ಕೇಂದ್ರವು ನಮ್ಮನ್ನು ಈ ದೇಶದ ಭಾಗವೆಲ್ಲವೆಂದು ಭಾವಿಸಿದಂತಿದೆ

By Suvarna Web DeskFirst Published Feb 9, 2018, 3:32 PM IST
Highlights

ಅನುದಾನ ಕಡಿಮೆಯಿರುವ ಕಾರಣ ಟಿಡಿಪಿ ಸಂಸದರು ಕಳೆದ 4 ದಿನಗಳಿಂದ ಸಂಸತ್ತಿನ ಬಳಿಯ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಮುಂದುವರಿಸಿದ್ದಾರೆ.

ನವದೆಹಲಿ(ಫೆ.09): ಪ್ರಸ್ತುತ ಸಾಲಿನ ಕೇಂದ್ರ ಆಯವ್ಯಯದಲ್ಲಿ ತಮ್ಮ ರಾಜ್ಯಕ್ಕೆ ಕಡಿಮೆ ಪ್ರಮಾಣದಲ್ಲಿ ನೆರವು ನೀಡಿರದಿರುವುದಕ್ಕೆ ಆಕ್ರೋಶಗೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು 'ಕೇಂದ್ರ ಸರ್ಕಾರದ ವರ್ತನೆಗಳನ್ನು ನೋಡಿದರೆ  ತಮ್ಮ ರಾಜ್ಯವನ್ನು ಅವರು ರಾಷ್ಟ್ರದ ಭಾಗವಲ್ಲವೆಂದು ಭಾವಿಸಿದಂತಿದೆ' ಎಂದು ಹರಿಹಾಯ್ದಿದ್ದಾರೆ.

ಪ್ರಸ್ತುತ ದುಬೈನಲ್ಲಿರುವ ಅವರು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆಯಿಂದ ಅಸಮಾಧಾನಗೊಂಡು ಟೆಲಿಕಾನ್ಫರೆನ್ಸ್ ಮೂಲಕ ಕೇಂದ್ರ ಸರ್ಕಾರದ ಇಬ್ಬರು ಮಂತ್ರಿಗಳನ್ನು ಒಳಗೊಂಡು ಟಿಡಿಪಿ ಸಂಸದರೊಂದಿಗೆ ಸಭೆ ನಡೆಸಿ, ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.

ನಾಯ್ಡು ಅವರು ತಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಸಂಸತ್ತಿನಲ್ಲಿ ಪ್ರತಿಭಟನೆ ಮುಂದುವರಿಸಿ ಸೂಚನೆ ನೀಡಿದ್ದಾರೆ' ಎಂದು ಲೋಕಸಭೆಯ ಟಿಡಿಪಿಯ ನಾಯಕ ತೋಟ ನರಸಿಂಹನ್ ತಿಳಿಸಿದ್ದಾರೆ. ಅನುದಾನ ಕಡಿಮೆಯಿರುವ ಕಾರಣ ಟಿಡಿಪಿ ಸಂಸದರು ಕಳೆದ 4 ದಿನಗಳಿಂದ ಸಂಸತ್ತಿನ ಬಳಿಯ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಎನ್'ಡಿಎ ಸರ್ಕಾರದ ಭಾಗವಾಗಿರುವ ಟಿಡಿಪಿ ಕೇಂದ್ರದಲ್ಲಿ ಇಬ್ಬರು ಸಚಿವರನ್ನು ಹೊಂದಿದೆ. ಎನ್'ಡಿಎ ಸರ್ಕಾರದಲ್ಲಿ ಮುಂದುವರಿಯುವ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ'ಎಂದು ಮೂಲಗಳು ತಿಳಿಸಿವೆ.

click me!