‘ದೇಶದ್ರೋಹಿಗಳ ಮಹಾತಾಯಿ ಗೌರಿ ಜನ್ಮ ಕೊಟ್ಟಿರುವ ಮಕ್ಕಳ ತಂದೆ ಯಾರು?’

Published : Sep 05, 2018, 02:21 PM ISTUpdated : Sep 09, 2018, 09:28 PM IST
‘ದೇಶದ್ರೋಹಿಗಳ ಮಹಾತಾಯಿ ಗೌರಿ ಜನ್ಮ ಕೊಟ್ಟಿರುವ ಮಕ್ಕಳ ತಂದೆ ಯಾರು?’

ಸಾರಾಂಶ

ಗೌರಿ ಲಂಕೇಶ್, ಪ್ರಗತಿಪರರ ವಿರುದ್ಧ ಹರಿಹಾಯ್ದ ಹಿಂದೂ ಮುಖಂಡೆ  ದೇಶದ್ರೋಹಿಗಳ ಮಹಾತಾಯಿ ಗೌರಿ, ಆಕೆ ಸತ್ರೆ ಎಸ್ ಐಟಿ ರಚನೆಯಾಗುತ್ತೆ: ಆಕ್ರೋಶ

ಮಂಗಳೂರು:  ಎಡಪಂಥೀಯರ ಬಗ್ಗೆ ಹಿಂದೂ ಮುಖಂಡೆಯೊಬ್ಬಳು ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯೊಂದರಲ್ಲಿ  ಚೈತ್ರಾ ಕುಂದಾಪುರ ಎಂಬಾಕೆ ಮಾಡಿರುವ ಭಾಷಣದಲ್ಲಿ ಪ್ರಗತಿಪರರನ್ನು ಟೀಕಿಸುವ ಭರದಲ್ಲಿ  ಗೌರಿ ಲಂಕೇಶ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಲಾಗಿದೆ.  

"

ಸಾವಿನಲ್ಲೂ ಸಾರ್ಥಕತೆ ಕಾಣದೇ ಇರುವ ಅತೃಪ್ತ ಆತ್ಮಗಳು ಎಡಚರರು ಮಾತ್ರ.  ಇವರು ಹೆಣಕ್ಕಾಗಿ ಕಾಯುವವರು, ಪ್ರಗತಿಪರರು ಅಥವಾ ವಿಚಾರವಾದಿಗಳಲ್ಲ.  ಇವರು, ದಾಭೋಲ್ಕರ್, ಪನ್ಸಾರೆ ಹೆಣ ಇಟ್ಟುಕೊಂಡು ಬೇಳೆ ಬೇಯಿಸಿಕೊಂಡವರು. ಯಾರ್ಯಾರೋ ಸತ್ತಾಗ, ಯಾವುದೋ ಶವಗಳ ಕಾರಣಕ್ಕೆ ಹಿಂದೂ ಸಂಘಟನೆಗಳ ಮೇಲೆ ಆರೋಪ ಮಾಡ್ತಾರೆ, ಎಂದು ಚೈತ್ರಾ  ಹರಿಹಾಯ್ದಿದ್ದಾರೆ.

ದೇಶದ್ರೋಹಿ ವಿದ್ಯಾರ್ಥಿಗಳಾದ ಉಮರ್ ಖಾಲೀದ್ ಮತ್ತು ಕನ್ಹಯ್ಯನ ಮಹಾತಾಯಿ ಗೌರಿ ಲಂಕೇಶ್.  ನನ್ನ ಮುದ್ದಿನ ಮಕ್ಕಳು ಅಂತ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾಳೆ.  ಆದ್ರೆ ಯಾರು ತಂದೆಯಾಗಿ ಈ ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ ಅಂತ ಗೊತ್ತಿಲ್ಲ. ಆಕೆ  ದೇಶದ್ರೋಹಿಗಳ ಮಹಾತಾಯಿ, ಆಕೆ ಸತ್ರೆ ಎಸ್ ಐಟಿ ರಚನೆಯಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