ಮಳೆಯ ಅಬ್ಬರಕ್ಕೆ ಬೆಂಗಳೂರು ತತ್ತರ

Published : Sep 08, 2017, 09:38 PM ISTUpdated : Apr 11, 2018, 01:08 PM IST
ಮಳೆಯ ಅಬ್ಬರಕ್ಕೆ ಬೆಂಗಳೂರು ತತ್ತರ

ಸಾರಾಂಶ

ಸಾರ್ವಜನಿಕರು ಮನೆ ತಲುಪಲು ಹರಸಾಹಸ ಪಡುತ್ತಿದ್ದಾರೆ.ಕಳೆದ 1 ಗಂಟೆಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿದೆ.  ಹವಾಮಾನ ಇಲಾಖೆಯ ಪ್ರಕಾರ ಇನ್ನು 2 ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಇಂದು ಸುರಿದ ಮಳೆಗೆ ಮೂವರು ಮೃತಪಟ್ಟು ಒಬ್ಬ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಜೆಸಿ ರಸ್ತೆಯ ಬಳಿ ಮರ ಕಾರ್ ಮೇಲೆ ಬಿದ್ದ ಪರಿಣಾಮ ದಂಪತಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಭಾರತಿ(38) ರಮೇಶ್ (42), ಜಗದೀಶ್(46) ಮೃತರು. ಎಲ್ಲರೂ ಮಾಗಡಿ ರಸ್ತೆ ಬಳಿಯ ಸುಮನಹಳ್ಳಿ ನಿವಾಸಿಗಳಾಗಿದ್ದಾರೆ. ಮೂವರು ಕೆಎ 02 ಎನ್ 0771 ಎಸ್ಟೀಮ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಜೆಸಿ ರಸ್ತೆಯ ಬಳಿ ಮರ ಬಿದ್ದ ಪರಿಣಾಮ  ಮೃತಪಟ್ಟಿದ್ದಾರೆ.

ಇನ್ನೊಂದು ಘಟನೆಯಲ್ಲಿ ಡ್ರೈನೇಜ್ 'ನ ಸ್ಲ್ಯಾಬ್ ಬಿದ್ದ ಪರಿಣಾಮ ವಯ್ಯಾಲಿ ಕಾವಲ್ ನಿವಾಸಿ ವರುಣ್(18) ಕೊಚ್ಚಿಕೊಂಡು ಹೋಗಿದ್ದಾನೆ. ಘಟನೆ ಸ್ಥಳಕ್ಕೆ ಮೇಯರ್ ಜಿ.ಪದ್ಮಾವತಿ ಭೇಟಿ ನೀಡಿದ್ದಾರೆ. ನಗರಾದಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದ್ದು 15 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಅಂಡರ್'ಪಾಸ್ ರಸ್ತೆಗಳಲ್ಲಿ ನಾಲ್ಕೈದು ಅಡಿಗಳವರೆಗೂ ನೀರು ನಿಂತಿದೆ.

1 ಗಂಟೆಯಿಂದ ಸುರಿದ ಮಳೆ ಹಲವೆಡೆ ಜಲಾವೃತ

ಬಸವನಗುಡಿ, ಹನುಮಂತನಗರ, ಜೆಸಿ ರಸ್ತೆ, ಜೆಪಿ ಪಾರ್ಕ್, ಅಜಾದ್ ನಗರ, ಸೇರಿ ಹಲವೆಡೆ ಮರಗಳು ಧರೆಗುರುಳಿವೆ. ಬಹುತೇಕ ಕಡೆಗಳಲ್ಲಿ ವಿದ್ಯುತ್​ ಸ್ಥಗಿತಗೊಳಿಸಲಾಗಿದೆ. ರಸ್ತೆಗಳು ಜಲಾವೃತವಾಗಿ ನದಿಯಂತಾಗಿವೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಮನೆ ತಲುಪಲು ಹರಸಾಹಸ ಪಡುತ್ತಿದ್ದಾರೆ.ಕಳೆದ 1 ಗಂಟೆಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿದೆ.  ಹವಾಮಾನ ಇಲಾಖೆಯ ಪ್ರಕಾರ ಇನ್ನು 2 ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮೆಜೆಸ್ಟಿಕ್​, ಶಿವಾನಂದ ಸರ್ಕಲ್​, ಶೇಷಾದ್ರಿಪುರಂ, ಮಲ್ಲೇಶ್ವರಂ,ಮೇಖ್ರಿ ಸರ್ಕಲ್​, ಹೆಬ್ಬಾಳ, ಕೊಡಿಗೆಹಳ್ಳಿ ಗೇಟ್​, ಯಲಹಂಕ, ಕೆ.ಆರ್​.ಸರ್ಕಲ್​, ಚಾಮರಾಜಪೇಟೆ, ಕೆ.ಆರ್​.ಮಾರ್ಕೆಟ್, ರಾಜಾಜಿನಗರ, ವಿಜಯನಗರ, ಮಾಗಡಿರಸ್ತೆ, ಕಾಮಾಕ್ಷಿಪಾಳ್ಯ, ಬಸವನಗುಡಿ, ವಿಧಾನಸೌಧ, ಶಿವಾಜಿನಗರ, ಬಸವೇಶ್ವರ ನಗರ,ಕೆ.ಆರ್​.ಸರ್ಕಲ್​, ಕಾರ್ಪೋರೇಷನ್​, ಕೆ.ಆರ್​.ಮಾರ್ಕೆಟ್, ಎಚ್​ಎಸ್​ಆರ್​ ಲೇಔಟ್​, ಹೊಸೂರು ರಸ್ತೆ, ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?