ಮತಾಂತರ ಆರೋಪ: ಹಿಂದುತ್ವ ಸಂಘಟನೆಯಿಂದ ಚರ್ಚ್’ನಲ್ಲಿ ಪ್ರಾರ್ಥನೆಗೆ ಅಡ್ಡಿ

By Suvarna Web DeskFirst Published Apr 8, 2017, 3:55 PM IST
Highlights

10 ಅಮೆರಿಕನ್ ಪ್ರಜೆಗಳು ಸೇರಿದಂತೆ ಸುಮಾರು 150 ಮಂದಿ ಚರ್ಚ್’ನಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾಗ, ಅಲ್ಲಿಗೆ ಪೊಲೀಸರೊಂದಿಗೆ ನುಗ್ಗಿದ ಹಿಂದೂ ಯುವವಾಹಿನಿ ಸಂಘಟನೆ ಕಾರ್ಯಕರ್ತರು ಮತಾಂತರ ನಡೆಯುತ್ತಿದೆಯೆಂದು ಆರೋಪಿಸಿದ್ದಾರೆ.

ಮಹಾರಾಜಗಂಜ್, ಉತ್ತರಪ್ರದೇಶ (.08): ಚರ್ಚ್’ನಲ್ಲಿ ನಡೆಯುತ್ತಿದ್ದ ಪ್ರಾರ್ಥನೆಗಳಿಗೆ ಹಿಂದುತ್ವ ಸಂಘಟನೆಯೊಂದು ಅಡ್ಡಿಪಡಿಸಿರುವ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್’ನಲ್ಲಿ ನಡೆದಿದೆ. ವಿಶೇಷವೆಂದರೆ  ಹಿಂದೂ ಯುವ ವಾಹಿನಿ ಎಂಬ ಆ ಸಂಘಟನೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2002ರಲ್ಲಿ ಸ್ಥಾಪಿಸಿದ್ದಾರೆ.

10 ಅಮೆರಿಕನ್ ಪ್ರಜೆಗಳು ಸೇರಿದಂತೆ ಸುಮಾರು 150 ಮಂದಿ ಚರ್ಚ್’ನಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾಗ, ಅಲ್ಲಿಗೆ ಪೊಲೀಸರೊಂದಿಗೆ ನುಗ್ಗಿದ ಹಿಂದೂ ಯುವವಾಹಿನಿ ಸಂಘಟನೆ ಕಾರ್ಯಕರ್ತರು ಮತಾಂತರ ನಡೆಯುತ್ತಿದೆಯೆಂದು ಆರೋಪಿಸಿದ್ದಾರೆ.

ಹಣದ ಅಮಿಷವೊಡ್ಡಿ ಕ್ರೈಸ್ತ ಮಿಷನರಿಗಳು ಮುಗ್ಧ ಹಿಂದೂಗಳನ್ನು ಮತಾಂತರಿಸುತ್ತಾರೆ, ಅಮೆರಿಕಾ ಪ್ರಜೆಗಳು ಉಪಸ್ಥಿತಿಯಿಂದ ಮತಾಂತರ ನಡೆಯುತ್ತಿರುವುದು ಖಚಿತವಾಗಿದೆಯೆಂದು ಸಂಘಟನೆಯ ಮುಖಂಡರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಅಮೆರಿಕನ್ ಪ್ರಜೆಗಳ ಪ್ರವಾಸ-ದಾಖಲೆಗಳನ್ನು ಪರಿಶೀಲಿಸಿ ಬಿಟ್ಟಿದ್ದಾರೆ.

ಆದರೆ ಕ್ರೈಸ್ತ ಪಾದ್ರಿಗಳು ಮತಾಂತರ ರೋಪವನ್ನು ನಿರಾಕರಿಸಿದ್ದಾರೆ. ಇಲ್ಲಿ ಪ್ರಾರ್ಥನೆಗಳನ್ನು ಬಿಟ್ಟು ಬೇರಾವುದೇ ಚಟುವಟಿಕೆಗಳು ನಡೆಯುತ್ತಿಲ್ಲವೆಂದು ಹೇಳಿದ್ದಾರೆ.

ಚರ್ಚ್’ನಲ್ಲಿ ಮತಾಂತರ ನಡೆದಿಲ್ಲ, ಕೇವಲ ಪ್ರಾರ್ಥನೆ ನಡೆಯುತ್ತಿತ್ತು. ಆದರೆ ವಿದೇಶಿ ಪ್ರಜೆಗಳು ಭೇಟಿ ನಿಡುವ ಬಗ್ಗೆ ಮೊದಲೇ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು ಎಂದು ಮಹಾರಾಜಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕಉಮಾರ್ ತಿಳಿಸಿದ್ದಾರೆ.

click me!