
ಬೆಂಗಳೂರು: ಕೊಠಡಿಯೊಂದರಲ್ಲಿ ಕೂಡಿ ಹಾಕಿದ ನಂತರ ನಿಗದಿತ ಸಮಯದಲ್ಲಿ ತಪ್ಪಿಸಿಕೊಂಡು ಹೊರಹೋಗುವ ಸಾಹಸಮಯ ಕ್ರೀಡೆಯಾದ ‘ಎಸ್ಕೇಪ್ ಗೇಮ್’ ಇದೀಗ ಬ್ರೇಕೌಟ್ ಕಂಪನಿ ಮೂಲಕ ಬೆಂಗಳೂರಿಗೂ ಕಾಲಿಟ್ಟಿದೆ.
ಈಜಿಪುರದ ಇಂಟರ್‌ಮೀಡಿಯಟ್ ರಿಂಗ್ ರಸ್ತೆಯ ಎನ್‌ಎಂಆರ್ ಬಿಲ್ಡಿಂಗ್‌ನಲ್ಲಿ ಮೊಟ್ಟಮೊದಲ ಎಸ್ಕೇಪ್ ಗೇಮ್‌ಗೆ ಬ್ರೇಕೌಟ್ ಕಂಪನಿಯು ಚಾಲನೆ ನೀಡಿದೆ. ಈ ಮೂಲಕ ಕಳೆದ ಒಂದು ವರ್ಷದಲ್ಲಿ ಬ್ರೇಕೌಟ್ ಕಂಪನಿಯು 5 ಫ್ರಾಂಚೈಸಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, 2018ರ ಹೊತ್ತಿಗೆ ಫ್ರಾಂಕ್ ಕಾರ್ಪ್‌ನೊಂದಿಗೆ ಪಾಲುದಾರಿಕೆಯನ್ನು 25ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.
ನಿಜ ಜೀವನದ ಸಾಹಸಮಯ ಕ್ರೀಡೆಯಲ್ಲಿ 6ರಿಂದ ವರ್ಷ60 ವರ್ಷ ಮೀರಿದ ವಯೋಮಾನದವರೂ ಆಡುವಂತೆ ಎಸ್ಕೇಪ್ ಗೇಮ್ ರೂಪಿಸಲಾಗಿದೆ. ರಿಯಲ್ ಲೈಫ್, ಎಸ್ಕೇಪ್ ರೂಮ್ ಗೇಮ್‌ಗಳನ್ನು ವಿಶಿಷ್ಟ ಕಥೆ ಆಧಾರಿತ ಕಲ್ಪನೆಯೊಂದಿಗೆ ಜಾಗತಿಕವಾಗಿ ಅಭಿವೃದ್ಧಿಪಡಿಸಿ ಮತ್ತು ಇಂಟರ್‌ನೆಟ್ ಆಫ್ ಥಿಂಗ್ (ಐಓಟಿ) ತಂತ್ರಜ್ಞಾನದ ಮೂಲಕ ಹೊಸ ವ್ಯಾಖ್ಯಾನ ಬರೆಯುವ ಗುರಿಯನ್ನು ಕಂಪನಿ ಹೊಂದಿದೆ.
3 ವರ್ಷಗಳ ಸತತ ಸಂಶೋಧನೆಯಿಂದ ಅಭಿವೃದ್ಧಿಪಡಿಸಲಾಗಿರುವ ಈ ಗೇಮ್‌ಗಳು ಆಟ ಆಡುವವರಿಗೆ ಸಂಪೂರ್ಣ ಸಾಹಸಮಯ ಅನುಭವ ನೀಡಲಿದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ಯುವ ವಿಶ್ವಾಸವನ್ನು ಕಂಪನಿ ಹೊಂದಿದೆ ಎಂದು ಬ್ರೇಕ್‌ಔಟ್ ಸ್ಥಾಪಕ ಹರೀಶ್ ಮೋಥಿ ಹೇಳಿದ್ದಾರೆ.
2015ರ ಮಾರ್ಚ್‌ನಲ್ಲಿ ಆರಂಭವಾದ ಬ್ರೇಕೌಟ್ ಕಂಪನಿಯು ಎಸ್ಕೇಪ್ ಗೇಮ್ ವಿವಿಧ ರಾಷ್ಟ್ರೀಯರ ಮತ್ತು ವಿವಿಧ ವಯೋಮಾನದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದು ಸಮಾನ ಮನಸ್ಕ ಒಂಟಿ ವ್ಯಕ್ತಿಗಳಿಗೆ ಮತ್ತು ಕುಟುಂಬದವರಿಗೆ, ಕಲಾವಿದರಿಗೆ, ಸಾಂಸ್ಥಿಕ ತರಬೇತಿದಾರರಿಗೆ ಸಮುದಾಯ ಕಾರ್ಯಕ್ರಮದ ಸೂಕ್ತ ತಾಣವಾಗಿಯೂ ಹೊರಹೊಮ್ಮಿದೆ. ಹಲವು ಗ್ರಾಹಕರು, ಒಂದೇ ಸ್ವರೂಪದ ಆಟಗಳಿಗಿಂತ ಭಿನ್ನವಾದ, ಎಲ್ಲಾ ಲಿಂಗದವರೊಂದಿಗೆ ತ್ವರಿತ ಸಂಹವಹನ, ಸಹಯೋಗ ಮತ್ತು ಸಂಪರ್ಕಕ್ಕೆ ಎಸ್ಕೇಪ್ ಗೇಮ್ ರೂಮ್ ಸೂಕ್ತ ಸ್ಥಳ ಎಂದು ಗ್ರಹಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.