
ಚೆನ್ನೈ: ಹಿಂದೂ ಬಲಪಂಥೀಯ ಸಂಘಟನೆಗಳು ಹಿಂದೂ ಭಯೋತ್ಪಾದಕರು ಇಲ್ಲವೆಂದು ಹೇಳುವಂತಿಲ್ಲ, ಏಕೆಂದರೆ, ಅವರು ಕೂಡಾ ಹಿಂಸಾಚಾರದಲ್ಲಿ ತೊಡಗಿದ್ದಾರೆ, ಎಂದು ಖ್ಯಾತ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ಆನಂದ ವಿಕಟನ್ ಎಂಬ ಪತ್ರಿಕೆಗೆ ಕಮಲ್ ಹಾಸನ್ ಅಂಕಣವೊಂದು ಬರೆದಿದ್ದು, ಸತ್ಯವೂ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಮುಂದುವರೆದು, ತನ್ನ ರಾಜಕೀಯ ವಿಚಾರಧಾರೆಯ ಬಗ್ಗೆ ಬರೆದುಕೊಂಡಿರುವ ಕಮಲ್ ಹಾಸನ್, ‘ಕಳೆದ 40 ವರ್ಷಗಳಲ್ಲಿ ನನ್ನ ‘ಬಣ್ಣ’ ಯಾವುದು ಎಂದು ನೋಡಬಹುದಾಗಿದೆ. ನಾನು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡುವವನು, ಖಂಡಿತವಾಗಿಯೂ ನನ್ನ ಬಣ್ಣ ಕೇಸರಿಯಂತೂ ಅಲ,’ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ನಾನು ಯಾವುದೇ ಕಡೆಗೂ ವಾಲದೇ ಮಧ್ಯಮ ಮಾರ್ಗದಲ್ಲಿ ನಡೆಯುವೆ ಎಂದು ಹೇಳಿರುವ ಕಮಲ್ ಹಾಸನ್, ತಮಿಳುನಾಡು ಶೀಘ್ರದಲ್ಲಿ ಸಾಮಾಜಿಕ ನ್ಯಾಯದ ಮಾದರಿ ರಾಜ್ಯವಾಗಿ ಹೊರಹೊಮ್ಮುವುದು ಎಂದು ಹೇಳಿದ್ದಾರೆ.
ಹಿರಿಯ ನಟ ರಾಜಕೀಯ ರಂಗ ಪ್ರವೇಶಿಸುವ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ನ.7ಕ್ಕೆ ಮಹತ್ವದ ಘೋಷಣೆ ಮಾಡುವ ಬಹುತೇಕ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.