ಸಂಕಷ್ಟಕ್ಕೀಡಾದ ಜೇನು ನೊಣಗಳು!

Published : Dec 17, 2016, 02:51 AM ISTUpdated : Apr 11, 2018, 12:47 PM IST
ಸಂಕಷ್ಟಕ್ಕೀಡಾದ ಜೇನು ನೊಣಗಳು!

ಸಾರಾಂಶ

ಒಂದೊಂದು ಕಟ್ಟಡಗಳಲ್ಲಿ ಎರಡು ಮೂರು ಜೇನುಗೂಡಗಳು ಇರುತ್ತವೆ. ಇತ್ತೀಚೆಗೆ ಜೇನುಗಳ ಸಂಖ್ಯೆ ಇಳಿಮುಖವಾಗಿದೆ. ಕಾರಣ ಗ್ರೇಟರ್ ವ್ಯಾಕ್ಸ್ ಮಾಥ್ ಎನ್ನುವ ಕೀಟ. ವ್ಯಾಕ್ಸ್ ಮಾಥ್ ಕೀಟದ ದಾಳಿಯಿಂದ ಜೇನುಹುಳುಗಳು  ಜಾಗ ಖಾಲಿ ಮಾಡುತ್ತಿದ್ದು ಈಗ ಎಲ್ಲಿ ನೋಡಿದರೂ ಬರೀ ಗೂಡುಗಳು ಕಾಣುತ್ತವೆ. ಬಿಸಿಲಿನ ಪ್ರಮಾಣ ಹೆಚ್ಚಾದಾಗ ಜೇನು ಹುಳುಗಳಿಗೆ ಹೂವುಗಳ ಕೊರತೆಯಾಗುತ್ತದೆ. ಜೇನು ಹುಳುಗಳು ಅಶಕ್ತವಾಗಿರುತ್ತವೆ. ಇದೇ ವೇಳೆ ವ್ಯಾಕ್ಸ್ ಮಾಥ್ ಕೀಟ ಜೇನು ಗೂಡಿಗೆ ಲಗ್ಗೆ ಇಟ್ಟು ತಮ್ಮ ಕಾರ್ಯ ಸಾಧಿಸುತ್ತವೆ ಎಂಬುದು ಕರ್ನಾಟಕ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಕಂಡುಹಿಡದ ಸತ್ಯ

ಧಾರವಾಡ(ಡಿ.17): ಸಿಹಿ ಎನ್ನುವ ಪದದ ಅನ್ವರ್ಥಕವಾಗಿ ಜೇನು ಬಳಸುವುದು  ಸಹಜ. ಇಂಥಹ ಜೇನು ಉತ್ತತ್ತಿ ಮಾಡುವ  ಜೇನು ನೊಣಗಳೇ ಈಗ ಸಂಕಷ್ಟಕ್ಕೆ ಸಿಲುಕಿವೆ. ಹಾಗಾದರೆ ಜೇನು ಹುಳುಗಳಿಗೆ ಬಂದಿರುವ ಆ ಸಂಕಷ್ಟ ಏನು, ಎಲ್ಲಿ ಅಂತೀರಾ ಹಾಗಾಧ್ರೆ ಈ ಸ್ಟೋರಿ ನೋಡಿ

ಧಾರವಾಡ, ವಿದ್ಯಾಕಾಶಿ, ಅರೆ ಮಲೆನಾಡು ಜಿಲ್ಲೆಯಲ್ಲಿ ಯಾವ ಕಡೆ ದೃಷ್ಟಿ ಹಾಯಿಸಿದರೂ ಜೇನು ಗೂಡುಗಳೇ ಕಾಣುತ್ತವೆ. ಗಿಡ-ಮರಗಳು, ಎತ್ತರದ ಕಟ್ಟಡಳು ಜೇನುಗಳ ವಾಸಸ್ಥಾನ. ಅದರಲ್ಲೂ ಯುನಿವರ್ಸಿಟಿ ಕ್ಯಾಂಪ್'​ನಲ್ಲಂತೂ ಜೇನುಗೂಡುಗಳನ್ನು ನೋಡುವುದೇ ನೋಡುವುದೇ ಚೆಂದ.

