ಬಿಹಾರದಲ್ಲಿ ವರುಣನ ಆರ್ಭಟ ಜೋರು; ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಸೇತುವೆ

Published : Aug 16, 2017, 09:01 PM ISTUpdated : Apr 11, 2018, 12:48 PM IST
ಬಿಹಾರದಲ್ಲಿ ವರುಣನ ಆರ್ಭಟ ಜೋರು; ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಸೇತುವೆ

ಸಾರಾಂಶ

ಭಾರಿ ಮಳೆಯಿಂದ ಬಿಹಾರದ ಕತಿಹಾರ್‌ದಲ್ಲಿ ಮಂದಾರ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈಗ ಸೇತುವೆ ಕೊಚ್ಚಿ ಹೋಗಿದ್ದ ವಿಡಿಯೋ ವೈರಲ್‌ ಆಗಿದೆ.

ಬಿಹಾರ (ಆ.16): ಭಾರಿ ಮಳೆಯಿಂದ ಬಿಹಾರದ ಕತಿಹಾರ್‌ದಲ್ಲಿ ಮಂದಾರ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈಗ ಸೇತುವೆ ಕೊಚ್ಚಿ ಹೋಗಿದ್ದ ವಿಡಿಯೋ ವೈರಲ್‌ ಆಗಿದೆ.

ವರುಣನ ಆರ್ಭಟ ಹಿನ್ನೆಲೆ ಕತಿಹಾರ್‌ನಿಂದ ತೆರಳಬೇಕಾಗಿದ್ದ ರೈಲುಗಳ ಸಮಯ ಬದಲಾಗಿದೆ. ಅನೇಕ ರೈಲುಗಳ ಪ್ರಯಾಣ ರದ್ದಾಗಿದೆ ಎಂದು ತಿಳಿದು ಬಂದಿದೆ.  ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಬಿಹಾರ್‌ ತತ್ತರಿಸಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲೂ ಸಹ ಮಳೆಯಿಂದ ಸಂಚಾರ ಅಸ್ತವ್ಯಸ್ತವಾಗಿದೆ. ವಾಹನ ದಟ್ಟಣೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ. ಸಾವಿರಾರು ಮನೆ, ಸೇತುವೆ, ಕೃಷಿ ಬೆಳೆ ನಾಶವಾಗಿವೆ. ಪ್ರವಾಹದಿಂದ ಸುಮಾರು 85ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 65 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Davanagere By-election 2026: ದಾವಣಗೆರೇಲಿ ಪಕ್ಷ ವಿರೋಧಿ ನಡೆಗೆ ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ತಲೆದಂಡ,
Delhi Karnataka Sangha Election: ದೆಹಲಿ ಕರ್ನಾಟಕ ಸಂಘಕ್ಕೆ ಇಂದು ಚುನಾವಣೆ, ಚುನಾವಣೆಗೆ ಮೊದಲೇ ಕುಸ್ತಿ, ಏನಿದು ಜೂಮ್ ಮೀಟಿಂಗ್ ವಿವಾದ?