ಭೂಗಳ್ಳರ ಮೇಲೆ ಕ್ರಮ: ಸ್ಪಷ್ಟನೆ ನೀಡಲು ಎನ್'ಬಿಎಫ್ ಒತ್ತಾಯ

By Suvarna Web DeskFirst Published Sep 8, 2017, 8:51 PM IST
Highlights

ವಿ.ಬಾಲಸುಬ್ರಣಿಯನ್ಅಧ್ಯಕ್ಷತೆಯಸರ್ಕಾರಿಭೂಮಿರಕ್ಷಣಾಸಮಿತಿ27 ಸಾವಿರದ 336 ಎಕರೆನಗರವ್ಯಾಪ್ತಿಯಲ್ಲಿಒತ್ತುವರಿಆಗಿದೆಅಂತಾಸರ್ಕಾರಕ್ಕೆವರದಿಸಲ್ಲಿಸಿದೆ. ಆದ್ರೆರಾಜ್ಯಸರ್ಕಾರಮಾತ್ರ 15 ಸಾವಿರದ 833 ಎಕರೆಭೂಮಿಯನ್ನುವಶಕ್ಕೆಪಡೆದಿದ್ದೇವೆಅಂತಾಹೇಳುತ್ತಿದೆ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಭೂ ಗಳ್ಳರ ಮೇಲೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ , ಸರ್ಕಾರ ಸ್ಪಷ್ಟನೆ ನೀಡಬೇಕು ಅಂತ ನಮ್ಮ ಬೆಂಗಳೂರು ಫೌಂಡೇಶನ್ ಒತ್ತಾಯಿಸಿದೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು  ಯುನೈಟೆಡ್ ಬೆಂಗಳೂರು ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ವಿ.ಬಾಲಸುಬ್ರಣಿಯನ್ ಅಧ್ಯಕ್ಷತೆಯ ಸರ್ಕಾರಿ ಭೂಮಿ ರಕ್ಷಣಾ ಸಮಿತಿ  27 ಸಾವಿರದ 336 ಎಕರೆ ನಗರ ವ್ಯಾಪ್ತಿಯಲ್ಲಿ ಒತ್ತುವರಿ ಆಗಿದೆ ಅಂತಾ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದ್ರೆ ರಾಜ್ಯ ಸರ್ಕಾರ ಮಾತ್ರ 15 ಸಾವಿರದ 833 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ ಅಂತಾ ಹೇಳುತ್ತಿದೆ.ಈ ಎರಡು ವ್ಯತಿರಿಕ್ತ ಅಂಕಿಅಂಶಗಳು ನಡುವೆ ವತ್ಯಾಸ ಕಂಡು ಬರುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಒತ್ತುವರಿದಾರು, ಭೂಗಳ್ಳರು ಹಾಗೂ ಇವರಿಗೆ ಸಹಕರಿಸಿದ ಅಧಿಕಾರಿಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.

click me!