ಹೇಮ ಮಾಲಿನಿಯ ಆ ಚಿತ್ರವನ್ನು 25 ಬಾರಿ ನೋಡಿದ್ದ ಅಟಲ್, ಕನ್ನಡಕ್ಕೂ ರಿಮೇಕಾಗಿತ್ತು

By Web DeskFirst Published Aug 16, 2018, 9:21 PM IST
Highlights

ಬಾಲಿವುಡ್ ನ ಕನಸಿನ ಸುಂದರಿ ಹೇಮ ಮಾಲಿನಿ ದ್ವಿಪಾತ್ರದಲ್ಲಿ ಅಭಿನಯಿಸಿದ 1972ರಲ್ಲಿ ಬಿಡುಗಡೆಯಾದ 'ಸೀತ್ ಔರ್ ಗೀತ್' ಹಿಂದಿ ಚಿತ್ರವನ್ನು 25 ಬಾರಿ ನೋಡಿದ್ದರು. 

ನವದೆಹಲಿ[ಆ.16]: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕಾರಣ, ಸಾಹಿತಿ ಜೊತೆ ಸಿನಿಮಾ ಪ್ರೇಮಿಯಾಗಿದ್ದರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ಪೂರ್ಣ ಪ್ರಮಾಣದಲ್ಲಿ ರಾಜಕಾರಣದಲ್ಲಿ ತೊಡಗಿಕೊಳ್ಳುವ ಮುನ್ನ ತಮ್ಮ ಬಿಡುವಿನ ಸಮಯದಲ್ಲಿ ಸಿನಿಮಾಗಳನ್ನು ನೋಡುತ್ತಿದ್ದರು. ಬಾಲಿವುಡ್ ನ ಕನಸಿನ ಸುಂದರಿ ಹೇಮ ಮಾಲಿನಿ ದ್ವಿಪಾತ್ರದಲ್ಲಿ ಅಭಿನಯಿಸಿದ 1972ರಲ್ಲಿ ಬಿಡುಗಡೆಯಾದ 'ಸೀತ್ ಔರ್ ಗೀತ್' ಹಿಂದಿ ಚಿತ್ರವನ್ನು 25 ಬಾರಿ ನೋಡಿದ್ದರು. ಅಂದಿನಿಂದ ಆಕೆಯ ಅಭಿಮಾನಿಯಾಗಿಬಿಟ್ಟಿದ್ದರು. ಈ ಬಗ್ಗೆ ಸ್ವತಃ ಅವರೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಕನ್ನಡಕ್ಕೂ ರಿಮೇಕಾಗಿದ್ದ ಸಿನಿಮಾ
ಸೀತ್ ಔರ್ ಗೀತ್ ಚಿತ್ರ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ರಿಮೇಕಾಗಿತ್ತು. ನಿರ್ದೇಶಕ ಬಿ.ರಾಮ್ ಮೂರ್ತಿ ಕನ್ನಡಕ್ಕೆ ರಿಮೇಕ್ ಮಾಡಿದ್ದರು. ಕನಸಿನ ರಾಣಿ ಮಾಲಾಶ್ರೀ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಜೈ ಜಗದೀಶ್ ನಿರ್ಮಾಣದ ಈ ಸಿನಿಮಾದಲ್ಲಿ ಅಂಬರೀಶ್, ಶಶಿಕುಮಾರ್, ಜಗ್ಗೇಶ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದರು. 1990ರಲ್ಲಿ ಚಿತ್ರ ಬಿಡುಗಡೆಯಾಗಿತ್ತು.

 

click me!