ದೋಸ್ತಿ ಸರ್ಕಾರಕ್ಕೆ 3ನೇ ಸಂಕಟ: ಮತ್ತೊಬ್ಬ ಕೈ ಶಾಸಕನಿಂದ ರಾಜೀನಾಮೆ ಬೆದರಿಕೆ

By Web Desk  |  First Published Jul 6, 2019, 9:20 AM IST

ಕಾಂಗ್ರೆಸ್ 3ನೇ ವಿಕೆಟ್ ಪತನವಾಗುತ್ತಾ..?| ಇಬ್ಬರ ರಾಜೀನಾಮೆ ಬೆನ್ನಲ್ಲೆ ಮತ್ತೊಂದು ಸಂಕಷ್ಟ| ರಾಜೀನಾಮೆ ಲಿಸ್ಟ್ನಲ್ಲಿ ಕಾಂಗ್ರೆಸ್ನ ಹೊಸ ಹೆಸರು| ಸಂಪುಟ ಸಭೆ ನಡೆಯೋದನ್ನೇ ಕಾಯ್ತಿದ್ದಾರಂತೆ ಶಾಸಕರು| ಬೆಡಿಕೆ ಈಡೇರದಿದ್ದರೆ ರಾಜೀನಾಮೆ ಶತಃಸಿದ್ಧ ಎಂದ ಶಾಸಕರು


ಚಿಕ್ಕಬಳ್ಳಾಪುರ[ಜು.06]: ಇಬ್ಬರ ರಾಜೀನಾಮೆ ಬೆನ್ನಲ್ಲೆ ಸೋಸ್ತಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜೀನಾಮೆ ಲಿಸ್ಟ್ನಲ್ಲಿ ಮತ್ತೊಬ್ಬ ಕಾಂಗ್ರೆಸ್ ಶಾಸಕನ ಹೆಸರು ಸೇರ್ಪಡೆಯಾಗಿದ್ದು, ತಮ್ಮ ಕ್ಷೇತ್ರಕ್ಕೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಷ್ಟಕ್ಕೂ ರಾಜೀನಾಮೆ ನೀಡಲು ಸಜ್ಜಾದ ಮೂರನೇ ಶಾಸಕ ಯಾರು? 

ಕಾಂಗ್ರೆಸ್ ನಾಯಕ, ಬಾಗೇಪಲ್ಲಿ ಶಾಸಕ  ಎಸ್. ಎನ್. ಸುಬ್ಬಾರೆಡ್ಡಿ ಸದ್ಯ ದೋಸ್ತಿ ಸರ್ಕಾರದ ಟೆನ್ಶನ್ ಹೆಚ್ಚಿಸಿದ್ದಾರೆ. ಎಚ್ಎನ್ ವ್ಯಾಲಿ ನೀರಿನ ವಿಚಾರದಲ್ಲಿ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿರುವ ಸುಬ್ಬಾರೆಡ್ಡಿ, ಬಾಗೇಪಲ್ಲಿಗೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಚೇಳೂರಿನಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಗುಡುಗಿದ್ದಾರೆ.

Tap to resize

Latest Videos

ವೈಯಕ್ತಿಕ ಬೆಳವಣಿಗೆ, ವ್ಯವಹಾರಕ್ಕಾಗಿ ಶಾಸಕನಾಗಿಲ್ಲ, ಜನರ ಸಮಸ್ಯೆಗೆ ಸ್ಪಂದಿಸಲು ಶಾಸಕನಾಗಿದ್ದೇನೆ. ನೀರು ಬಿಡಿ, ಇಲ್ಲವಾದ್ರೆ ರಾಜೀನಾಮೆ ತೆಗೆದುಕೊಳ್ಳಿ ಎಂದಿರುವ ಕೈ ಶಾಸಕ ಕ್ಯಾಬಿನೆಟ್ ಸಭೆ ನಡೆಯಲು ಕಾಯುತ್ತಿದ್ದೇನೆ. ಒಂದು ವೇಳೆ ಈ ಸಭೆಯಲ್ಲಿ ತನ್ನ ಬೇಡಿಕೆ ಈಡೇರದಿದ್ದಲ್ಲ ರಾಜೀನಾಮೆ ನೀಡುವುದು ಖಚಿತ ಎಂದಿದ್ದಾರೆ.

click me!