ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಮೋದಿ ಭಾಷಣದ ಹೈಲೈಟ್ಸ್

Published : Jan 08, 2017, 06:27 AM ISTUpdated : Apr 11, 2018, 12:40 PM IST
ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಮೋದಿ ಭಾಷಣದ ಹೈಲೈಟ್ಸ್

ಸಾರಾಂಶ

"ಭಾರತ ಈಗ ಹೊಸ ಪ್ರಗತಿಯ ಹಾದಿಯಲ್ಲಿದೆ. ಇದು ಕೇವಲ  ಆರ್ಥಿಕ ಪ್ರಗತಿಯಲ್ಲ, ಸಾಮಾಜಿಕವಾಗಿಯೂ ಪ್ರಗತಿ ಹೊಂದುತ್ತಿದ್ದೇವೆ."

ಬೆಂಗಳೂರು(ಜ. 08): ನಗರದಲ್ಲಿ ನಡೆದ 14ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯರಿಗೆ ಭಾರತದ ಅಭಿವೃದ್ಧಿಯ ಭಾಗವಾಗುವಂತೆ ಕರೆ ನೀಡಿದ್ದಾರೆ. ಭಾರತದಿಂದ ವಿದೇಶಗಳಿಗೆ ಹೋಗುತ್ತಿದ್ದ ಬೌದ್ಧಿಕ ವಲಸೆಯನ್ನು(ಬ್ರೇನ್ ಡ್ರೇನ್) ಬೌದ್ಧಿಕ ಗಳಿಕೆ(ಬ್ರೇನ್ ಗೇನ್)ಯನ್ನಾಗಿ ಪರಿವರ್ತಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಪ್ರಧಾನಿ ಸಂದೇಶ ರವಾನಿಸಿದ್ದಾರೆ. ಪೋರ್ಚುಗಲ್ ಪ್ರಧಾನಿ ಆಂಟೋನಿಯೋ ಕೋಸ್ಟಾ, ರಾಜ್ಯ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್, ವಿ.ಕೆ.ಸಿಂಗ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್

ಪೋರ್ಚುಗಲ್'ನ ಆಧುನಿಕ ಪ್ರಜಾತಂತ್ರ ವ್ಯವಸ್ಥೆಯ ಹರಿಕಾರ ಹಾಗೂ ಮಾಜಿ ಅಧ್ಯಕ್ಷ ಮಾರಿಯೋ ಸೋರೆಸ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಶೋಕ

ಸುಂದರ ನಗರ ಬೆಂಗಳೂರಿನಲ್ಲಿ ‌ಈ ಬಾರಿ‌ ಈ‌ ಕಾರ್ಯಕ್ರಮ ‌ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯಗೆ ನನ್ನ ಅಭಿನಂದನೆ

ಬಹಳ ಸಂತಸದಿಂದ ಪ್ರವಾಸಿ ಭಾರತೀಯ ದಿವಸ್'ಗೆ ಎಲ್ಲರನ್ನು ಸ್ವಾಗತಿಸುತ್ತಿದ್ದೇನೆ

ಈ ದಿನ ಸಂಭ್ರಮಾಚರಣೆ ದೇಶಕ್ಕೆ ಮಹತ್ಮಾ ಗಾಂಧಿ ಹಿಂತಿರುಗಿದ ದಿನದ ಸಂತಸದ ದಿನದ ನೆನಪಿನ ಸಂಭ್ರಮ                       

ಇಲ್ಲಿ‌ ಆತಿಥ್ಯ ವಹಿಸುವವರು‌‌ ನೀವೇ, ಅತಿಥಿಗಳು ನೀವೇ, ಈ ಕಾರ್ಯಕ್ರಮದ ಸರ್ವಸ್ವವೂ ನೀವೇ. ಈ ಕಾರ್ಯಕ್ರಮಕ್ಕೆ ‌ನಿಮ್ಮೆಲ್ಲರ ಸ್ವಾಗತಿಸುವುದು ‌ನಮಗೆ ಹೆಮ್ಮೆಯ ವಿಷಯ: ಅನಿವಾಸಿ ಭಾರತೀಯರನ್ನುದ್ದೇಶಿಸಿ ಮೋದಿ ಮಾತು.

