ಅಮಿತ್‌ ಶಾ ವಾಸಕ್ಕೆ ಮನೆ ಪರಿಶೀಲನೆ

By Suvarna Web DeskFirst Published Jun 6, 2017, 10:47 AM IST
Highlights

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮನೆಯೊಂದನ್ನು ಮಾಡಲು ಉದ್ದೇಶಿಸಿರುವ ಅಮಿತ್‌ ಶಾ ಅವರಿಗಾಗಿ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದ ವಿಲ್ಲಾವೊಂದನ್ನು ಗುರುತಿಸಲಾಗಿದೆ. ಚುನಾವಣೆ ಮುಗಿಯುವವರೆಗೆ ಇದನ್ನು ಬಳಸಲಾಗುತ್ತದೆ. ಇದರಲ್ಲಿ ಚುನಾವಣಾ ರಣತಂತ್ರಕ್ಕೆ ಅಗತ್ಯವಾದ ಎಲ್ಲ ರೀತಿಯ ಸಂವಹನ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ವಾಸ್ತವ್ಯ ಮತ್ತು ತಂತ್ರಗಾರಿಕೆ ರೂಪಿಸಲು ಅನುಕೂಲವಾಗುವಂತೆ ನಗರದಲ್ಲಿ ಪ್ರತ್ಯೇಕ ಮನೆಯೊಂದನ್ನು ಮಾಡುವ ಸಂಬಂಧ ಅವರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮನೆಯೊಂದನ್ನು ಮಾಡಲು ಉದ್ದೇಶಿಸಿರುವ ಅಮಿತ್‌ ಶಾ ಅವರಿಗಾಗಿ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದ ವಿಲ್ಲಾವೊಂದನ್ನು ಗುರುತಿಸಲಾಗಿದೆ. ಚುನಾವಣೆ ಮುಗಿಯುವವರೆಗೆ ಇದನ್ನು ಬಳಸಲಾಗುತ್ತದೆ. ಇದರಲ್ಲಿ ಚುನಾವಣಾ ರಣತಂತ್ರಕ್ಕೆ ಅಗತ್ಯವಾದ ಎಲ್ಲ ರೀತಿಯ ಸಂವಹನ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ‘ಕನ್ನಡಪ್ರಭ' ಹಿಂದೆಯೇ ವರದಿ ಮಾಡಿತ್ತು.
ಈ ವ್ಯವಸ್ಥೆಗೆ ಪೂರ್ವಭಾವಿ ಎಂಬಂತೆ ಅಮಿತ್‌ ಶಾ ಅವರ ತಂಡದ ಸದಸ್ಯರು ಸೋಮವಾರ ಆಗಮಿಸಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

Latest Videos

ಒಂದು ವೇಳೆ ಶಾ ಅವರಿಗಾಗಿ ನಗರದ ವ್ಯಾಪ್ತಿಯಲ್ಲೇ ಮನೆ ಮಾಡಿದಲ್ಲಿ ಭದ್ರತೆ ದೃಷ್ಟಿಯಿಂದ ಮತ್ತು ವಾಹನ ಸಂಚಾರ ದಟ್ಟಣೆ ಹಿನ್ನೆಲೆ ಸಮಸ್ಯೆಯಾಗಬಹುದು. ಅದರ ಬದಲು ವಿಮಾನ ನಿಲ್ದಾಣದ ಸಮೀಪವೇ ಮನೆ ಮಾಡುವುದರಿಂದ ಓಡಾಟಕ್ಕೆ ಅನುಕೂಲವಾಗುತ್ತದೆ. ವಿಮಾನ ನಿಲ್ದಾಣದಿಂದ ನೇರವಾಗಿ ಈ ಮನೆಗೆ ಆಗಮಿಸಿ ವಾಪಸಾಗಬಹುದು. ಬೇಕಾದರೆ ಪಕ್ಷದ ರಾಜ್ಯ ನಾಯಕರನ್ನು ಈ ಮನೆಗೆ ಕರೆದು ಸಮಾಲೋಚನೆ ನಡೆಸಬಹುದು ಎಂಬ ಲೆಕ್ಕಾಚಾರವಿದೆ.
ಹೀಗಾಗಿ, ಅಮಿತ್‌ ಶಾ ಅವರ ತಂಡದ ಸದಸ್ಯರು ಈ ವಿಲ್ಲಾಕ್ಕೆ ಭೇಟಿ ನೀಡಿದ್ದರು.

click me!