ಆರ್ಮ್‌ಸ್ಟ್ರಾಂಗ್ ಅಸಹಜ ಸಾವು ಮುಚ್ಚಿಡಲು 42 ಕೋಟಿ ಲಂಚ!: 7 ವರ್ಷಗಳ ಬಳಿಕ ರಹಸ್ಯ ಬಯಲು

By Web DeskFirst Published Jul 25, 2019, 8:41 AM IST
Highlights

ಆರ್ಮ್‌ಸ್ಟ್ರಾಂಗ್ ಅಸಹಜ ಸಾವು ಮುಚ್ಚಿಡಲು 42 ಕೋಟಿ ಲಂಚ| 7 ವರ್ಷಗಳ ಬಳಿಕ ರಹಸ್ಯ ಬಹಿರಂಗ| ಹಣ ಪಡೆದು ಸುಮ್ಮನಾಗಿದ್ದ ಕುಟುಂಬ

ಸಿನ್ಸಿನ್ನಾಟಿ[ಜು.25]: ಚಂದ್ರನ ಮೇಲೆ ಕಾಲಿಟ್ಟಮೊದಲ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಗಗನಯಾತ್ರಿ ನೀಲ್‌ ಆರ್ಮ್‌ಸ್ಟ್ರಾಂಗ್ ಅವರನ್ನು ಅಸಹಜ ಸಾವಾಗಿತ್ತು. 2012ರಲ್ಲಿ ವೈದ್ಯರ ಎಡವಟ್ಟಿನಿಂದಾಗಿ ನಡೆದ ಈ ದುರ್ಘಟನೆ ಮುಚ್ಚಿಡಲು, ಆಸ್ಪತ್ರೆಯ ಆಡಳಿತ ಮಂಡಳಿಯು, ಆರ್ಮ್‌ಸ್ಟ್ರಾಂಗ್ ಕುಟುಂಬಕ್ಕೆ 6 ದಶಲಕ್ಷ ಡಾಲರ್‌ (ಸುಮಾರು 42 ಕೋಟಿ ರು.) ಹಣವನ್ನು ಲಂಚದ ರೂಪದಲ್ಲಿ ನೀಡಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

2012ರ ಆಗಸ್ಟ್‌ನಲ್ಲಿ ಒಹಿಯೋದ ಆಸ್ಪತ್ರೆಯಲ್ಲಿ ಆರ್ಮ್‌ಸ್ಟ್ರಾಂಗ್ ಅವರು ಹೃದಯದ ರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಶಸ್ತ್ರಚಿಕಿತ್ಸೆ ಬಳಿಕ ತೀವ್ರ ಅನಾರೋಗ್ಯಕ್ಕೆ ತುತ್ತಾದ ಆರ್ಮ್‌ಸ್ಟ್ರಾಂಗ್ ಅವರು ಕೊನೆಗೆ ಅಸುನೀಗಿದ್ದರು. ಈ ವೇಳೆ ಚಿಕಿತ್ಸಾ ಲೋಪದಿಂದಲೇ ತಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರ್ಮ್‌ಸ್ಟ್ರಾಂಗ್ ಪುತ್ರರು ಆರೋಪಿಸಿದ್ದರು. ಈ ಕುರಿತು ಆಸ್ಪತ್ರೆ ಮತ್ತು ಆರ್ಮ್‌ಸ್ಟ್ರಾಂಗ್ ಕುಟುಂಬಗಳು ಪರಸ್ಪರ ಕಾನೂನು ಸಮರ ಕೂಡಾ ಆರಂಭಿಸಿದ್ದವು.

ಅಂತಿಮವಾಗಿ 2014ರಲ್ಲಿ ಈ ವೇಳೆ ಚಿಕಿತ್ಸಾ ಲೋಪವನ್ನು ಬಹಿರಂಗಪಡಿಸದೇ ಇರಲು ಆಸ್ಪತ್ರೆಯು, ಕುಟುಂಬ ಸದಸ್ಯರಿಗೆ 6 ದಶಲಕ್ಷ ಡಾಲರ್‌ ಹಣ ನೀಡಿತ್ತು. ಈ ಹಣವನ್ನು ಆರ್ಮ್‌ಸ್ಟ್ರಾಂಗ್ ಅವರ ಇಬ್ಬರು ಮಕ್ಕಳು, ಸಹೋದರಿ, ಸಹೋದರ ಹಾಗೂ 6 ಮಂದಿ ಮೊಮ್ಮಕ್ಕಳಿಗೆ ಈ ಹಣವನ್ನು ಹಂಚಲಾಗಿತ್ತು. ಆದರೆ ಆಮ್‌ರ್‍ಸ್ಟ್ರಾಂಗ್‌ ಅವರ ಪತ್ನಿಗೆ ಯಾವುದೇ ಹಣ ಕೊಟ್ಟಿರಲಿಲ್ಲ.

ಈ ಕುರಿತ ದಾಖಲೆಗಳನ್ನು ಇದೀಗ ಅನಾಮಧೇಯ ವ್ಯಕ್ತಿಯೊಬ್ಬರು ಅಮೆರಿಕದ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಗೆ ರವಾನಿಸಿದ್ದು, ಅದು ವಿಸ್ತ್ರೃತ ವರದಿ ಪ್ರಕಟಿಸಿದೆ.

click me!