ಮ್ಯಾಕ್ಸ್'ವೆಲ್,ಮಿಲ್ಲರ್ ಅಬ್ಬರ: ಪುಣೆ ಮಣಿಸಿದ ಪಂಜಾಬ್

By Suvarna Web DeskFirst Published Apr 8, 2017, 2:43 PM IST
Highlights

ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ ನಾಯಕ ಸ್ಟಿವನ್ ಸ್ಮಿತ್ ಮತ್ತು ರಹಾನೆ ಜೋಡಿ 6 ಓವರ್'ಗಳಲ್ಲಿ 36 ರನ್'ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಎಡಗೈ ವೇಗಿ ನಟರಾಜನ್ ರಹಾನೆಯನ್ನು ಔಟ್ ಮಾಡಿದ ನಂತರ ಬ್ಯಾಟಿಂಗ್ ಆರಂಭಿಸಿದ ಸ್ಟೋಕ್ಸ್ ಸಿಕ್ಸ್'ರ್, ಬೌಂಡರಿಗಳಿಂದ ತಂಡದ ಮೊತ್ತವನ್ನು ವೇಗವಾಗಿ ಹೆಚ್ಚಿಸಿದರು. ಈ ಸಂದರ್ಭದಲ್ಲಿ ನಾಯಕ ಸ್ಮಿತ್ 26 ರನ್'ಗಳಿಸಿ ಸ್ಟೋಯ್'ನಿಸ್ ಬೌಲಿಂಗ್'ನಲ್ಲಿ ವಿಕೇಟ್ ಒಪ್ಪಿಸಿದರು.

ಇಂಧೋರ್(ಏ.08): ಮ್ಯಾಕ್ಸ್'ವೆಲ್ ಆರ್ಭಟ ಹಾಗೂ ಮಿಲ್ಲರ್ ಸಮಯೋಜಿತ ಆಟದ ನೆರವಿನಿಂದ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ರೈಸಿಂಗ್ ಪುಣೆ ಸೂಪರ್ ಜೈಂಟ್ ಟೀಂ'ಅನ್ನು 6 ವಿಕೇಟ್'ಗಳಿಂದ ಸೋಲಿಸಿದೆ.

ಇಂಧೋರ್'ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ'ನಲ್ಲಿ ನಡೆದ ಐಪಿಎಲ್'ನ 10ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್'ನ ನಾಯಕ ಮ್ಯಾಕ್ಸ್'ವೆಲ್ ಪುಣೆ ತಂಡಕ್ಕೆ ಬ್ಯಾಟಿಂಗ್'ಗೆ ಆಹ್ವಾನಿಸಿದರು. ಆರಂಭ ಆಟಗಾರರಾಗಿ ಕಣಕ್ಕಿಳಿದ ಅಜಿಂಕ್ಯಾ ರಹಾನೆ ಹಾಗೂ ಮಾಯಾಂಕ್ ಅಗರ್'ವಾಲ್ ಜೋಡಿಗೆ ವೇಗದ ಬೌಲರ್ ಸಂದೀಪ್ ಶರ್ಮಾ ಮೊದಲ ಆಘಾತ ನೀಡಿದರು.ಮಯಾಂಕ್ ಶೂನ್ಯದೊಂದಿಗೆ ಪೆವಿಲಿಯನ್'ಗೆ ತೆರಳಿದರು.

ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ ನಾಯಕ ಸ್ಟಿವನ್ ಸ್ಮಿತ್ ಮತ್ತು ರಹಾನೆ ಜೋಡಿ 6 ಓವರ್'ಗಳಲ್ಲಿ 36 ರನ್'ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಎಡಗೈ ವೇಗಿ ನಟರಾಜನ್ ರಹಾನೆಯನ್ನು ಔಟ್ ಮಾಡಿದ ನಂತರ ಬ್ಯಾಟಿಂಗ್ ಆರಂಭಿಸಿದ ಸ್ಟೋಕ್ಸ್ ಸಿಕ್ಸ್'ರ್, ಬೌಂಡರಿಗಳಿಂದ ತಂಡದ ಮೊತ್ತವನ್ನು ವೇಗವಾಗಿ ಹೆಚ್ಚಿಸಿದರು.

