ಆಟೋದಲ್ಲಿ ಮರೆತ ಬ್ಯಾಗ್ ಮರಳಿಸಿ ಪ್ರಮಾಣಿಕತೆ ಮೆರೆದ ಚಾಲಕ

Published : Dec 30, 2018, 08:49 AM IST
ಆಟೋದಲ್ಲಿ ಮರೆತ ಬ್ಯಾಗ್ ಮರಳಿಸಿ ಪ್ರಮಾಣಿಕತೆ ಮೆರೆದ ಚಾಲಕ

ಸಾರಾಂಶ

ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕನನ್ನು ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ.

ಬೆಂಗಳೂರು: ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ ಐಷಕ್ ನಿಕಲ್ಸನ್ ಅವರನ್ನು ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ.

ಹಲಸೂರು ಜಂಕ್ಷನ್‌ನಿಂದ ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಲೀಡೋ ಮಾಲ್‌ಗೆ ಐಷಕ್ ಆಟೋದಲ್ಲಿ ಮನೋಜ್ ಭರತ್ ವಾಲ್ ಎಂಬುವರು ಪ್ರಯಾಣಿಸುತ್ತಿದ್ದರು. ಆಗ ಮಾಲ್ ಬಳಿ ಆಟೋ ಇಳಿದು ಹೋಗುವಾಗ ತಾವು ಕುಳಿತುಕೊಂಡಿದ್ದ ಸೀಟಿನಲ್ಲೇ ಬ್ಯಾಗ್‌ನ್ನು ಬಿಟ್ಟು ಹೋಗಿದ್ದರು. 

ಇದನ್ನು ಗಮನಿಸಿದ ಚಾಲಕ ಐಷಕ್, ತಕ್ಷಣವೇ ಆ ಬ್ಯಾಗ್‌ನ್ನು ಪೊಲೀಸ್ ಆಯುಕ್ತರ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಗೆ ತಲುಪಿಸಿದ್ದಾರೆ. ಬಳಿಕ ಎಪಿಆರ್‌ಓ ಕೃಷ್ಣಪ್ಪ, ಬ್ಯಾಗ್ ತೆಗೆದು ನೋಡಿದಾಗ ಅದರಲ್ಲಿ ವಿಸಿಟಿಂಗ್ ಕಾರ್ಡ್ ಪತ್ತೆಯಾಗಿದೆ. ಅದರಲ್ಲಿದ್ದ ಮೊಬೈಲ್ ನಂಬರ್‌ನಿಂದ ಮನೋಜ್ ಅವರನ್ನು ಸಂಪರ್ಕಿಸಿ ಬ್ಯಾಗ್ ಮರಳಿಸಿದ್ದರು. ಆಟೋ ಚಾಲಕನನ್ನು ಆಯುಕ್ತರು ಪ್ರಶಂಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