ಈ ಕಾರ್ಯಕ್ರಮ ಅನಿವಾಸಿ ಭಾರತೀಯರ ಯಶಸ್ಸಿನ‌ ಪ್ರತಿಬಿಂಬ. ಅನಿವಾಸಿ ಭಾರತೀಯರು ಕೇವಲ ಅವರ ಸಂಖ್ಯೆಗಾಗಿ ಅಂತಾರಾಷ್ಟ್ರೀಯ ‌ಮಟ್ಟದಲ್ಲಿ ಗೌರವಿಸಲ್ಪಡುತ್ತಿಲ್ಲ. ಅವರ ಗಣನೀಯ ಕೊಡುಗೆಯ ಹಿನ್ನಲೆಯಲ್ಲಿ ಗೌರವ ಗಳಿಸುತ್ತ ಇದ್ದಾರೆ.

ಅನಿವಾಸಿ ಭಾರತೀಯರ ಸುರಕ್ಷತೆ ಹಾಗೂ‌ ಕಲ್ಯಾಣ ನಮ್ಮ ಆದ್ಯತೆ. ಅನಿವಾಸಿ ಭಾರತೀಯರಿಗೆ ಅಗತ್ಯವಾದ ಎಲ್ಲ ಸೇವೆಗಳ ಸಲ್ಲಿಸಲು ಇಂಡಿಯನ್ ಎಂಬೆನ್ಸಿಗಳ ಸಜ್ಹುಗೊಳಿಸಿದ್ದೇವೆ. ಇಪ್ಪತ್ನಾಲ್ಕು ‌ಗಂಟೆ ಹೆಲ್ಪ್'ಲೈನ್ ವ್ಯವಸ್ಥೆ ‌ಮಾಡಿದ್ದೇವೆ. ಸೋಷಿಯಲ್ ಮೀಡಿಯಾ ‌ಪ್ಲಾಟ್'ಫಾರಂ ಮೂಲಕ ಕೂಡ ನೆರವು ಒದಗಿಸುತ್ತಿದ್ದೇವೆ.

ಬ್ರೈನ್ ಡ್ರೈನ್'ನಿಂದ ಬ್ರೈನ್ ಗೇನ್'ಗೆ ಬದಲಿಸಲು ನಾವು ಬಯಸುತ್ತೇವೆ. ಇದು ಅನಿವಾಸಿ ಭಾರತೀಯರಿಂದ ಸಾಧ್ಯ ಅಂತ ನಾನು‌ ನಂಬಿದ್ದೇನೆ. ನಾನಾ ಕ್ಷೇತ್ರಗಳಲ್ಲಿ, ನಾನಾ ವೃತ್ತಿಯಲ್ಲಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನಿವಾಸಿ ಭಾರತೀಯರಿದ್ದಾರೆ

ಪ್ರವಾಸಿ ಭಾರತೀಯ ಎಲ್ಲೆ ಇದ್ದರೂ ಆತನ ಆಂತರ್ಯ ಭಾರತೀಯತೆ. ಕರ್ಮಭೂಮಿ ಯಾವುದೇ ಆದರೂ‌ ಭಾರತ ಅವರ ಮರ್ಮಭೂಮಿ ಎಂದು ನಂಬಿದ್ದಾರೆ

ಪ್ರವಾಸಿ ಭಾರತೀಯ ಎಲ್ಲೆ‌ ಇದ್ದರೂ‌ ಅಲ್ಲೇ ಅಭಿವೃದ್ಧಿ ‌ಮಾಡಿದ್ದಾರೆ, ತಮ್ಮ ಯೋಗದಾನ ನೀಡಿದ್ದಾರೆ. ಅನಿವಾಸಿ ಭಾರತೀಯರು ನಮ್ಮ ಆದ್ಯತೆಯ ಸಮುದಾಯ