ಒಂದೊಂದು ಕಟ್ಟಡಗಳಲ್ಲಿ ಎರಡು ಮೂರು ಜೇನುಗೂಡಗಳು ಇರುತ್ತವೆ. ಇತ್ತೀಚೆಗೆ ಜೇನುಗಳ ಸಂಖ್ಯೆ ಇಳಿಮುಖವಾಗಿದೆ. ಕಾರಣ ಗ್ರೇಟರ್ ವ್ಯಾಕ್ಸ್ ಮಾಥ್ ಎನ್ನುವ ಕೀಟ. ವ್ಯಾಕ್ಸ್ ಮಾಥ್ ಕೀಟದ ದಾಳಿಯಿಂದ ಜೇನುಹುಳುಗಳು  ಜಾಗ ಖಾಲಿ ಮಾಡುತ್ತಿದ್ದು ಈಗ ಎಲ್ಲಿ ನೋಡಿದರೂ ಬರೀ ಗೂಡುಗಳು ಕಾಣುತ್ತವೆ. ಬಿಸಿಲಿನ ಪ್ರಮಾಣ ಹೆಚ್ಚಾದಾಗ ಜೇನು ಹುಳುಗಳಿಗೆ ಹೂವುಗಳ ಕೊರತೆಯಾಗುತ್ತದೆ. ಜೇನು ಹುಳುಗಳು ಅಶಕ್ತವಾಗಿರುತ್ತವೆ. ಇದೇ ವೇಳೆ ವ್ಯಾಕ್ಸ್ ಮಾಥ್ ಕೀಟ ಜೇನು ಗೂಡಿಗೆ ಲಗ್ಗೆ ಇಟ್ಟು ತಮ್ಮ ಕಾರ್ಯ ಸಾಧಿಸುತ್ತವೆ ಎಂಬುದು ಕರ್ನಾಟಕ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಕಂಡುಹಿಡದ ಸತ್ಯ

ವಿದ್ಯಾರ್ಥಿಗಳು ಸಂಶೋಧನೆಗೆ ಆರಿಸಿಕೊಂಡಿದ್ದ  154 ಗೂಡುಗಳ ಪೈಕಿ 137 ಗೂಡುಗಳಲ್ಲಿ ಈಗ ಜೇನುಗಳಿರಲಿಲ್ಲವಂತೆ.  ವ್ಯಾಕ್ಸ್ ಮಾಥ್ ಕೀಟ ಗೂಡಿಗೆ ಲಗ್ಗೆ ಇಟ್ಟು ರಿಪೇರಿ ಮಾಡಲಾಗದಷ್ಟು ಕೆಡಿಸಿಬಿಡುತ್ತವಂತೆ. ವಿಧಿಯಿಲ್ಲದೆ ಜೇನು ಹುಳುಗಳು ಆ ಪ್ರದೇಶದಿಂದ ಪಲಾಯನ ಮಾಡುತ್ತವೆ..

ಒಟ್ಟಿನಲ್ಲಿ, ಜೇನುಗೂಡುಗಳಿಂದಲೇ ಪ್ರಸಿದ್ದಿಯಾಗಿದ್ದ ಧಾರವಾಡದಲ್ಲೀಗ ಜೇನುಗಳ ಪ್ರಮಾಣದಲ್ಲಿ ದಿನದಿಂದ ದಿನಕ್ಕೂ ಇಳಿಮುಖವಾಗುತ್ತಿದೆ. ಮುಂದೊಂದು ದಿನ ಜೇನು ಸಂತತಿಯೇ ಜಿಲ್ಲೆಯಿಂದ ತಪ್ಪಿ ಹೋಗುತ್ತೇನೋ ಅನ್ನೋ ಆತಂಕ ಎದುರಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ಸೇಡಿಗಾಗಿ ದ್ವೇಷ ಭಾಷಣ ಕಾಯ್ದೆ ಜಾರಿ: ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಲೇಖನ
ವಾಕ್‌ ಸ್ವಾತಂತ್ರ್ಯಕ್ಕೆ ದ್ವೇಷ ಭಾಷಣ ವಿಧೇಯಕ ವಿರುದ್ಧವಾಗಿಲ್ಲ: ವಿ.ಗೋಪಾಲ ಗೌಡ ಲೇಖನ