5 ಲಕ್ಷ ಕೊಟ್ಟರೆ ಮಿಂಚಿಗಿಂತ ವೇಗವಾಗಿ ಕೆಲಸ!

First Published Jun 26, 2018, 8:57 AM IST
Highlights

ಐದು ಲಕ್ಷ ರು. ಕೈಗಿಟ್ಟರೆ ಅಧಿಕಾರಿಗಳು ಕೆಲಸಗಳನ್ನು ಮಿಂಚಿಗಿಂತ ವೇಗವಾಗಿ ಮಾಡುತ್ತಾರೆ. ಹಣ ನೀಡದಿದ್ದರೆ ನಿಧಾನಗತಿಯಲ್ಲಿ ಕೆಲಸ ಮಾಡುತ್ತಾರೆ. ಕೋರ್ಟ್‌ ಆದೇಶ ಪಾಲನೆಯ ವಿಳಂಬಕ್ಕೆ ಕಾರಣ ಕೇಳಿದರೆ ಮಾತ್ರ ಚುನಾವಣೆ ನೆಪ ಹೇಳುತ್ತಾರೆ. ಚುನಾವಣೆ ಇದ್ದರೆ ಅಧಿಕಾರಿಗಳು ಊಟ-ತಿಂಡಿ, ನಿದ್ರೆ ಮಾಡುವುದಿಲ್ಲವೇ? ಸಚಿವರು ಹಾಗೂ ಮುಖ್ಯಮಂತ್ರಿಗಳು ಸೂಚಿಸಿದ ಕೆಲಸಗಳನ್ನು ನಿರ್ವಹಿಸುವುದಿಲ್ಲವೇ ಎಂದು ಹೈಕೋರ್ಟ್‌ ಕಠೋರವಾಗಿ ಪ್ರಶ್ನಿಸಿದೆ.

 ಬೆಂಗಳೂರು (ಜೂ. 26):  ಐದು ಲಕ್ಷ ರು. ಕೈಗಿಟ್ಟರೆ ಅಧಿಕಾರಿಗಳು ಕೆಲಸಗಳನ್ನು ಮಿಂಚಿಗಿಂತ ವೇಗವಾಗಿ ಮಾಡುತ್ತಾರೆ. ಹಣ ನೀಡದಿದ್ದರೆ ನಿಧಾನಗತಿಯಲ್ಲಿ ಕೆಲಸ ಮಾಡುತ್ತಾರೆ. ಕೋರ್ಟ್‌ ಆದೇಶ ಪಾಲನೆಯ ವಿಳಂಬಕ್ಕೆ ಕಾರಣ ಕೇಳಿದರೆ ಮಾತ್ರ ಚುನಾವಣೆ ನೆಪ ಹೇಳುತ್ತಾರೆ. ಚುನಾವಣೆ ಇದ್ದರೆ ಅಧಿಕಾರಿಗಳು ಊಟ-ತಿಂಡಿ, ನಿದ್ರೆ ಮಾಡುವುದಿಲ್ಲವೇ? ಸಚಿವರು ಹಾಗೂ ಮುಖ್ಯಮಂತ್ರಿಗಳು ಸೂಚಿಸಿದ ಕೆಲಸಗಳನ್ನು ನಿರ್ವಹಿಸುವುದಿಲ್ಲವೇ ಎಂದು ಹೈಕೋರ್ಟ್‌ ಕಠೋರವಾಗಿ ಪ್ರಶ್ನಿಸಿದೆ.

ಸ್ಮಶಾನ ಭೂಮಿಗಾಗಿ ಬೆಂಗಳೂರು ಉತ್ತರ ತಾಲೂಕಿನ ಯಲಹಂಕದ ಸಿಂಗಾಪುರ ಗ್ರಾಮದ ಎಸ್‌.ವಿ.ಯೋಗೇಶ್ವರ್‌ ಎಂಬುವರಿಗೆ ಸೇರಿದ 24 ಗುಂಟೆ ಜಾಗವನ್ನು ಬೆಂಗಳೂರು ನಗರ ಜಿಲ್ಲಾಡಳಿತ ಭೂಸ್ವಾಧೀನ ಆದೇಶವನ್ನು ಹೊರಡಿಸದೇ ವಶಪಡಿಸಿಕೊಂಡಿತ್ತು. ಹೀಗಾಗಿ ಪರ್ಯಾಯ ಜಮೀನು ಕಲ್ಪಿಸುವಂತೆ ಹೈಕೊರ್ಟ್‌ ಆದೇಶಿಸಿದ್ದರೂ, ಒಂದು ವರ್ಷದಿಂದ ಆ ಆದೇಶ ಪಾಲಿಸಿರಲಿಲ್ಲ. ಇದರಿಂದ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು.

ಪ್ರಕರಣದ ಕುರಿತು ವಿವರಣೆ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೈಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. ಈ ವೇಳೆ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್‌ ಅವರು ಪ್ರತಿಕ್ರಿಯಿಸಿ, ಪ್ರಕರಣದ ಸಂಬಂಧ ನ್ಯಾಯಾಲಯವು ಆದೇಶ ಹೊರಡಿಸಿ ಒಂದು ವರ್ಷ ಕಳೆದಿದೆ. ಅದನ್ನು ಇನ್ನೂ ಏಕೆ ಪಾಲಿಸಿಲ್ಲ ಎಂದು ಪ್ರಶ್ನಿಸಿದರು.
 

click me!