ಈದ್ ಮಿಲಾದ್ ಆಚರಣೆಯಲ್ಲಿ ಹಿಂದೂ-ಮುಸ್ಲೀಂ ವಿವಾದ; ಚಂದಾವರದಲ್ಲಿ ಪರಿಸ್ಥಿತಿ ಉದ್ವಿಗ್ನ

Published : Dec 01, 2017, 05:40 PM ISTUpdated : Apr 11, 2018, 12:42 PM IST
ಈದ್ ಮಿಲಾದ್ ಆಚರಣೆಯಲ್ಲಿ ಹಿಂದೂ-ಮುಸ್ಲೀಂ ವಿವಾದ; ಚಂದಾವರದಲ್ಲಿ ಪರಿಸ್ಥಿತಿ ಉದ್ವಿಗ್ನ

ಸಾರಾಂಶ

ಚಂದಾದಾರದಲ್ಲಿ  ಈದ್  ಮಿಲಾದ್ ಆಚರಣೆ ಸಂಬಂಧ ಹಿಂದು ಮುಸ್ಲಿಂ ನಡುವೆ ಹುಟ್ಟಿಕೊಂಡ ವಿವಾದದಿಂದ ಹೊನ್ನಾವರ ತಾಲೂಕಿನ  ಚಂದಾವರದಲ್ಲಿ ಪರಸ್ಥಿತಿ ಉದ್ವಿಗ್ನಗೊಂಡಿದೆ.

ಉತ್ತರ ಕನ್ನಡ (ಡಿ.01): ಚಂದಾದಾರದಲ್ಲಿ ಈದ್ ಮಿಲಾದ್ ಆಚರಣೆ ಸಂಬಂಧ ಹಿಂದು ಮುಸ್ಲಿಂ ನಡುವೆ ಹುಟ್ಟಿಕೊಂಡ ವಿವಾದದಿಂದ ಹೊನ್ನಾವರ ತಾಲೂಕಿನ  ಚಂದಾವರದಲ್ಲಿ ಪರಸ್ಥಿತಿ ಉದ್ವಿಗ್ನಗೊಂಡಿದೆ.

ಎರಡು ಗುಂಪುಗಳ ನಡುವೆ ಮಾರಾಮಾರಿ, ಕಲ್ಲು ತೂರಾಟ ನಡೆದಿದ್ದು,  ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ  ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಮಲಾಕರ್ ಎಂಬುವರ ತಲೆಗೆ ಕಲ್ಲು ತೂರಾಟದಿಂದ ಗಂಭೀರ ಗಾಯವಾಗಿದೆ.

ಕಲ್ಲು ತೂರಾಟದಿಂದ  ಬಿಜೆಪಿ ಮುಖಂಡ ಸೂರಜ್ ನಾಯ್ಕ್  ಕಾರು ಗಾಜು ಜಖಂಗೊಂಡಿದೆ.  ಚಂದಾವರದ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮುಸ್ಲಿಂ ಆಚರಣೆಗೆ ಚಂದಾವರದಲ್ಲಿ ಮಸೀದಿ ಗುಮ್ಮಟ ಸ್ಥಾಪನೆಗೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದು, ಚಂದಾವರ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ಸಶಸ್ತ್ರ ಮೀಸಲುಪಡೆ ವಜ್ರ ವಾಹನ ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿಗಳ ಕಣ್ಗಾವಲು ಇಡಲಾಗಿದೆ. ಘಟನಾ ಸ್ಥಳದಲ್ಲಿ ಬಿ.ಜೆ.ಪಿ ಮುಖಂಡರು, ಕಾರ್ಯಕರ್ತರು, ಹಿಂದೂಪರ ಸಂಘಟನೆಗಳು ಭಾಗಿಯಾಗಿವೆ.

ಪೊಲೀಸ್ ಹಿರಿಯ ಅಧಿಕಾರಿಗಳು, ತಾಲೂಕಾಡಳಿತಾಧಿಕಾರಿಗಳು ಎರಡುಕೋಮುಗಳ ಪ್ರಮುರೊಂದಿಗೆ ಸಂಧಾನ ಸಭೆ ನಡೆದಿದೆ.  ಪ್ರತಿಭಟನೆ ನಡೆಸಿದ್ದ ಬಿಜೆಪಿ ಮುಖಂಡ ಸೂರಜ್ ನಾಯ್ಕ್'ರನ್ನು ಬಂಧಿಸಿದ್ದು 25ಕ್ಕೂ ಹೆಚ್ಚು ಹಿಂದು ಪರ ಸಂಘಟನೆಯ ಮುಖಂಡರನ್ನು ಬಂಧಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