
ನವದೆಹಲಿ(ನ.02): ನದಿ ನೀರನ್ನು ಬಳಸಿ ಕೋಕಾಕೋಲ ಹಾಗೂ ಪೆಪ್ಸಿ ತಯಾರಿಸುತ್ತಿದ್ದ ತಮಿಳುನಾಡಿನಲ್ಲಿನ ಕಂಪೆನಿಗಳಿಗೆ ಹೈ ಕೋರ್ಟ್ ಸರಿಯಾಗಿಯೇ ಚಾಟಿ ಬೀಸಿದೆ.
ತಮಿಳುನಾಡಿನ ಗಂಗೈಕೊಂಡನ್ ಬಳಿಯ ಪೆಪ್ಸಿ ಕೋಕಕೋಲ ಕಂಪೆನಿಗಳು ನದಿ ಮೂಲದ ನೀರನ್ನು ಬಳಸಿ ಪಾನೀಯವನ್ನು ಬಾಟಲ್'ಗಳಿಗೆ ತುಂಬಿಸುತ್ತಿರುವುದು ನೀರಿನ ಅಭಾವ ಹೆಚ್ಚಳಕ್ಕೆ ಕಾರಣವಾಗಿದೆ. ಜತೆಗೆ ಈ ಭಾಗದಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿರುವುದರಿಂದ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್ ನದಿ ನೀರನ್ನು ಬಳಸದಂತೆ ಕಟ್ಟಪ್ಪಣೆ ಹೊರಡಿಸಿದೆ.
ಅಲ್ಲದೇ ಬೋರ್ ವೆಲ್ ಮೂಲಕ ಮಿತಿ ಮೀರಿದ ನೀರನ್ನು ಕಂಪೆನಿಗಳು ಹೊರತೆಗೆಯುತ್ತಿರುವುದಕ್ಕೆ ನ್ಯಾಯಾಲಯ ಗರಂ ಆಗಿದೆ. ಅಂತರ್ಜಲದ ಮಟ್ಟ ಕುಸಿಯುತ್ತಿರುವುದನ್ನು ಮನಗಂಡ ಕೋರ್ಟ್ ಕಂಪೆನಿಗೆ ಮಿತಿ ಮೀರಿದ ನೀರು ಬಳಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.