ಪ್ರತ್ಯೇಕ ಲಿಂಗಾಯತ ಧರ್ಮ: ಪಾಟೀಲ್ರಿಗೆ ಟಾಂಗ್ ನೀಡಿದ ಸಚಿವ

By Suvarna Web DeskFirst Published Mar 24, 2018, 12:34 PM IST
Highlights

ಪ್ರತ್ಯೇಕ ಲಿಂಗಾಯತ ಧರ್ಮ ಅಧಿಸೂಚನೆ ವಿಚಾರವಾಗಿ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ  ಸಚಿವ ಎಂ.ಬಿ ಪಾಟೀಲ್’ಗೆ ಪರೋಕ್ಷ ವಾಗಿ  ಟಾಂಗ್ ನೀಡಿದ್ದಾರೆ.

ಬಾಗಲಕೋಟೆ (ಮಾ.24):  ಪ್ರತ್ಯೇಕ ಲಿಂಗಾಯತ ಧರ್ಮ ಅಧಿಸೂಚನೆ ವಿಚಾರವಾಗಿ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ  ಸಚಿವ ಎಂ.ಬಿ ಪಾಟೀಲ್’ಗೆ ಪರೋಕ್ಷ ವಾಗಿ  ಟಾಂಗ್ ನೀಡಿದ್ದಾರೆ.

ಒಂದು ಮನೆ ಅಂದಮೇಲೆ, ಮನೆ ಹಾಳು ಮಾಡುವವರು ಇರ್ತಾರೆ.  ಉದ್ದಾರ‌  ಮಾಡುವವರು ಇರ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು.  ವೀರಶೈವ ಮಹಾಸಭಾ ಕೈಗೊಂಡ ನಿರ್ಣಯ ಸೂಕ್ತ. ಹಿರಿಯರು ಎನಿಸಿಕೊಂಡವರು  ಮನೆತನ ಮುನ್ನಡೆಸಿಕೊಂಡು ಹೋಗಬೇಕು ಎಂದಿದ್ದಾರೆ.   

ಸಚಿವ ಎಂ.ಬಿ ಪಾಟೀಲ್ ವೀರಶೈವ ಹಾಗೂ ಲಿಂಗಾಯತರಿಗೆ ಸಂಭಂಧವಿಲ್ಲ ಹೇಳಿಕೆಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ್  ಅದು ಅವರವರ ಇಚ್ಛೆ. ಯಾರು ಮನೆ ಹಾಳು ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ. ವೀರಶೈವ ಮಹಾಸಭಾದವರು  ಹಾಗೂ ಈಶ್ವರ ಖಂಡ್ರೆ ಮತ್ತು ಎಲ್ಲ ಮಠಾಧೀಶರು ಸೇರಿ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತಾರೆ. ಪಕ್ಷ ಬೇರೆ, ಸಮಾಜ ರಾಜಕಾರಣವೇ ಬೇರೆ‌.  ಸಮಾಜದಲ್ಲಿ ರಾಜಕಾರಣ ತರುವುದು ಬೇಡ. ಈ ಹಿಂದೆ ವೀರಶೈವ ಲಿಂಗಾಯತ ಪ್ರತೇಕ ಧರ್ಮದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿ ಇನ್ನೂ ರಿಜೆಕ್ಟ್ ಆಗಿಲ್ಲ ಎಂದರು. 

click me!