ಈ ಸಂದರ್ಭದಲ್ಲಿ ನಾಯಕ ಸ್ಮಿತ್ 26 ರನ್'ಗಳಿಸಿ ಸ್ಟೋಯ್'ನಿಸ್ ಬೌಲಿಂಗ್'ನಲ್ಲಿ ವಿಕೇಟ್ ಒಪ್ಪಿಸಿದರು. 5ನೇ ಕ್ರಮಾಂಕದಲ್ಲಿ ಆಟ ಆರಂಭಿಸಿದ ಪುಣೆಯ ಮಾಜಿ ನಾಯಕ ಧೋನಿ ಕೂಡ ಹೆಚ್ಚು ರನ್ ಗಳಿಸದೆ ಔಟಾದರು. ಮನೋಜ್ ತಿವಾರಿ ಹಾಗೂ ಸ್ಟೋಕ್ಸ್ ಅವರ ಬಿರುಸಿನ ಆಟದಿಂದ ಪುಣೆ ಟೀಂ 20 ಓವರ್'ಗಳಲ್ಲಿ 6 ವಿಕೇಟ್ ನಷ್ಟಕ್ಕೆ 163 ರನ್'ಗಳ ಉತ್ತಮ ಮೊತ್ತಗಳಿಸಿತು.ಪಂಜಾಬ್ ಪರ ಸಂದೀಪ್ ಶರ್ಮಾ 2, ಅಕ್ಸರ್ ಪಟೇಲ್,ನಟರಾಜನ್,ಸ್ಟೋನಿಸ್ ಹಾಗೂ ಸ್ವಪ್ನಿಲ್ ಸಿಂಗ್ ತಲಾ ಒಂದೊಂದು ವಿಕೇಟ್ ಪಡೆದರು.

ಮ್ಯಾಕ್ಸ್,ವೆಲ್,ಮಿಲ್ಲರ್,ಆಮ್ಲ ಅಬ್ಬರ        

ಪುಣೆಯ 163 ರನ್ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ತಂಡದ ಆರಂಭಿಕ ಆಟಗಾರರಾದ ಆಮ್ಲ ಹಾಗೂ ವೊಹ್ರ ಸ್ಫೋಟಕ ಆಟದೊಂದಿಗೆ 3 ಓವರ್'ಗಳಲ್ಲಿ 27 ರನ್ ಗಳಿಸಿದರು. ದಿಂಡಾ ಹಾಗೂ ಷಾ ತಲಾ ತಲಾ 14 ರನ್'ಗಳಿಸಿದರು. ಆಮ್ಲಾ ಕೂಡ 28 ರನ್ ಗಳಿಸಿ ಚಾಹಾರ್ ಬೌಲಿಂಗ್'ನಲ್ಲಿ ಸ್ಟೋಕ್ಸ್'ಗೆ ಕ್ಯಾಚಿತ್ತು ಔಟಾದರು. 4ನೇ ಕ್ರಮಾಂಕದ ಅಕ್ಷರ್ ಪಟೇಲ್ ಒಂದೊಂದು ಸಿಕ್ಸರ್,ಬೌಂಡರಿಯೊಂದಿಗೆ 24 ರನ್ ಗಳಿಸಿ ಇಮ್ರಾನ್ ತಹೀರ್ ಬೌಲಿಂಗ್'ನಲ್ಲಿ ಪೆವಿಲಿಯನ್'ಗೆ ತೆರಳಿಸಿದರು.  ನಂತರ ಮ್ಯಾಕ್ಸ್'ವೆಲ್ ಹಾಗೂ ಮಿಲ್ಲರ್ ಅವರದೆ ಅಬ್ಬರ.

ಇಬ್ಬರು 19 ಓವರ್'ಗಳಲ್ಲಿ 4 ವಿಕೇಟ್ ಕಳೆದುಕೊಂಡು 164 ರನ್ ಗುರಿ ತಲುಪಿ ತಂಡವನ್ನು ಗೆಲುವಿನ ಗೆರೆ ದಾಡಿಸಿದರು.  ಮ್ಯಾಕ್ಸ್'ವೆಲ್  ಕೇವಲ 20 ಎಸತಗಳಲ್ಲಿ 4 ಸಿಕ್ಸ್'ರ್ ಹಾಗೂ 2 ಬೌಂಡರಿಯೊಂದಿಗೆ 44 ರನ್ ಗಳಿಸಿದರೆ ಮಿಲ್ಲರ್ 27 ಎಸೆತಗಳಲ್ಲಿ 30 ರನ್ ಗಳಿಸಿದ್ದರು.

ಪುಣೆ ಪರ ತಹೀರ್ 2, ದಿಂಡಾ ಹಾಗೂ ಚಾಹಾರ್ ಒಂದೊಂದು ವಿಕೇಟ್ ಪಡೆದರು. ಮ್ಯಾಕ್ಸ್'ವೆಲ್ ಪಂದ್ಯ ಶ್ರೇಷ್ಠರಾದರು.

 

ಸ್ಕೋರ್

ರೈಸಿಂಗ್ ಪುಣೆ ಸೂಪರ್'ಜೈಂಟ್: 163/6 (20/20)

ಕಿಂಗ್ಸ್ ಇಲವೆನ್ ಪಂಜಾಬ್ : 164/4 (19.0/20 )          

click me!