ಬಾಬಾಗೆ ಹನಿ ಬೆಡ್'ರೂಂ ಗೆಳತಿ!: ಮಾಜಿ ಪತಿ ವಿಶ್ವಾಸ್ ಗುಪ್ತಾ ಸ್ಫೋಟಕ ಆರೋಪ

Published : Sep 23, 2017, 12:56 PM ISTUpdated : Apr 11, 2018, 12:36 PM IST
ಬಾಬಾಗೆ ಹನಿ ಬೆಡ್'ರೂಂ ಗೆಳತಿ!: ಮಾಜಿ ಪತಿ ವಿಶ್ವಾಸ್ ಗುಪ್ತಾ ಸ್ಫೋಟಕ ಆರೋಪ

ಸಾರಾಂಶ

ಡೇರಾ ಸಚ್ಚಾ ಸೌದಾ ಪಂಥದ ‘ರ್ಮಗುರು ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ಆತನ ಅಳಿಯ ವಿಶ್ವಾಸ್ ಗುಪ್ತಾ ಮೌನ ಮುರಿದಿದ್ದು, ಬಾಬಾನ ಮೇಲೆ ಕೆಲವು ಸ್ಫೋಟಕ ಆರೋಪ ಮಾಡಿದ್ದಾನೆ.

ಚಂಡೀಗಢ(ಸೆ.23): ಡೇರಾ ಸಚ್ಚಾ ಸೌದಾ ಪಂಥದ ‘ರ್ಮಗುರು ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ಆತನ ಅಳಿಯ ವಿಶ್ವಾಸ್ ಗುಪ್ತಾ ಮೌನ ಮುರಿದಿದ್ದು, ಬಾಬಾನ ಮೇಲೆ ಕೆಲವು ಸ್ಫೋಟಕ ಆರೋಪ ಮಾಡಿದ್ದಾನೆ.

ಬಾಬಾನ ಸಾಕುಮಗಳು ಎನ್ನಲಾದ ಹನಿಪ್ರೀತ್ ಕೌರ್‌ಳ ವಿಚ್ಛೇದಿತ ಪತಿಯೇ ವಿಶ್ವಾಸ್ ಗುಪ್ತಾ. ಈ ಹಿಂದೆ ಕೋಟ್ ನರ್ಲ್ಲಿ ತನ್ನ ಪತ್ನಿಯ ವಿಚಾರವಾಗಿ ಹೋರಾಡಿದ್ದ ಗುಪ್ತಾ ಈಗ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿ ಬಾಬಾ ಮೇಲೆ ಹರಿಹಾಯ್ದಿದ್ದಾನೆ.

 ‘ಹನಿಪ್ರೀತ್ ರಾಮ್ ರಹೀಂನ ಸಾಕುಮಗಳಲ್ಲ. ಬಾಬಾನ ಜತೆ ನನ್ನ ಪತ್ನಿ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ನನಗೆ ಗೊತ್ತಿತ್ತು. ಆದರೆ ಬಾಬಾನ ಗೂಂಡಾ ಭಕ್ತರು ನನ್ನನ್ನು ಬೆದರಿಸುತ್ತಿದ್ದರು. ಹೀಗಾಗಿ ನನಗೆ ಏನೂ ಮಾಡಿಕೊಳ್ಳಲು ಆಗಲಿಲ್ಲ’ ಎಂದು ಹೇಳಿದ. ‘ಬಾಬಾಗೂ ಹನಿಪ್ರೀತ್‌ಗೂ 13 ವರ್ಷ ವಯಸ್ಸಿನ ಅಂತರವಿದೆ. ಪತ್ನಿಯ ಥರವೇ ಆಕೆಯನ್ನು ಆತ ಇಟ್ಟುಕೊಂಡಿದ್ದ. ಇವತ್ತು ರಾತ್ರಿ ಆಕೆಯನ್ನು ತನ್ನ ಕೋಣೆಗೆ ಕಳಿಸು ಎಂದು ಬಾಬಾ ಹೇಳಿದಾಗ ನನಗೆ ನಿರಾಕರಿಸಲಾಗಲಿಲ್ಲ. ಅವರಿಬ್ಬರೂ ರತಿಕ್ರೀಡೆ ನಡೆಸುತ್ತಿದ್ದುದನ್ನು ನಾನು ನೋಡಿದ್ದೆ’ ಎಂದು ಆತ ಹೇಳಿದ. ಅಲ್ಲದೆ, ಬಾಬಾನ ಬಳಿ ಸದಾ ಬಂದೂಕು ಇರುತ್ತಿತ್ತು ಎಂದು ವಿಶ್ವಾಸ್ ಆರೋಪಿಸಿದ.

 ವಿಶ್ವಾಸ್ ಈ ಬಗ್ಗೆ ಈ ಹಿಂದೆಯೇ ಕೋರ್ಟಲ್ಲಿ ಬಾಬಾ-ಹನಿಪ್ರೀತ್ ಲೈಂಗಿಕ ಸಂಬಂ‘ದ ಬಗ್ಗೆ ಹೇಳಿಕೆ ನೀಡಿದ್ದರೂ, ಆಗ ಆತನ ಹೇಳಿಕೆಗಳು ಅಷ್ಟು ಪ್ರಚಾರ ಪಡೆದಿರಲಿಲ್ಲ. 13ನೇ ವಯಸ್ಸಿನಲ್ಲೇ ಬಾಬಾನ ‘ಕ್ತನಾಗಿದ್ದ ವಿಶ್ವಾಸ್, ಸಿರ್ಸಾದಲ್ಲಿನ ಡೇರಾದಲ್ಲಿಯೇ ಇರುತ್ತಿದ್ದ. ಆದರೆ ಕೆಲವು ವರ್ಷಗಳ ಹಿಂದೆ ಈ ಅನೈತಿಕ ಸಂಬಂ‘ ಬೆಳಕಿಗೆ ಬಂದ ನಂತರ ಅಲ್ಲಿಂದ ಹೊರಬಿದ್ದಿದ್ದ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