ಭಾರೀ ಮಳೆಗೆ ಆಟೋ ಸಮೇತ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

Published : Oct 04, 2017, 09:51 AM ISTUpdated : Apr 11, 2018, 12:38 PM IST
ಭಾರೀ ಮಳೆಗೆ ಆಟೋ ಸಮೇತ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ಸಾರಾಂಶ

ಸುಮಾರು 12 ಗಂಟೆಗಳ ಕಾಲ ರಾತ್ರಿಯಿಂದ ಬೆಳಗಿನಜಾವದವರೆಗೂ ನಡುಗಡ್ಡೆಯಲ್ಲಿ ನಿಂತು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ.

ಹಾವೇರಿ(ಅ.04): ತಡರಾತ್ರಿ ಸುರಿದ ಭಾರೀ ಮಳೆಯಿಂದ ಕೆರೆಯ ಕೋಡಿ ಓಡೆದು ಹಳ್ಳಕ್ಕೆ ನೀರು ನುಗ್ಗಿದೆ. ಇದರ ಪರಿಣಾಮ ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಆಟೋಚಾಲಕನೊರ್ವ ಆಟೋ ಸಮೇತ ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

28 ವರ್ಷದ ಗಂಗಾಧರ ಆರೇಮಲ್ಲಾಪುರ ಹಳ್ಳದಲ್ಲಿ ಸಿಲುಕಿದ ವ್ಯಕ್ತಿ. ಪ್ರಯಾಣಿಕರನ್ನ ಬಿಟ್ಟು ಅಜ್ಜಿ ಮನೆಗೆ ಹೋಗುವಾಗ ಈ ಅವಘಡ ಸಂಭವಿಸಿದೆ. ಸುಮಾರು 12 ಗಂಟೆಗಳ ಕಾಲ ರಾತ್ರಿಯಿಂದ ಬೆಳಗಿನಜಾವದವರೆಗೂ ನಡುಗಡ್ಡೆಯಲ್ಲಿ ನಿಂತು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ.

ನಂತರ ಬೆಳಗಿನ ಸಮಯದಲ್ಲಿ ಹಳ್ಳದ ಕಡೆಗೆ ಹೋದ ಸ್ಥಳಿಯರು ಗಂಗಾಧರನನ್ನು ಕಂಡ ಈತನನ್ನ ರಕ್ಷಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಗಂಗಾಧರನನ್ನು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ರಾಣೆಬೆನ್ನೂರು ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಅಥ್ವಾ ಸತ್ತವರ ಬ್ಯಾಂಕ್​ ಖಾತೆ ನಿಷ್ಕ್ರಿಯವಾಗಿದ್ರೆ ಚಿಂತೆ ಬೇಡ: ಕೂಡಲೇ ಹೀಗೆ ಮಾಡಿ ಹಣ ಪಡೆಯಿರಿ
ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್‌ನ್ಯೂಸ್‌ ನೀಡಿದ ಇಲಾಖೆ, ಋತುಚಕ್ರ ರಜೆಗೆ ಗ್ರೀನ್‌ ಸಿಗ್ನಲ್‌!