ವ್ಯಾಲಂಟೈನ್ಸ್ ಡೇಗೆ ಹಿಂದೂ ಸಂಘಟನೆಗಳಿಂದ ವಿರೋಧ

By Suvarna Web DeskFirst Published Feb 9, 2018, 5:07 PM IST
Highlights

ಪ್ರೇಮಿಗಳ ದಿನಾಚರಣೆ ವಿರುದ್ಧ ಹಿಂದೂ ಜಾಗರಣ ವೇದಿಕೆ ನಗರ ಪೊಲೀಸ್ ಆಯುಕ್ತರ ಕಛೇರಿ ಮೆಟ್ಟಿಲೇರಿದೆ.

ಬೆಂಗಳೂರು (ಫೆ.09): ಪ್ರೇಮಿಗಳ ದಿನಾಚರಣೆ ವಿರುದ್ಧ ಹಿಂದೂ ಜಾಗರಣ ವೇದಿಕೆ ನಗರ ಪೊಲೀಸ್ ಆಯುಕ್ತರ ಕಛೇರಿ ಮೆಟ್ಟಿಲೇರಿದೆ.

ವ್ಯಾಲೆಂಟೈನ್ ಡೇ ಬೇಡವೇ ಬೇಡ ಎಂದು ಹಿಂದೂ ಜನಜಾಗೃತಿ ಸಮಿತಿ  ಮಹಿಳಾ ಶಾಖೆ ನಗರ ಪೊಲೀಸ್ ಆಯುಕ್ತ  ಸುನೀಲ್ ಕುಮಾರ್ ಗೆ  ಮನವಿ ಮಾಡಿಕೊಂಡಿದೆ. ವ್ಯಾಲೆಂಟೈನ್ ಡೇ ಹೆಸರಲ್ಲಿ ಅಸಭ್ಯತೆ ನಡೆಯುತ್ತದೆ.  ಈ 14 ರಂದು  ಶಾಲೆ ಹಾಗೂ ವಿವಿಗಳ ಮಟ್ಟದಲ್ಲಿ ಮಾತೃ ಪಿತೃಗಳ ದಿನವಾಗಿ ಆಚರಿಸಬೇಕೆಂದು ನಗರ ಪೊಲೀಸ್ ಆಯುಕ್ತರಿಗೆ  ಮನವಿ ಮಾಡಿಕೊಂಡಿದ್ದಾರೆ.

ವ್ಯಾಲೆಂಟೈನ್ ಡೇ ಒಂದು ವಿಕೃತ ಆಚರಣೆ, ಇದರಿಂದ ಯುವಜನತೆ ಹಾದಿ ತಪ್ಪುತ್ತಿದೆ.ಇಂಥ ಆಚರಣೆಯನ್ನ ನಿಷೇಧಿಸಬೇಕು. ಆಚರಣೆ ನೆಪದಲ್ಲಿ  ಹುಡುಗಿಯರನ್ನ ಚುಡಾಯಿಸೋದು, ಹಿಂಸಾತ್ಮಕವಾಗಿ ನಡೆಸಿಕೊಳ್ಳೋದು ಹೆಚ್ಚಾಗುತ್ತಿದೆ. ಇವೆಲ್ಲವೂ ನಿಲ್ಲಬೇಕೆಂದರೆ ವ್ಯಾಲೆಂಟೈನ್ ಡೇ ಆಚರಣೆ ನಿಲ್ಲಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ಮಹಿಳಾ ಶಾಖೆ ಒತ್ತಾಯಿಸಿದೆ.

ವ್ಯಾಲೆಂಟೈನ್ ಡೇ ಆಚರಣೆ ಬದಲು ಮಾತೃ-ಪಿತೃ ಪೂಜೆಯ ದಿನವಾಗಿ ಆಚರಿಸಬೇಕು.  ಫೆಬ್ರವರಿ 14  ರಂದು ಪೊಲೀಸರು ವಿಶೇಷದಳ ರಚಿಸಬೇಕು.  ಶಾಲಾ ಕಾಲೇಜು ಆವರಣದಲ್ಲಿ ವ್ಯಾಲೆಂಟೈನ್ ಡೇ ಆಚರಿಸೋ ಯುವಕರನ್ನ ವಶಕ್ಕೆ ಪಡೆಯಬೇಕು.  ಶಿಕ್ಷಣಾಧಿಕಾರಿಗಳು ಹಾಗೂ ಪ್ರಾಂಶುಪಾಲರು ಸಭೆ ಕರೆದು ಕಾಲೇಜು ಆವರಣಗಳಲ್ಲಿ ಪ್ರೇಮಿಗಳ ಆಚರಣೆ ನಡೆಸದಂತೆ ಕ್ರಮ ಕೈಗೋಳ್ಳಬೇಕು ಎಂದಿದ್ದಾರೆ.

 

click me!