ಇಲ್ಲಿ ಕೊನೆಗೂ ಗರ್ಭಪಾತ ಸಕ್ರಮ

By Web DeskFirst Published Dec 15, 2018, 7:58 AM IST
Highlights

ಗರ್ಭಪಾತವನ್ನು ಸಕ್ರಮಗೊಳಿಸಿ ಕೊನೆಗೂ ಇಲ್ಲಿನ ಸಂಸತ್ತು ಐತಿಹಾಸಿಕ ಮಸೂದೆ ಅಂಗೀಕರಿಸಿದೆ. ಭಾರತೀಯ ಮೂಲಕ ಗರ್ಭಿಣಿ ಸಾವನ್ನಪ್ಪಿದ ಬಳಿಕ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಐರ್ಲೆಂಟ್ ಮಸೂದೆಯನ್ನು ಬದಲಾಯಿಸಲಾಗಿದೆ. 

ಲಂಡನ್‌ :  ಗರ್ಭಪಾತವನ್ನು ಸಕ್ರಮಗೊಳಿಸಿ ಕೊನೆಗೂ ಐರ್ಲೆಂಡ್‌ ಸಂಸತ್ತು ಐತಿಹಾಸಿಕ ಮಸೂದೆ ಅಂಗೀಕರಿಸಿದೆ. ಗರ್ಭಿಣಿಯಾಗಿದ್ದ ಭಾರತೀಯ ಮೂಲದ ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ ಅವರ ಸಾವಿನ ಪ್ರಕರಣದಿಂದ ಎಚ್ಚೆತ್ತ ದೇಶ, ಈ ಘಟನೆ ಸಂಭವಿಸಿ 6 ವರ್ಷಗಳ ನಂತರ ಶಾಸನ ಜಾರಿಗೆ ತಂದಿದೆ.

ಬೆಳಗಾವಿ ಮೂಲದ ಡಾ. ಸವಿತಾ ಹಾಲಪ್ಪನವರ ಅವರು ಗರ್ಭಧರಿಸಿದ ಸಂದರ್ಭದಲ್ಲಿ, ತೊಂದರೆ ಅನುಭವಿಸಿದ್ದರು. ಅವರಿಗೆ ಗರ್ಭಪಾತ ಅನಿವಾರ್ಯವಾಗಿತ್ತು. ಆದರೆ ಕ್ಯಾಥೋಲಿಕ್‌ ಸಂಪ್ರದಾಯ ಅನುಸರಿಸುವ ಹಾಲೆಂಡ್‌ನಲ್ಲಿ ಗರ್ಭಪಾತಕ್ಕೆ ಈವರೆಗೂ ನಿಷೇಧ ಇತ್ತು. ಈ ಹಿನ್ನೆಲೆಯಲ್ಲಿ ಅವರ ಗರ್ಭಪಾತಕ್ಕೆ ವೈದ್ಯರು ನಿರಾಕರಿಸಿದ್ದರು. ಹೀಗಾಗಿ ಇದು ಗರ್ಭಿಣಿ ಸವಿತಾ ಸಾವಿಗೆ ಕಾರಣವಾಗಿತ್ತು. ಗರ್ಭಪಾತ ಮಾಡಿದ್ದರೆ ಸವಿತಾ ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು.

ಈ ಪ್ರಕರಣ ವಿಶ್ವಾದ್ಯಂತ ಆಕ್ರೋಶದ ಅಲೆ ಎಬ್ಬಿಸಿತ್ತಲ್ಲದೇ, ಐರ್ಲೆಂಡ್‌ನ ಓಬೀರಾಯನ ಕಾಲದ ಗರ್ಭಪಾತ ನಿಷೇಧ ಕಾನೂನು ತಿದ್ದುಪಡಿ ಆಗಲೇಬೇಕು. ಅನಿವಾರ್ಯ ಸಂದರ್ಭದಲ್ಲಿ ಗರ್ಭಪಾತಕ್ಕೆ ಅನುವು ಮಾಡಿಕೊಡಲೇಬೇಕು ಎಂಬ ಒತ್ತಾಯ ಹೆಚ್ಚಿತ್ತು.

ಮೇನಲ್ಲಿ ಈ ಕುರಿತು ಮಂಡಿಸಲಾದ ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಮತಕ್ಕೆ ಹಾಕಿದಾಗ ಶೇ.66.4 ಸಂಸದರು ಗರ್ಭಪಾತ ಸಕ್ರಮಗೊಳಿಸಬೇಕೆಂಬ ವಿಧೇಯಕದ ಪರ ಮತ ಹಾಕಿದರು. ‘ಇದು ಐತಿಹಾಸಿಕ ಪ್ರಸಂಗ’ ಎಂದು ಭಾರತೀಯ ಮೂಲದ ಐರ್ಲೆಂಡ್‌ ಅಧ್ಯಕ್ಷ ಡಾ. ಲಿಯೋ ವರ್ದಾಕರ್‌ ಹರ್ಷಿಸಿದ್ದಾರೆ.

click me!