ಕೆರೆ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಪುಟ್ಟರಾಜು

By Web DeskFirst Published Oct 13, 2018, 1:38 PM IST
Highlights
  • ಕೆರೆಗಳ  ಅಭಿವೃದ್ಧಿ, ಹೂಳೆತ್ತುವಿಕೆ, ನೀರು ತುಂಬಿಸಲು ಸರ್ಕಾರ ಬದ್ಧ
  • ಕೆರೆ ಸಂರಕ್ಷಣಾ ಪ್ರಾಧಿಕಾರದ ಮೂಲಕ ಒತ್ತುವರಿ ತೆರವುಗೊಳಿಸಲು ಕ್ರಮ

ಬೆಂಗಳೂರು:  ಸುವರ್ಣ  ನ್ಯೂಸ್‌ನ ಜನಪ್ರಿಯ ‘ಹಲೋ ಮಿನಿಸ್ಟರ್’  ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಸಣ್ಣ ನೀರಾವರಿ  ಸಚಿವ ಸಿ.ಎಸ್. ಪುಟ್ಟರಾಜು ನಾಡಿನ ರೈತರ ಸಮಸ್ಯೆಗಳಿಗೆ ಕಿವಿಯಾಗಿದರು. ವಿಶೇಷವಾಗಿ, ಕೆರೆಗಳಿಗೆ  ಸಂಬಂಧಿಸಿದಂತೆ, ಕೆರೆಗಳ  ಅಭಿವೃದ್ಧಿ, ಕೆರೆಗಳ ಹೂಳೆತ್ತುವಿಕೆ, ಕೆರೆಗಳಿಗೆ ನೀರು ತುಂಬಿಸುವ, ಕೆರೆ ಒತ್ತುವರಿ ತೆರವುಗೊಳಿಸುವ ಮತ್ತು ಅಂತರ್ಜಲವನ್ನು ವ್ಯವಸ್ಥಿತವಾಗಿ ಹೆಚ್ಚಿಸುವ ಕುರಿತು ಸಚಿವರು ಮಾತನಾಡಿದ್ದಾರೆ.
  
ಈ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಪುಟ್ಟರಾಜು, ಸರ್ಕಾರವು ಕೆರೆ ಒತ್ತವರಿ ವಿಚಾರವನ್ನು  ಗಂಭೀರವಾಗಿ ಪರಿಗಣಿಸಿದೆ. ಈ ಬಾರಿ, ಸಿಎಂ  ಅಧ್ಯಕ್ಷತೆಯಲ್ಲಿ ಕೆರೆ ಸಂರಕ್ಷಣಾ ಪ್ರಾಧಿಕಾರವನ್ನು ರಚಿಸಲಾಗಿದೆ.  ಸಣ್ಣ ನೀರಾವರಿ ಸಚಿವರು ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದಾರೆ. ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ, ಯಾವುದೇ ಒತ್ತುವರಿಯಾಗಿರಲಿ, ಅದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು, ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 

‘ನ. 1ಕ್ಕೆ 100 ಅಡ್ವಾನ್ಸ್ಡ್ ಆ್ಯಂಬುಲೆನ್ಸ್‌ ವಿಧಾನಸೌಧದ ಮುಂದೆ ನಿಲ್ಲಿಸ್ತೀನಿ’

‘ಖದರ್ ಮಿನಿಸ್ಟರ್’ ಡಿಕೆಶಿ ಬಾಲ್ಯ ಹೇಗಿತ್ತು? ಯೌವನದ ಕ್ರೇಜ್ ಏನಿತ್ತು?

click me!