
ಒತ್ತಡ, ಚಿಂತೆ, ಹಾರ್ಮೋನುಗಳ ಅಸಮತೋಲನ,ಮತ್ತು ಇತರ ಇನ್ಯಾವುದೋ ಸಮಸ್ಯೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬಹಳ ಮಂದಿ ಸರಿಯಾಗಿ ನಿದ್ರೆ ಬಾರದೆ ವಿವಿಧ ಖಾಯಿಲೆಗಳಿಗೆ ತುತ್ತಾಗುವ ಸಂಭವವಿದೆ. ಸುಖವಾಗಿ ನಿದ್ರೆ ಮಾಡುವುದಕ್ಕಾಗಿ ಇಲ್ಲಿವೆ ನೋಡಿ ಕೆಲವು ಸಲಹೆಗಳು.
ಎಲೆಕ್ಟ್ರಾನಿಕ್ ಉಪಕರಣಗಳು ನೀವು ಮಲಗುವ ಜಾಗದಿಂದ ದೂರವಿರಲಿ ಮತ್ತು ಮೊಬೈಲ್, ಟಿವಿ, ಕಂಪ್ಯೂಟರ್ ಗಳನ್ನು ಆಫ್ ಮಾಡಿ ಮಲಗಿ.
ನೀವು ಮಲಗಲು ಮತ್ತು ಬೆಳಗ್ಗೆ ಏಳುವುದಕ್ಕೆ ಒಂದು ವೇಳಾಪಟ್ಟಿ ನಿಗದಿಗೊಳಿಸಿ. ಆರಂಭದಲ್ಲಿ ಇದು ಕಷ್ಟವೆನಿಸಬಹುದು. ಆದರೆ ನೀವು ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಲೇ ಬೇಕೆಂಬ ಸಂಕಲ್ಪ ಮಾಡಿಕೊಂಡು ವೇಳಾಪಟ್ಟಿ ಮಾಡಿಕೊಳ್ಳಿ ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಮತ್ತು ನಿಮ್ಮ ನಿದ್ರಾಹೀನತೆ ದೂರವಾಗಲು ಸಹಾಯವಾಗುತ್ತದೆ.
ನೀವು ಮಲಗುವ ಕೋಣೆಯನ್ನು ಅತೀ ತಂಪು ಅಲ್ಲದಂತೆ ಅತೀ ಸೆಕೆಯೂ ಇರದಂತೆ ಸಿದ್ದ ಮಾಡಿಕೊಳ್ಳಿ, ನಿಮ್ಮ ನಿದ್ರೆಗೆ ತಕ್ಕಂತೆ ಕೊಠಡಿ ಪರಿಸರವನ್ನು ನಿರ್ಮಾಣ ಮಾಡಿಕೊಳ್ಳಿ.
ನೀವು ಮಲಗಲು ಬೇಕಾಗುವಂತೆ ಹಾಸಿಗೆ ದಿಂಬು, ಬೆಡ್ ಶೀಟ್ ಗಳನ್ನು ಬಳಸಿ. ಅತೀ ಮೆದು ಅಥವಾ ಗಟ್ಟಿ ಇರುವ ಹಾಸಿಗೆ ದಿಂಬುಗಳನ್ನು ಬಳಸಬೇಡಿ.
ನೀವು ಮಲಗುವ ಮೊದಲು ಯಾವುದೇ ಭಯಾನಕ ಸಿನಿಮಾಗಳನ್ನಾಗಲೀ ದೃಶ್ಯಗಳನ್ನಾಗಲೀ ನೋಡಬೇಡಿ. ಮಲಗುವ 1 ಗಂಟೆ ಮೊದಲು ಟಿವಿ ನೋಡುವುದಾಗಲೀ, ಮೊಬೈಲ್, ಕಂಪ್ಯೂಟರ್ ಬಳಸುವುದಾಗಲೀ, ಕಛೇರಿಯ ಕೆಲಸಗಳನ್ನು ಮಾಡುವುದಾಗಲೀ ಮಾಡಬೇಡಿ.
ಪ್ರತಿ ನಿತ್ಯ ವ್ಯಾಯಾಮ ಮಾಡುವುದನ್ನು ರೂಡಿಸಿಕೊಳ್ಳಿ, ಮಲಗುವ 1 ತಾಸು ಅಥವಾ ಅದಕ್ಕಿಂತ ಮೊದಲೇ ಊಟ ಮಾಡಿ. ರಾತ್ರಿ ಆದಷ್ಟು ಮಿತ ಆಹಾರವನ್ನು ಸೇವಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.