ಕೇಂದ್ರದ ಹೊಡೆತಕ್ಕೆ ಪ್ರತ್ಯೇಕತಾವಾದಿಗಳು ತತ್ತರ

Published : Jul 06, 2019, 08:28 AM IST
ಕೇಂದ್ರದ ಹೊಡೆತಕ್ಕೆ ಪ್ರತ್ಯೇಕತಾವಾದಿಗಳು ತತ್ತರ

ಸಾರಾಂಶ

ಕೇಂದ್ರದ ಹೊಡೆತಕ್ಕೆ ಪ್ರತ್ಯೇಕತಾವಾದಿಗಳು ತತ್ತರ| ಕಾಶ್ಮೀರಿ ಪಂಡಿತರನ್ನು ಮರಳಿ ಕಾಶ್ಮೀರಕ್ಕೆ ಕರೆತರಲು ಯೋಜನೆ| ಪ್ರತ್ಯೇಕತಾವಾದಿಗಳಿಂದ ಸಮಿತಿ ರಚನೆ, ಪಂಡಿತರ ಜೊತೆ ಚರ್ಚೆ

ಶ್ರೀನಗರ[ಜು.06]: ಭದ್ರತೆ ವಾಪಸ್‌, ಉಗ್ರ ಕೃತ್ಯಕ್ಕೆ ಹಣ ಪೂರೈಕೆ ಬಂದ್‌, ಹಲವು ಪ್ರತ್ಯೇಕತಾವಾದಿ ನಾಯಕರನ್ನು ಬಂಧಿಸಿದ ಕೇಂದ್ರ ಸರ್ಕಾರದ ಕ್ರಮಗಳು ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಜಂಘಾಬಲವನ್ನೇ ಉಡುಗಿಸಿರುವುದು ಮೊದಲ ಬಾರಿಗೆ ಗೋಚರವಾಗಿದೆ.

ಸತತ ಉಗ್ರ ದಾಳಿಯ ಮೂಲಕ ರಾಜ್ಯದಲ್ಲಿನ ಕಾಶ್ಮೀರಿ ಪಂಡಿತರು, ತಮ್ಮ ನೆಲೆ ತೊರೆಯುವಂತೆ ಮಾಡಿದ್ದ ಪ್ರತ್ಯೇಕತಾವಾದಿಗಳು, ಇದೀಗ ಅದೇ ಕಾಶ್ಮೀರಿ ಪಂಡಿತರನ್ನು ರಾಜ್ಯಕ್ಕೆ ಮರಳಿ ಕರೆತರಲು ಯೋಜನೆ ರೂಪಿಸಿದ್ದಾರೆ. ಅದಕ್ಕೆಂದೇ ಅವರೀಗ ಸಮಿತಿಯೊಂದನ್ನು ರಚಿಸಿದ್ದಾರೆ. ಗುರುವಾರ ಸಮಿತಿಯ ಸದಸ್ಯರು ಕಾಶ್ಮೀರಿ ಪಂಡಿತರ ಮುಖಂಡ ಸತೀಶ್‌ ಮಹಲ್ದರ್‌ ತಂಡದ ಜೊತೆ ಸಭೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತ್ಯೇಕತಾವಾದಿ ಮುಖಂಡ ಮಿರ್ವಾಯಿಜ್‌ ಉಮರ್‌ ಫಾರೂಕ್‌, ಇದಕ್ಕೂ ಮುನ್ನ ಕೂಡ ನಾವು ಬೇರೆ ಸ್ಥಳದಲ್ಲಿ ಪಂಡಿತರ ಜೊತೆ ಸಭೆ ನಡೆಸಿದ್ದೇವೆ. ಹೀಗಾಗಿ ಇದು ಎರಡನೇ ಸಭೆ ಎಂದು ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತರನ್ನು ಪುನಃ ಕರೆಯಿಸಿಕೊಳ್ಳುವುದು ಮತ್ತು ಎರಡೂ ಸಮುದಾಯಗಳ ನಡುವೆ ಪರಸ್ಪರ ವಿಶ್ವಾಸ ಬೆಳೆಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ ಎಂದು ಪ್ರತ್ಯೇಕತಾವಾದಿಗಳೇ ತಿಳಿಸಿದ್ದಾರೆ. ಪಂಡಿತರನ್ನು ಪುನಃ ಕಾಶ್ಮೀರಕ್ಕೆ ಕರೆಯಿಸಿಕೊಂಡರೆ, ಕೇಂದ್ರದ ಕೆಂಗಣ್ಣಿನಿಂದ ಪಾರಾಗಬಹುದು ಎಂಬುದು ಪ್ರತ್ಯೇಕತಾವಾದಿಗಳ ಯೋಜನೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !