ಬೆಂಗಳೂರಿನಲ್ಲಿಯೂ ವರುಣನ ಅಬ್ಬರ

By Web DeskFirst Published Aug 31, 2018, 9:00 AM IST
Highlights

ರಾಜ್ಯದ ವಿವಿಧೆಡೆ ಅಬ್ಬರಿಸಿದ್ದ ಮಳೆರಾಯ ಇದೀಗ ಬೆಂಗಳೂರಿನಲ್ಲಿಯೂ ಕೂಡ ತನ್ನ ರುದ್ರ ನರ್ತನ ತೋರಿದ್ದಾನೆ. ಗುರವಾರ ಸುರಿದ ಭಾರೀ ಮಳೆಯಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಮನೆಗಳು ನೀರಿನಲ್ಲಿ ಮುಳುಗಿವೆ. 

ಬೆಂಗಳೂರು : ಉದ್ಯಾನನಗರಿಯಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಮಳೆ ಅನಾಹುತಗಳು ಮತ್ತೆ ಮರುಕಳಿಸಿದ್ದು, ಛಲವಾದಿ ಪಾಳ್ಯದಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ ಅವಾಂತರ ಸೃಷ್ಟಿಯಾಗಿದೆ. 

ಗುರುವಾರ ಸಂಜೆ ಸುರಿದ ಮಳೆಯಿಂದ ಏಕಾಏಕಿ ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡಿದರು. ಪೂರ್ವ ವಲಯದ ದೋಬಿಘಾಟ್ ಸೇರಿದಂತೆ ನಾಲ್ಕೈದು ಕಡೆ ಮರ ಹಾಗೂ ಮರದ ಕೊಂಬೆ ನೆಲಕ್ಕುರುಳಿದ್ದು, ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ.

ಛಲವಾದಿ ಪಾಳ್ಯದ ತಗ್ಗು ಪ್ರದೇಶದಲ್ಲಿರುವ ನೂರಕ್ಕೂ ಹೆಚ್ಚು ಮನೆಗಳಿಗೆ ಏಕಾಏಕಿ ಕೊಳಚೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯವಸ್ತ ಗೊಂಡಿದೆ. ಗೂಡ್‌ಶೆಡ್ ರಸ್ತೆಯಲ್ಲಿ ಕೆಲವು ದಿನಗಳಿಂದ ರಾಜಕಾಲುವೆ ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿತ್ತು.

ಗುರುವಾರ ಸಂಜೆ ಕಾಮಗಾರಿ ವೇಳೆಯಲ್ಲೇ ಮಳೆ ಸುರಿದ ಪರಿಣಾಮ ಛಲವಾದಿ ಪಾಳ್ಯದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ಮೂರು ಅಡಿಯಟ್ಟು ಕೊಳಚೆ ನೀರು ನಿಂತಿರುವುದರಿಂದ ಮನೆಯಲ್ಲಿದ್ದ ಪಾತ್ರೆ, ಧವಸಧಾನ್ಯ, ಬಟ್ಟೆ ಹಾಗೂ ಬೆಲೆ ಬಾಳು ವ ವಸ್ತುಗಳು ನೀರುಪಾಲಾಗಿವೆ. ಪರಿಣಾಮ ಸಾರ್ವ ಜನಿಕರು ರಾತ್ರಿ ಇಡೀ ನೀರು ಹೊರಗೆ ಹಾಕುತ್ತಾ ಜಾಗರಣೆ ಮಾಡುವ ಮೂಲಕ ಕಾಲ ಕಳೆದಿದ್ದಾರೆ. 

ಬಿಬಿಎಂಪಿಗೆ ಹಿಡಿಶಾಪ: ಬಿಬಿಎಂಪಿ ನಿರ್ಲಕ್ಷ್ಯ ದಿಂದಾಗಿ ನೂರಕ್ಕೂ ಹೆಚ್ಚು ಮನೆಗಳಿಗೆ ಕೊಳಚೆ ನೀರು ನುಗ್ಗಿದೆ. ನೂರಕ್ಕೂ ಹೆಚ್ಚು ಕುಟುಂಬಗಳು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಮನೆಯಲ್ಲಿರುವ ಎಲೆಕ್ಟ್ರಿಕಲ್ ಉಪಕರಣ, ಧವಸಧಾನ್ಯ, ಬಟ್ಟೆ ಸೇರಿದಂತೆ ಪ್ರತಿಯೊಂದೂ ಕೊಳಚೆ ನೀರು ಪಾಲಾಗಿದೆ. ತಿನ್ನಲು ಅನ್ನವೂ ಇಲ್ಲ ದಂತಹ ಪರಿಸ್ಥಿತಿ ಉಂಟಾಗಿದೆ. ನಾವು ಒತ್ತುವರಿ ಜಾಗದಲ್ಲಿ ಮನೆ ಕಟ್ಟದಿದ್ದರೂ ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ನಮ್ಮ ಮನೆಗಳಿಗೆ ನೀರು ನುಗ್ಗಿದೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ನಿವಾಸಿಗಳು ಹಿಡಿಶಾಪ ಹಾಕಿದರು.

ಕೂಡಲೇ ಎಚ್ಚೆತ್ತುಕೊಂಡ ಬಿಬಿಎಂಪಿ ಸಿಬ್ಬಂ ದಿ, ಪಂಪ್-ಮೋಟಾರ್‌ಗಳ ಮೂಲಕ ನೀರು ತೆರವು ಗೊಳಿಸುವ ಕಾರ್ಯ ನಡೆಸಿದರು. ಮನೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ಉಟ್ಟ ಬಟ್ಟೆಯ ಲ್ಲಿ ನಿವಾಸಿಗಳು ಹೊರಗಡೆ ನಿಂತು ಮಳೆಯಲ್ಲಿ ನೆನೆ ಯುವಂತಾಗಿದೆ. ನಿವಾಸಿಗಳಿಗೆ ಕೂಡಲೇ ಪರ್ಯಾ ಯ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಪರಿಹಾರ ನೀಡ ಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ರಸ್ತೆಗಳಲ್ಲಿ ನೀರು ನಿಲುಗಡೆ: ಗುರುವಾರ ಸಂಜೆ ಕಡಿಮೆ ಅವಧಿಯಲ್ಲಿ ಸುರಿದ ಹೆಚ್ಚು ಮಳೆಯಿಂದಾ ಗಿ ಏಕಾಏಕಿ ರಸ್ತೆಗಳು ಜಲಾವೃತ ಗೊಂಡವು. ಪರಿ ಣಾಮ ಚಾಲುಕ್ಯ ವೃತ್ತ, ಓಕಳೀಪುರ ಸೇರಿದಂತೆ ಹಲವು ಕಡೆ ರಸ್ತೆ, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಯಿತು. ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ರಾತ್ರಿ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ.

click me!