
ಫ್ಲೋರಿಡಾ[ಜು.02]: ಫ್ಲೋರಿಡಾದ ಸಮುದ್ರ ತೀರದಲ್ಲಿ ತಾಯಿ ಹಕ್ಕಿಯೊಂದು ಹಸಿವಿನಿಂದ ಕಂಗೆಟ್ಟ ತನ್ನ ಪುಟ್ಟ ಮರಿಗೆ ಸಿಗರೇಟ್ ತುಂಡೊಂದನ್ನು ತಿನ್ನಿಸುತ್ತಿರುವ ಮನಕಲುಕುವ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ. ಲಾರ್ಗೋನ ನಿವಾಸಿ ಮಸೂನ್ ಈ ಫೋಟೋವನ್ನು ಕ್ಲಿಕ್ ಮಾಡಿ, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಒಂದು ವೇಳೆ ನೀವು ಸಮುದ್ರ ತೀರಕ್ಕೆ ತೆರಳುತ್ತೀರಾದರೆ, ದಯವಿಟ್ಟು ಸ್ವಚ್ಛತೆ ಕಾಪಾಡಿಕೊಳ್ಳಿ' ಎನ್ನುವ ಮನವಿಯೊಂದಿಗೆ ಮಸೂನ್ ಶೇರ್ ಮಾಡಿರುವ ಈ ಫೋಟೋ ಸದ್ಯ ವಿಶ್ವದಾದ್ಯಂತ ಸೌಂಡ್ ಮಾಡುತ್ತಿದೆ.
ಸ್ಥಳೀಯ ವಾಹಿನಿಗಳ ವರದಿಯನ್ವಯ ಈ ಫೋಟೋ ಸುಮಾರು ಒಂದು ವಾರದ ಹಿಂದೆ ಪಾಯಿನ್ಲಾಜ್ ಕೌಂಟಿಯ ಸೇಂಟ್ ಪೀಟ್ಸ್ ಬೀಚ್ ನ್ಲಲಿ ಕ್ಲಿಕ್ಕಿಸಿರುವುದಾಗಿ ತಿಳಿದು ಬಂದಿದೆ. ಈ ಕುರಿತಾಗಿ ಮತ್ತಷ್ಟು ಬರೆದುಕೊಂಡಿರುವ ಕರೇನ್, 'ತಾಯಿ ಹಕ್ಕಿ ತನ್ನ ಮರಿಗೆ ಏನೋ ತಿನ್ನಿಸುತ್ತಿರುವುದನ್ನು ನಾನು ಗಮನಿಸಿದೆ. ಹಕ್ಕಿಯ ಕೊಕ್ಕಿನಲ್ಲಿರುವುದು ಮೀನು ಅಲ್ಲ ಎಂಬುವುದು ನನಗೆ ಸ್ಪಷ್ಟವಾಗಿತ್ತು. ಹೀಗಿದ್ದರೂ ನಾನು ಫೋಟೋ ಸೆರೆ ಹಿಡಿದೆ. ಮನೆಗೆ ತೆರಳಿ ಕಂಪ್ಯೂಟರ್ ನಲ್ಲಿ ಪೋಟೋ ಪರಿಶೀಲಿಸುತ್ತಿದ್ದಾಗ ಹಕ್ಕಿ ತನ್ನ ಮರಿಗೆ ಸಿಗರೇಟು ತಿನ್ನಿಸುತ್ತಿತ್ತು ಎಂದು ತಿಳಿಯಿತು' ಎಂದಿದ್ದಾರೆ.
ಅಂತಿಮವಾಗಿ 'ನೀವು ಸಿಗರೇಟ್ ಸೇದುತ್ತೀರಿ ಎಂದಾದರೆ ದಯವಿಟ್ಟು ಅದರ ತುಂಡನ್ನು ಎಲ್ಲೆಂದರಲ್ಲಿ ಎಸೆಯಬೇಡಿ' ಎನ್ನುವ ಮೂಲಕ ಪರಿಸರ ಹಾನಿ ತಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.