ಕೂಡಲ ಸಂಗಮ: ಪುಣ್ಯಸ್ನಾನಕ್ಕೂ ಬರದ ಬಿಸಿ

By Web DeskFirst Published 16, Jan 2019, 10:50 AM IST
Highlights

ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮವಾದ ಕೂಡಲಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಬಂದ ಲಕ್ಷಾಂತರ ಮಂದಿಗೆ ಬರದ ಬಿಸಿ ಮುಟ್ಟಿತು. ಪರಿಣಾಮ ಸ್ನಾನ ಮಾಡಲು ನೀರು ಲಭಿಸದೆ ಭಕ್ತರು ಸಮಸ್ಯೆ ಎದುರಿಸಿದರು.

ಹುನಗುಂದ (ಜ. 16): ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮವಾದ ಕೂಡಲಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಬಂದ ಲಕ್ಷಾಂತರ ಮಂದಿಗೆ ಬರದ ಬಿಸಿ ಮುಟ್ಟಿತು. ಪರಿಣಾಮ ಸ್ನಾನ ಮಾಡಲು ನೀರು ಲಭಿಸದೆ ಭಕ್ತರು ಸಮಸ್ಯೆ ಎದುರಿಸಿದರು.

ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಇತರ ರಾಜ್ಯಗಳಿಂದ ಪುಣ್ಯಸ್ನಾನಕ್ಕೆಂದು ಮಂಗಳವಾರ ಲಕ್ಷಾಂತರ ಭಕ್ತರು ಆಗಮಿಸಿದ್ದರು. ನದಿಯಲ್ಲಿ ನೀರು ಬರಿದಾಗಿದ್ದರಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿರ್ಮಿಸಿದ್ದ ತಾತ್ಕಾಲಿಕ ಸ್ನಾನಘಟ್ಟಗಳಲ್ಲಿ ಸರದಿಯಲ್ಲಿ ನಿಂತು ಸ್ನಾನ ಮಾಡಿದರು.

ಬಹುತೇಕರು ಸರದಿಯಲ್ಲಿ ನಿಲ್ಲುವ ಗೊಡವೆ ಬೇಡವೆಂದು ಬಸವಣ್ಣನವರ ಐಕ್ಯ ಮಂಟಪದ ಬಳಿ ಸೇರಿ ನದಿಯ ತಗ್ಗು ಪ್ರದೇಶದಲ್ಲಿ ನಿಂತ ರಾಡಿ ನೀರಿನಲ್ಲಿ ಸ್ನಾನ ಮಾಡಿದರೆ, ಕೆಲವರು ಸಂಗಮದ ಸುತ್ತ-ಮುತ್ತ ಇರುವ ತೋಟದ ಬಾವಿಯಲ್ಲಿ ಸ್ನಾನ ಮಾಡಿದರು.

Last Updated 16, Jan 2019, 10:50 AM IST