ಅದಿರು ಸುಂಕ: ಎಚ್‌ಡಿಕೆ ಮಾತಿಗೆ ಮೋದಿ ಮನ್ನಣೆ?

By Web DeskFirst Published Jan 16, 2019, 10:33 AM IST
Highlights

‘ಸ್ಥಳೀಯ ಕಬ್ಬಿಣ ಅದಿರಿಗೆ ಹೆಚ್ಚು ಬೆಲೆ ಹಾಗೂ ಬೇಡಿಕೆ ಬರುವಂತಾಗಲು ವಿದೇಶದಿಂದ ಆಮದಾಗುವ ಅದಿರಿಗೆ ಹಾಕಲಾಗುವ ಸುಂಕ ಹೆಚ್ಚಿಸಿ’ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಡಿದ ಆಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 

ನವದೆಹಲಿ (ಜ. 16): ‘ಸ್ಥಳೀಯ ಕಬ್ಬಿಣ ಅದಿರಿಗೆ ಹೆಚ್ಚು ಬೆಲೆ ಹಾಗೂ ಬೇಡಿಕೆ ಬರುವಂತಾಗಲು ವಿದೇಶದಿಂದ ಆಮದಾಗುವ ಅದಿರಿಗೆ ಹಾಕಲಾಗುವ ಸುಂಕ ಹೆಚ್ಚಿಸಿ’ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಡಿದ ಆಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

‘ಉಕ್ಕು ಉತ್ಪಾದನೆಯಲ್ಲಿ ಬಳಸಲಾಗುವ ಅದಿರು ಆಮದು ಸುಂಕ ಹೆಚ್ಚಿಸುವ ಒತ್ತಾಯ ನಮ್ಮ ಪರಿಶೀಲನೆಯಲ್ಲಿದೆ. ವಿವಿಧ ಸಚಿವಾಲಯಗಳು ಇದನ್ನು ಪರಿಶೀಲಿಸುತ್ತಿವೆ’ ಎಂದು ಕೇಂದ್ರ ಸರ್ಕಾರದ ಮೂಲಗಳು ಮಂಗಳವಾರ ಹೇಳಿವೆ.

ಇತ್ತೀಚೆಗೆ ಕುಮಾರಸ್ವಾಮಿ ಅವರು ಮೋದಿ ಅವರಿಗೆ ಪತ್ರ ಬರೆದು, ‘ವಿದೇಶದಿಂದ ಆಮದಾಗುವ ಅದಿರನ್ನು ಉಕ್ಕು ಕಂಪನಿಗಳು ತರಿಸಿಕೊಳ್ಳುತ್ತಿರುವ ಕಾರಣ ದೇಶೀ ಅದಿರಿಗೆ ಬೆಲೆ ಇಲ್ಲವಾಗಿದೆ. ಹೀಗಾಗಿ ವಿದೇಶಿ ಅದಿರಿಗೆ ಸುಂಕ ಹೆಚ್ಚಿಸಿದರೆ ದೇಶೀ ಅದಿರಿಗೆ ಬೆಲೆ ಬರುತ್ತದೆ’ ಎಂದಿದ್ದರು. ಈಗ ವಿದೇಶೀ ಅದಿರಿಗೆ ಶೇ.2.5 ಸುಂಕವಿದೆ.

click me!