
ಬೆಂಗಳೂರು(ಅ.25): ಚೆಂದದ ಹೆಣ್ಣನ್ನ ಕಳುಹಿಸುತ್ತಾರೆ. ಸರಿಯಾದ ಟೈಮಲ್ಲಿ ದಾಳಿ ಮಾಡಿ ಹಣ ಪೀಕುತ್ತಾರೆ. ಹೌದು, ಹೀಗೆ, ಧನವಂತರನ್ನ ಟ್ರ್ಯಾಪ್ ಮಾಡಿ ಬ್ಲ್ಯಾಕ್`ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ತಂಡವನ್ನ ಪೊಲಿಸರು ಪತ್ತೆ ಹಚ್ಚಿದ್ದಾರೆ.
ಬ್ಯಾಟರಾಯನಪುರ ಪೊಲೀಸರು ಯಾವುದೋ ಮಾಹಿತಿ ಕೆದಕುತ್ತಿದ್ದಾಗ ಈ ಖತರ್ನಾಕ್ ಗ್ಯಾಂಗ್`ನ ಸುಳಿವು ಸಿಕ್ಕಿದೆ. ಅಷ್ಟೇ.ಕೈಗೆ ಕೋಳಹಾಕಿ ಎಳೆತಂದಾಗ ಖದೀಮರ ನಿಜ ಬಣ್ಣ ಬಯಲಾಗಿದೆ.
ಜ್ಯೋತಿ ಎನ್ನುವ ಲೇಡಿಯನ್ನ ಮುಂದೆ ಬಿಟ್ಕೊಂಡು ಗಿರಿನಗರದ ಇಟ್ಟುಮಡು ಬಳಿ ಮನೆಯೊಂದರಲ್ಲಿ ಟೀಂ ಡಕಾಯಿತಿ ನಡೆಸಿತ್ತು. ಕಾರ್ಯಾಚರನೆಗಿಳಿದ ಪೊಲೀಸರು ಖತರ್ನಾಕ್ ಟೀಂ ಬಂಧಿಸಿ ಎಳೆತಂದಾಗ ದರೋಡೆಗೆ ಬಳಸುತ್ತಿದ್ದ ಹನಿಟ್ರ್ಯಾಪ್ ಪ್ಲಾನನ್ನ ಒಪ್ಪಿಕೊಂಡಿದ್ದಾರೆ.
ಗಿರಿನಗರದಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ 12 ಮೊಬೈಲ್ ಫೋನ್ಗಳು, ಒಂದು ಕಾರು, ಒಂದು ಚಿನ್ನದ ಸರವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವರ್ತೂರು, ಸುಂಕದಕಟ್ಟೆ, ಜೆ.ಪಿ. ನಗರದಲ್ಲೂ ಕೂಡ ಇದೇ ಟೆಕ್ನಿಕ್ ಬಳಸಿಯೇ ಕಳ್ಳತನ ನಡೆಸಿದ್ದಾರಂತೆ..
ಸದ್ಯಕ್ಕೆ, ನಾಲ್ಕು ಪ್ರಕರಣ ಬೆಳಕಿಗೆ ಬಂದಿವೆ. ಖದೀಮರ ವಿಚಾರಣೆಯಿಂದ ಇನ್ನಷ್ಟು ಬೆಳಕಿಗೆ ಬಂದರೂ ಅಚ್ಚರಿಪಡಬೇಕಿಲ್ಲ. ಕಂಡಕಂಡ ಹೆಣ್ಣಿನ ಹಿಂದೆ ಬಿದ್ದು ಹೋಗುವವರಿಗೆ ಇದೊಂದು ಎಚ್ಚರಿಕೆಯ ಪಾಠ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.