್ರದ ಈ ನಿರ್ಧಾರದಿಂದ ರಿಯ ಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ಬರುವುದಲ್ಲದೆ, ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಯಾಗಲಿದೆ. 

ಯೋಜನೆಗೆ ಅನುಮತಿ ಪಡೆಯುವ ಅವಧಿ ತಗ್ಗುವುದರಿಂದ ಮನೆಗಳ ಬೆಲೆ ಇಳಿಕೆಯಾಗಲಿದೆ ಎಂದು ಕ್ರೆಡೈ ಅಧ್ಯಕ್ಷ ಜಕ್ಸಯ್ ಶಾ ತಿಳಿಸಿದ್ದಾರೆ. 

click me!