ಈ ಊರಲ್ಲಿ ಮೈ ಮಂಜುಗಡ್ಡೆಯಾಗುವಷ್ಟು ಚಳಿ!

By Suvarna Web DeskFirst Published Jan 18, 2018, 1:58 PM IST
Highlights

ತಾಪಮಾನ ಶೂನ್ಯದ ಆಸುಪಾಸಿನಲ್ಲಿ ಬಂದರೆ ನಾವು ನಡುಗಲು ಶುರು ಮಾಡುತ್ತೇವೆ. ಆದರೆ ತಾಪಮಾನ ಮೈನಸ್ 67 ಡಿಗ್ರಿ ಸೆಲ್ಷಿಯಸ್ ತಲುಪಿದರೆ ಪರಿಸ್ಥಿತಿ ಹೇಗಿರಬೇಡ. ನಿಜ. ರಷ್ಯಾದಲ್ಲಿ ವಜ್ರದ ಗಣಿಗೆ ಪ್ರಖ್ಯಾತಿ ಹೊಂದಿರುವ ಯಕುತಿಯಾ ಪ್ರದೇಶದಲ್ಲಿ ತಾಪಮಾನ ಇದೀಗ -67 ಡಿ.ಸೆ. ತಲುಪಿದೆ.

ಮಾಸ್ಕೋ (ಜ.18): ತಾಪಮಾನ ಶೂನ್ಯದ ಆಸುಪಾಸಿನಲ್ಲಿ ಬಂದರೆ ನಾವು ನಡುಗಲು ಶುರು ಮಾಡುತ್ತೇವೆ. ಆದರೆ ತಾಪಮಾನ ಮೈನಸ್ 67 ಡಿಗ್ರಿ ಸೆಲ್ಷಿಯಸ್ ತಲುಪಿದರೆ ಪರಿಸ್ಥಿತಿ ಹೇಗಿರಬೇಡ. ನಿಜ. ರಷ್ಯಾದಲ್ಲಿ ವಜ್ರದ ಗಣಿಗೆ ಪ್ರಖ್ಯಾತಿ ಹೊಂದಿರುವ ಯಕುತಿಯಾ ಪ್ರದೇಶದಲ್ಲಿ ತಾಪಮಾನ ಇದೀಗ -67 ಡಿ.ಸೆ. ತಲುಪಿದೆ.

ವರ್ಷದ ಬಹುತೇಕ ಸಮಯ ಇಲ್ಲಿ ತಾಪಮಾನ ಅತ್ಯಂತ ಕಡಿಮೆ ಇರುತ್ತದೆ. ಮೈನಸ್ 40 ಡಿ.ಸೆ. ಇಲ್ಲಿ ಸಾಮಾನ್ಯ. ಮಾಸ್ಕೋದಿಂದ 5300 ಕಿ.ಮೀ ದೂರದಲ್ಲಿರುವ ಇದೀಗ ತಾಪಮಾನ ಕುಸಿದ ಪರಿಣಾಮ ಸಾಮಾನ್ಯ ಜನಜೀವನದಲ್ಲಿ ಏರುಪೇರಾಗಿದೆ

click me!