
ಬೆಂಗಳೂರು (ನ.01): ರಾಜಕೀಯ ಪ್ರವೇಶವನ್ನು ಘೋಷಿಸಿದ ನಂತರ ನಟ ಕಮಲ್ ಹಾಸನ್ ಓಲೈಕೆ ರಾಜಕಾರಣವನ್ನ ಆಯ್ಕೆ ಮಾಡಿಕೊಂಡಿರುವಂತಿದೆ. ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ಬಳಸಿದ್ದ ಹಿಂದೂ ಭಯೋತ್ಪಾದನೆ ಅನ್ನೋ ಶಬ್ದ ಇವತ್ತು ಕಮಲ್ ಹಾಸನ್ ಪುನರುಚ್ಚಿಸಿದ್ದಾರೆ.
ತಮಿಳಿನ ವಿಕಟನ್ ಎಂಬ ನಿಯತಕಾಲಿಕೆಯಲ್ಲಿ ಬರೆದಿರುವ ಅಂಕಣದಲ್ಲಿ ನಟ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ವಿಚಾರ ಪ್ರಸ್ತಾಪ ಮಾಡಿರುವುದು ವಿವಾದದ ಕಿಡಿ ಹೊತ್ತಿಸಿದೆ. ಹಿಂದೂಗಳಲ್ಲಿ ಉಗ್ರವಾದ, ಭಯೋತ್ಪಾದನೆ ಇದೆ, ಇಲ್ಲ ಎಂದು ಬಲಪಂಥೀಯರು ಸವಾಲು ಹಾಕುವಂತಿಲ್ಲ. ಹಿಂದೂಗಳ ಕ್ಯಾಂಪಿನಲ್ಲೂ ಭಯೋತ್ಪಾದನೆ ಹರಡಿದೆ ಎಂದು ಕಮಲ್ ಹಾಸನ್
ಈ ಮೊದಲು ಉಗ್ರವಾದ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಹಿಂದೂಗಳು ತೊಡಗಿಕೊಳ್ಳುತ್ತಿರಲಿಲ್ಲ. ಮಾತಿನ ಮೂಲಕವೇ ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಈಗ ಮಾತು ಸೋಲುತ್ತಿರುವುದರಿಂದ ಈಗ ತೋಳ್ಬಲ ಬಳಸಲು ಶುರು ಮಾಡಿದ್ದಾರೆ. ಗಲಭೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇಂಥ ಕೃತ್ಯಗಳಿಂದ ಯಾರಿಗೂ ಲಾಭವಿಲ್ಲ ಎಂದು ಕಮಲ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮುಸ್ಲಿಂ ಭಯೊತ್ಪಾದನೆಗೆ ಪ್ರಯೋಗಶಾಲೆಯಂತಾಗಿರುವ ಕೇರಳದಲ್ಲಿ ಸಾಮಾಜಿಕ ನ್ಯಾಯ ಇದೆ ಎಂದು ಕಮಲ್ ಅಲ್ಲಿನ ಮುಖ್ಯಮಂತ್ರಿ ಪಿನರಾಯಿ ವಿಜಯನ್ಗೆ ಅಭಿನಂದಿಸಿದ್ದಾರೆ. ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ಶಬ್ದ ಬಳಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹಿಂದೂಗಳಲ್ಲೂ ಭಯೋತ್ಪಾದಕರಿದ್ದಾರೆ ಎಂಬರ್ಥದಲ್ಲಿ ಕಮಲ್ ಮಾತನಾಡುತ್ತಿದ್ದಂತೆ ಬಿಜೆಪಿ ತೀಕ್ಷ್ನ ಪ್ರತಿಕ್ರಿಯೆ ನೀಡಿದೆ. ಕಮಲ್ ಹಾಸನ್ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಅವರಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಿದೆ ಎಂದು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಕಿಡಿಕಾರಿದ್ದಾರೆ. ಇನ್ನು ಕಮಲ್ ಹಾಸನ್ನನ್ನು ನೈತಿಕ ಭ್ರಷ್ಟ, ಮೂರ್ಖ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿ ಟೀಕಿಸಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬರಂ ಮೊದಲ ಬಾರಿಗೆ ಹಿಂದೂ ಭಯೋತ್ಪಾದನೆ ಅನ್ನೋ ಶಬ್ಧ ಬಳಸಿದ್ದರು. ಅದಾದ ನಂತರ ಗೃಹ ಸಚಿವರಾಗಿದ್ದ ಸುಶಿಲ್ ಕುಮಾರ್ ಶಿಂದೆ ಇದೇ ಮಾತನ್ನು ಪದೇ ಪದೇ ಪುನರುಚ್ಚರಿಸಿದ್ದರು. ಮಾಲೆಗಾಂವ್ ಬಾಂಬ್ ಸ್ಫೋಟ, ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಸೇರಿದಂತೆ ಕೆಲ ಉಗ್ರ ಕೃತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಾದ ಹರಿಬಿಡಲಾಗಿತ್ತು. ಆದ್ರೆ ಈ ಪ್ರಕರಣಗಳ ತನಿಖೆ ಬೇರೆಯದ್ದೇ ಕತೆ ಹೇಳುತ್ತಿರುವಾಗ ಕಮಲ್ ಹಾಸನ್ ಈಗ ಕಾಂಗ್ರೆಸ್ ಆಡಿತ ಮಾತುಗಳನ್ನು ಮತ್ತೆ ಹಾಡುತ್ತಿದ್ದಾರೆ. ಈಗ ಕಾಂಗ್ರೆಸ್-ಕಮಲ್ ಬಾಯಿ ಬಾಯಿ ಅನ್ನೋದರ ಸೂಚನೆ ಅನ್ನೋದು ಹಿಂದೂಪರ ಸಂಘಟನೆಗಳ ವಾದ. ಇದೇ ಕಮಲ್ ಹಾಸನ್ ಹಿಂದೊಮ್ಮೆ ಬಿಜೆಪಿ ಜೊತೆ ಕೈಜೊಡಿಸುವ ಮಾತನ್ನೂ ಆಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.