ಸೋಷಿಯಲ್ ‌ಮೀಡಿಯಾ‌ ಮೂಲಕ ವಿದೇಶಗಳಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡಿದ ರೀತಿ ಇತರರಿಗೆ ಮಾದರಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್'ಗೆ ಅಭಿನಂದನೆ

ಸೋಷಿಯಲ್ ‌ಮೀಡಿಯಾ‌ ಮೂಲಕ ವಿದೇಶಗಳಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡಿದ ರೀತಿ ಇತರರಿಗೆ ಮಾದರಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್'ಗೆ ಅಭಿನಂದನೆ

ಪ್ರಪಂಚದ ಯಾವುದೇ‌ ಮೂಲೆಯಲ್ಲಿದ್ದರೂ ಭಾರತ ನಮ್ಮ ದೇಶ ಎಂಬ ಅನುಭವ ಅವರ ಅರಿವಿಗೆ ಬರಬೇಕು. ಇದಕ್ಕಾಗಿ ನಮ್ಮ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ವಿಶೇಷತಃ ವಿದೇಶಗಳಲ್ಲಿರುವ ಕಾರ್ಮಿಕರ ನೆರವಿಗೆ‌ ಮುಂದಾಗಿದ್ದೇವೆ. ಇಲ್ಲೀಗಲ್ ರೆಕ್ರೂಟ್ಮೆಂಟ್ ಏಜೆಂಟ್‌'ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ                       

ಪ್ರವಾಸಿ ಕೌಶಲ್ ವಿಕಾಸ್ ಯೋಜನೆ ಶೀಘ್ರದಲ್ಲೇ ಜಾರಿಗೆ ತರುತ್ತೇವೆ

ಭಾರತದ ವಿಕಾಸದ ಗತಿಯಲ್ಲಿ ಭಾಗಿಯಾಗುವ ಅವಕಾಶ ಎಲ್ಲರಿಗೂ ಸಿಗಬೇಕು. ಇದಕ್ಕಾಗಿ ಹಲವು‌ ಕ್ರಮ ಕೈಗೊಂಡಿದ್ದೇವೆ. ವಜ್ರ ಯೋಜನೆ ಜಾರಿಗೆ ತಂದಿದ್ದೇವೆ.

ಭಾರತದ ಸಂಶೋದನೆ ಹಾಗೂ ಬೆಳವಣಿಗೆಯಲ್ಲಿ‌ ಈ ಯೋಜನೆ ಮೂಲಕ ಅನಿವಾಸಿ ಭಾರತೀಯರು ಭಾಗಿಯಾಗಬಹುದು. ಭಾರತ ಹಾಗೂ ಅನಿವಾಸಿ‌ ಭಾರತೀಯರ ನಡುವಿನ ಸಂಪರ್ಕ ದೃಢಗೊಳಿಸುತ್ತಿದ್ದೇವೆ. ಇದಕ್ಕಾಗಿ ಪ್ರವಾಸಿ ಭಾರತೀಯ ಕೇಂದ್ರ ಆರಂಭಿಸಿದ್ದೇವೆ. ಇದು ಅನಿವಾಸಿ ಭಾರತೀಯರಿಗೆ ಸಮರ್ಪಿತವಾಗಿದೆ.

