ಪ್ರಧಾನಿ ಮೋದಿ ವಿರುದ್ಧ ಜಮೀರ್ ಅಹಮದ್ ಗರಂ

By Web DeskFirst Published Sep 5, 2018, 2:08 PM IST
Highlights

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಜಮೀರ್ ಅಹಮದ್ ಖಾನ್ ಅವರು ಅಸಮಾಧಾನ ಹೊರಹಾಕಿದ್ದಾರೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗುತ್ತಿದ್ದು ಇದೇನಾ ಅಚ್ಛೇ ದಿನ್ ಎಂದು ಪ್ರಶ್ನೆ ಮಾಡಿದ್ದಾರೆ. 

ಹುಬ್ಬಳ್ಳಿ :  ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಜಮೀರ್ ಅಹಮದ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಯಾವಾಗಲು ಅಚ್ಛೆ ದಿನ್ ಎಂದು ಹೇಳುತ್ತಿದ್ದರು. ಇದೇನಾ ಅಚ್ಛೆ ದಿನ್ ಎಂದು ಪ್ರಶ್ನೆ ಮಾಡಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಮೋದಿ ಯಾವಾಗಲೂ ಮನ್ ಕೀ ಬಾತ್ ಎನ್ನುತ್ತಿದ್ದರು.  ನಮಗೆ ಮನ್ ಕೀ ಬಾತ್ ಬೇಕಿಲ್ಲ ಕಾಮ್ ಕೀ ಬಾತ್ ಬೇಕು‌‌. ದೇಶದ ಅಭಿವೃದ್ದಿಗೆ ಮೋದಿ ಮೊದಲು ಒತ್ತು ಕೊಡಲಿ ಎಂದು ಹೇಳಿದ್ದಾರೆ.  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಜನರಿಗೆ ಕೇಂದ್ರದ ಆಡಳಿತದ ಬಗ್ಗೆ  ಅರಿವಾಗಲಿ ಎಂದು ಸುಮ್ಮನಿದ್ದೇವೆ ಎಂದು ಹೇಳಿದ್ದಾರೆ. 

ಇನ್ನು ಇದೇ ವೇಳೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪದೇ ಪದೇ ಸರ್ಕಾರ ಬೀಳುತ್ತೆ ಎಂದು ಅವರು ಹೇಳುತ್ತಾರೆ. ಆದರೆ ನಮ್ಮ ಸರ್ಕಾರ ಐದು ವರ್ಷ ಆಡಳಿತ ನಡೆಸುತ್ತೆ ಎಂದಿದ್ದಾರೆ. ಬಿಜೆಪಿಯವರು ಸರಕಾರ ಬೀಳುತ್ತೆ ಅಂತಾ ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು  ಎಂಪಿ ಚುನಾವಣೆಗೆ ನಾವು ಸಕಲ ಸಿದ್ಧತೆ ನಡೆಸಿದ್ದೇವೆ. ಹಾವೇರಿ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆ ಚುನಾವಣೆ ಅತಂತ್ರವಾಗಿದೆ. ಆದರೆ ರಾಣೆಬೆನ್ನೂರು, ಹಿರೇಕರೂರಲ್ಲಿ, ಹಾವೇರಿಯಲ್ಲಿ ಅಧಿಕಾರ ಪಡೆಯುತ್ತೇವೆ ಎಂದಿದ್ದಾರೆ. 

click me!