'ಕಾಲ ಹೇಗೆಲ್ಲ ಬದಲಾಗುತ್ತದೆ'; ಮಸಲ್ಸ್ ಮ್ಯಾನ್ ಅರ್ನಾಲ್ಡ್ ಈ ಬಗ್ಗೆ ಹೇಳೋದೇನು

By Suvarna Web DeskFirst Published Aug 20, 2017, 1:21 PM IST
Highlights

ಎಲ್ಲಿಯವರೆಗೆ ನಾವು ಉತ್ತಮ ಸ್ಥಾನಮಾನದಲ್ಲಿರುತ್ತೇವೆಯೋ ಅಲ್ಲಿಯವರೆಗೆ ಎಲ್ಲರೂ ನಮ್ಮನ್ನು ಹೊಗಳುತ್ತಾರೆ.

ಹಾಲಿವುಡ್'ನ ಖ್ಯಾತ ಮಸಲ್ಸ್ ಮ್ಯಾನ್ ಅರ್ನಾಲ್ಡ್ ಸ್ಕ್ಯಾವೆಂಜಿಗರ್ ಒಂದು ವರ್ಷದ ಹಿಂದೆ ಭಾವಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ಕಾಲ ಹೇಗೆ ಬದಲಾಗುತ್ತದೆ ಎಂಬುದಕ್ಕೆ ಹೃದಯಸ್ಪರ್ಶಿ ಉದಾಹರಣೆಯೊಂದನ್ನು ನೀಡಿದ್ದಾರೆ.

ಹೌದು ಕ್ಯಾಲಿಫೋರ್ನಿಯಾ ಗವರ್ನರ್'ವೊಬ್ಬರು ಹೋಟೆಲ್'ವೊಂದನ್ನು ಅರ್ನಾಲ್ಡ್ ಅವರ ಕಂಚಿನ ಪ್ರತಿಮೆಯನ್ನು ಅವರೆದುರೇ ಅನಾವರಣ ಮಾಡಿದ್ದರು. ಆ ವೇಳೆ ಹೋಟೆಲ್ ಅಧಿಕಾರಿಗಳು, 'ನೀವು ಯಾವ ಸಮಯದಲ್ಲಿಯಾದರೂ ಇಲ್ಲಿಗೆ ಬಂದರೂ ನಿಮ್ಮ ಹೆಸರಿನಲ್ಲಿ ಹೋಟೆಲ್ ರೂಮ್ ಕಾಯ್ದಿರಿಸಲಾಗಿರುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಕೆಲದಿನಗಳ ಬಳಿಕ ಹೋಟೆಲ್'ಗೆ ಭೇಟಿ ನೀಡಿದಾಗ ರೂಮ್'ಗಳು ಸಂಪೂರ್ಣ ಭರ್ತಿಯಾಗಿವೆ ಹಾಗಾಗಿ ನಿಮಗೆ ರೂಮ್ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ.

ಆ ಬಳಿಕ ಚಾದರವನ್ನು ಹಾಸಿ ತನ್ನ ಕಂಚಿನ ಪ್ರತಿಮೆ ಎದುರೇ ಅರ್ನಾಲ್ಡ್ ಮಲಗಿದ್ದಾರೆ. ಕೆಲಹೊತ್ತಿನ ಬಳಿಕ ಸ್ಥಳೀಯರಿಗೆ ಅರ್ನಾಲ್ಡ್ ಉತ್ತಮ ಸಂದೇಶವೊಂದನ್ನು ನೀಡಿದ್ದಾರೆ. ಎಲ್ಲಿಯವರೆಗೆ ನಾವು ಉತ್ತಮ ಸ್ಥಾನಮಾನದಲ್ಲಿರುತ್ತೇವೆಯೋ ಅಲ್ಲಿಯವರೆಗೆ ಎಲ್ಲರೂ ನಮ್ಮನ್ನು ಹೊಗಳುತ್ತಾರೆ. ಯಾವಾಗ ನಾನು ನನ್ನ ಸ್ಥಾನಮಾನ ಕಳೆದುಕೊಂಡೆನೋ ಆಗ ಎಲ್ಲರೂ ನನ್ನನ್ನು ಮರೆತರು. ಹೌದು ಕಾಲ ಬದಲಾಗುತ್ತದೆ. ನೀವು ನಿಮ್ಮ ಸ್ಥಾನಮಾನ, ಶಕ್ತಿ, ಬುದ್ದಿವಂತಿಕೆ ಹಾಗೂ ನಿಮ್ಮ ಮಾಲೀಕರನ್ನು ಸಂಪೂರ್ಣ ನಂಬಬೇಡಿ. ಇದ್ಯಾವುದೂ ನಿಮ್ಮ ಕೊನೆವರೆಗೂ ಬರುವುದಿಲ್ಲ ಎಂದಿದ್ದಾರೆ.

click me!