ಹಲವು‌ ಪೀಳಿಗೆಗಳಿಂದ ಅನಿವಾಸಿ ಭಾರತೀಯರು ವಿದೇಶಗಳಲಿದ್ದಾರೆ. ಅವರು ನಮಗೆ ವಿಶೇಷ ಹಾಗೂ ಮೌಲ್ಯಯುತ ವ್ಯಕ್ತಿಗಳು. ಅವರೊಂದಿಗೆ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವುದು ನಮ್ಮ ಉದ್ದೇಶ. ಇದಕ್ಕಾಗಿ Know india ಯೋಜನೆ ಜಾರಿಗೆ. ಅನಿವಾಸಿ ಭಾರತೀಯರು ತಮ್ಮ ಬೇರುಗಳ ತಿಳಿಯಲಿ ಎಂಬುದು ಈ ಯೋಜನೆ ಉದ್ದೇಶ. ಈ ಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮಕ್ಕೂ ಅನಿವಾಸಿ ಭಾರತೀಯರು ಬಂದಿದ್ದಾರೆ.

"ಭಾರತವನ್ನು ತಿಳಿಯಿರಿ" ಎಂಬ ಆನ್'ಲೈನ್ ಸ್ಪರ್ಧೆಯಲ್ಲಿ 5 ಸಾವಿರಕ್ಕೂ ಹೆಚ್ಚು ಎನ್'ಆರ್'ಐ ಮಕ್ಕಳು ಪಾಲ್ಗೊಂಡಿದ್ದಾರೆ.

ಭಾರತ ಈಗ ಹೊಸ ಪ್ರಗತಿಯ ಹಾದಿಯಲ್ಲಿದೆ. ಇದು ಕೇವಲ  ಆರ್ಥಿಕ ಪ್ರಗತಿಯಲ್ಲ, ಸಾಮಾಜಿಕವಾಗಿಯೂ ಪ್ರಗತಿ ಹೊಂದುತ್ತಿದ್ದೇವೆ.

ಎಫ್'ಡಿಐ - ಫಾಸ್ಟ್ ಡೆವಲಪ್ಮೆಂಟ್ ಆಫ್ ಇಂಡಿಯಾ

ಅನಿವಾಸಿ ಭಾರತೀಯರು ಸ್ವಚ್ಛ ಭಾರತ್, ನಮಾಮಿ ಗಂಗೆ ಮೊದಲಾದ ಯೋಜನೆಗಳಿಗೆ ನೆರವು ಒದಗಿಸಿದ್ದಾರೆ.

ಭ್ರಷ್ಟಾಚಾರ, ಕಾಳಧನದ ಪೂಜಾರಿಗಳು ಜನವಿರೋಧಿಗಳು. ಕಪ್ಪುಹಣ, ಭ್ರಷ್ಟಾಚಾರ ತೊಡೆದುಹಾಕಲು ಅನಿವಾಸಿ ಭಾರತೀಯರು ಕೈಜೋಡಿಸಿದ್ದಾರೆ, ಅವರಿಗೆ ನನ್ನ ಅಭಿನಂದನೆ

ನಾವು ಎಲ್ಲೆ ಇರಲಿ ನಮ್ಮ ನಡುವೆ ಒಂದು ಸಾಮಾನ್ಯ ಬಂಧವಿರಲಿದೆ. ಅದು : We are strong  ಎಂಬುದು

ನಿಮ್ಮ ಕನಸು‌ ನಮ್ಮ ಸಂಕಲ್ಪ; ಇದಕ್ಕಾಗಿ ವ್ಯವಸ್ಥೆ, ಕಾನೂನಿನಲ್ಲಿ ಬದಲಾವಣೆ ಆಗಬೇಕೆಂದರೆ ಅದನ್ನು ‌ಮಾಡಲು ನಾವು ಸಿದ್ದ. 21ನೇ ಶತಮಾನ ಭಾರತದ ಶತಮಾನವಾಗಲಿದೆ... ಬಹಳ ಬಹಳ ಧನ್ಯವಾದ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ ನಿಗೂಢ ಹೇಳಿಕೆ
ಹುಣಸೂರಿನಲ್ಲಿ ₹10 ಕೋಟಿ ಚಿನ್ನ ದೋಚಿದ್ದವರು ಬಿಹಾರದಲ್ಲಿ ಬಲೆಗೆ