ಯುವ ಪತ್ರಕರ್ತೆಯರಿಗಿಲ್ಲ ಶಬರಿಮಲೆಗೆ ತೆರಳಲು ಅವಕಾಶವಿಲ್ಲ

By Web DeskFirst Published Nov 5, 2018, 12:12 PM IST
Highlights

  ಶಬರಿಮಲೆ ಅಯ್ಯಪ್ಪ ದೇವಾಲಯ ಸೋಮವಾರ ಮತ್ತು ಮಂಗಳವಾರ ತೆರೆದಿರುವ ಹಿನ್ನೆಲೆಯಲ್ಲಿ, ಆ ವೇಳೆ ವರದಿಗಾರಿಕೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳಾ ಪತ್ರಕರ್ತರನ್ನು ವರದಿಗಾರಿಕೆಗೆ ಕಳಿಸಬೇಡಿ ಎಂದು ಶಬರಿಮಲೆ ಕರ್ಮ ಸಮಿತಿ ಎಂಬ ಅನೇಕ ಹಿಂದೂ ಸಂಘಟನೆಗಳ ಸಮೂಹವೊಂದು ಎಚ್ಚರಿಕೆ ನೀಡಿದೆ.

ಕೊಟ್ಟಾಯಂ :  ಶಬರಿಮಲೆ ಅಯ್ಯಪ್ಪ ದೇವಾಲಯ ಸೋಮವಾರ ಮತ್ತು ಮಂಗಳವಾರ ತೆರೆದಿರುವ ಹಿನ್ನೆಲೆಯಲ್ಲಿ, ಆ ವೇಳೆ ವರದಿಗಾರಿಕೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳಾ ಪತ್ರಕರ್ತರನ್ನು ವರದಿಗಾರಿಕೆಗೆ ಕಳಿಸಬೇಡಿ ಎಂದು ಶಬರಿಮಲೆ ಕರ್ಮ ಸಮಿತಿ ಎಂಬ ಅನೇಕ ಹಿಂದೂ ಸಂಘಟನೆಗಳ ಸಮೂಹವೊಂದು ಎಚ್ಚರಿಕೆ ನೀಡಿದೆ.

ಈ ಸಂಬಂಧ ಆಯಾ ಮಾಧ್ಯಮಗಳ ಸಂಪಾದಕರಿಗೆ ಅದು ಪತ್ರ ಬರೆದಿದೆ. ‘ಪರಿಸ್ಥಿತಿ ಉದ್ವಿಗ್ನಗೊಳ್ಳುವ ಕ್ರಮವನ್ನು ನೀವು ಕೈಗೊಳ್ಳುವುದಿಲ್ಲ ಎಂದು ನಂಬಿದ್ದೇವೆ’ ಎಂದು ಅದು ಪತ್ರದಲ್ಲಿ ತಿಳಿಸಿದೆ.

ಕಳೆದ ಸಲ ಮಾಸಿಕ ಪೂಜೆಯ ವೇಳೆ ದೇಗುಲ ತೆರೆದ ಸಂದರ್ಭದಲ್ಲಿ ಈ ವಯೋಮಾನದ ಮಹಿಳಾ ಪತ್ರಕರ್ತರು ವರದಿಗಾರಿಕೆಗೆ ಬಂದಾಗ ಕೆಲವು ಕಿಡಿಗೇಡಿಗಳು ದಾಳಿ ನಡೆಸಿದ್ದರು. ಈ ವೇಳೆ ಬೆಂಗಳೂರಿನ ಪತ್ರಕರ್ತೆ ಪೂಜಾ ಪ್ರಸನ್ನ ಸೇರಿದಂತೆ ಹಲವರು ದಾಳಿಗೆ ತುತ್ತಾಗಿದ್ದರು. ಅವರ ಕಾರುಗಳನ್ನು ಜಖಂಗೊಳಿಸಲಾಗಿತ್ತು.

ಭದ್ರತೆಗೆ 50ಕ್ಕಿಂತ ಹೆಚ್ಚು ವಯಸ್ಸಿನ ಮಹಿಳಾ ಪೊಲೀಸರು 

ಶಬರಿಮಲೆ: ಅನಗತ್ಯ ಗೊಂದಲ ತಪ್ಪಿಸುವ ಉದ್ದೇಶದಿಂದ ಶಬರಿಮಲೆಯಲ್ಲಿ 50 ವರ್ಷ ವಯಸ್ಸಿಗಿಂತ ಹೆಚ್ಚು ವಯಸ್ಸಿನ ಮಹಿಳಾ ಪೊಲೀಸರನ್ನೇ ನಿಯೋಜಿಸಲು ಕೇರಳ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

click me!