ಹಾಸನ(ಸೆ.13): ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುವರಿಂದಾಗಿ ಹೇಮಾವತಿ ಜಲಾಶಯದಲ್ಲಿ ನೀರು ಬರಿದಾಗಿದ್ದು, ಇಡೀ ಡ್ಯಾಮ್ ಖಾಲಿ-ಖಾಲಿ ಎನ್ನಿಸುತ್ತಿದೆ.
ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ರಾಜ್ಯ ಸರಕಾರ ನೀರು ಹರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕಾವೇರಿ ಕೊಳ್ಳದ ಪ್ರಮುಖ ನದಿ ಹೇಮಾವತಿ ಬರಿದಾಗುತ್ತಿದೆ. ಇದು ಈ ಭಾಗದ ಜನರಲ್ಲಿ ಆತಂಕ ಸೃಷ್ಠಿಸಿದೆ.
ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಮುನ್ನ ಜಲಾಶಯದಲ್ಲಿ 17 ಟಿಎಂಸಿ ನೀರಿತ್ತು, ಸದ್ಯ ಹೇಮಾವತಿ ಜಲಾಶಯದಲ್ಲಿ 7 ಟಿಎಂಸಿ ನೀರು ಖಾಲಿಯಾಗಿದ್ದು, ಇಂದು ಹೇಮಾವತಿ ಡ್ಯಾಂನಲ್ಲಿ ಕೇವಲ 10 ಟಿಎಂಸಿ ನೀರಿದೆ. ಆದರೆ ಇದರಲ್ಲಿ ಬಳಕೆ ಮಾಡಬಹುದಾದ ನೀರು 6 ಟಿಎಂಸಿ ಮಾತ್ರ ಇದೆ.