ಕಾಡುವ ಡಿಹೈಡ್ರೇಶನ್'ಗೆ ವಿವಿಧ ಪಾನೀಯಗಳು

By Internet DeskFirst Published Sep 11, 2016, 3:46 AM IST
Highlights

ನೀರನ್ನು ಕುಡಿಯಲು ಕೆಲವರಿಗೆ ವಾಕರಿಕೆ ಬಂದಂತೆ ಆಗಬಹುದು. ಆಗ ನೀರಿ ಕುಡಿಯದೇ ದೇಹ ನಿತ್ರಾಣವಾಗುತ್ತದೆ.

ನಿರ್ಜಲೀಕರಣ ಒಂದಿಲ್ಲೊಂದು ರೀತಿಯಲ್ಲಿ ಭಾದಿಸುತ್ತದೆ. ಕಾಡುವ ಈ  ಡಿಹೈಡ್ರೇಶನ್ ತಡೆಯಲು ದೇಹಕ್ಕೆ ಸಾಕಷ್ಟು ನೀರಿನ ಅಗತ್ಯವಿದೆ. ಹಾಗೆಯೇ ನೀರನ್ನು ಕುಡಿಯಲು ಕೆಲವರಿಗೆ ವಾಕರಿಕೆ ಬಂದಂತೆ ಆಗಬಹುದು. ಆಗ ನೀರಿ ಕುಡಿಯದೇ ದೇಹ ನಿತ್ರಾಣವಾಗುತ್ತದೆ. ನಿಮ್ಮ ಈ ಸಮಸ್ಯೆ ನಿವಾರಣೆಗಾಗಿ ಇಲ್ಲಿದೆ ಕೆಲವು ಪಾನೀಯಗಳು.

ತಾಜಾ ಗಿಡಮೂಲಿಕೆಗಳು ಮತ್ತು ಹಣ್ಣಿನ ಚೂರುಗಳನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ಬೇಸಿಗೆಯ ಬಿರುಬಿಸಿಲಿನಲ್ಲಿ ಉಂಟಾಗುವ ನಿರ್ಜಲೀಕರಣವನ್ನು ದೂರವಾಗಿಸಬಹುದು.

ಪುದೀನಾ, ಕ್ಯಾಮೊಮೈಲ್, ಏಲಕ್ಕಿ, ಮಲ್ಲಿಗೆ ಮುಂತಾದ ಸುಗಂಧಭರಿತ ಹೂವುಗಳನ್ನು ಉಪಯೋಗಿಸಿ ಅದರ ಜೊತೆಗೆ ಕೆಲವು ಐಸ್ ತುಂಡುಗಳನ್ನು ಸೇರಿಸಿ ಸೇರಿಸಿ ಚಹಾ ಮಾಡಿ ಕುಡಿಯುವುದರಿಂದ ನಿರ್ಜಲೀಕರಣ ದೂರವಾಗುತ್ತದೆ.

ಪೌಷ್ಟಿಕತೆ ಹೊಂದಿರುವ ತಾಜಾ ಹಣ್ಣುಗಳ ರಸವನ್ನು ತೆಗೆದು, ಸ್ವಲ್ಪ ಸಕ್ಕರೆ ಸೇರಿಸಿ ಅದನ್ನು ಕುಡಿಯುವುದರಿಂದಲೂ ನಿರ್ಜಲೀಕರಣ ದೂರವಾಗುತ್ತದೆ.

ಬೇಸಿಗೆಯಲ್ಲಿ ಸೌತೆಕಾಯಿ ನೀರನ್ನು ಕುಡಿಯುವುದರಿಂದ ಅಥವಾ ಎಳೆಯದಾಗಿರುವ ಸೌತೆಕಾಯಿಯ ಚೂರುಗಳನ್ನು ತಿನ್ನುತ್ತಿರುವುದರಿಂದ ದೇಹ ತಂಪಾಗಿರುತ್ತದೆ ಜೊತೆಗೆ ನಿರ್ಜಲೀಕರಣವೂ ದೂರವಾಗುತ್ತದೆ.

click me!