ಅಬ್ಕಾರಿ ಸುಂಕ ಕಡಿತ; ಪೆಟ್ರೋಲ್,ಡೀಸೆಲ್ ಗ್ರಾಹಕರಿಗೆ ಸಿಹಿಸುದ್ದಿ

By Suvarna Web DeskFirst Published Oct 4, 2017, 8:42 AM IST
Highlights

ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಈಗ ಪ್ರತಿ ಲೀಟರ್'ಗೆ 21.48 ರುಪಾಯಿ ಹಾಗೂ ಡೀಸೆಲ್ ಮೇಲೆ 17.33 ರುಪಾಯಿ ಅಬಕಾರಿ ಸುಂಕ ಹೇರುತ್ತಿದೆ.

ನವದೆಹಲಿ(ಅ.04): ಕೇಂದ್ರ ಸರ್ಕಾರವು ತೈಲೋತ್ಫನ್ನ ಮೇಲಿನ ಅಬಕಾರಿ ಸುಂಕವನ್ನು 2 ರುಪಾಯಿಗಳಷ್ಟು ಕಡಿತಗೊಳಿಸಿದ್ದು, ಇದರಿಂದಾಗಿ ಮಂಗಳವಾರ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 2 ರುಪಾಯಿ ಇಳಿಕೆಯಾಗಿದೆ.

ಸಾರ್ವಜನಿಕ ಆಕ್ರೋಶಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್'ಗೆ ತಲಾ 2 ರುಪಾಯಿನಷ್ಟು ಕಡಿತಗೊಳಿಸಿದೆ. ಇಂದಿನಿಂದಲೇ ಪೆಟ್ರೋಲಿಯಂನ 2 ಉತ್ಫನ್ನಗಳ ಬೆಲೆಯಲ್ಲಿ 2 ರುಪಾಯಿ ಕಡಿತಗೊಂಡಿದೆ. ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಕೇಂದ್ರ ವಿತ್ತ ಸಚಿವಾಲಯ, 'ಪೆಟ್ರೋಲ್ ಮತ್ತು ಡೀಸೆಲ್ (ಬ್ರ್ಯಾಂಡೆಡ್ ಮತ್ತು ಅನ್ ಬ್ರ್ಯಾಂಡೆಡ್) ಮೇಲಿನ ಮೂಲ ಅಬಕಾರಿ ಸುಂಕವನ್ನು ಅಕ್ಟೋಬರ್ 4ರಿಂದ ಅನ್ವಯವಾಗುವಂತೆ ಲೀಟರ್'ಗೆ 2 ರುಪಾಯಿಯಷ್ಟು ಕಡಿತಗೊಳಿಸಲಾಗಿದೆ ಎಂದು ತಿಳಿಸಿದೆ.

ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಈಗ ಪ್ರತಿ ಲೀಟರ್'ಗೆ 21.48 ರುಪಾಯಿ ಹಾಗೂ ಡೀಸೆಲ್ ಮೇಲೆ 17.33 ರುಪಾಯಿ ಅಬಕಾರಿ ಸುಂಕ ಹೇರುತ್ತಿದೆ.

click me!