ಕೈ ತೊರೆದ ಶಾಸಕ ಮರಳಿ ಬಿಜೆಪಿಗೆ?

Published : Jul 02, 2019, 01:08 PM ISTUpdated : Jul 02, 2019, 01:10 PM IST
ಕೈ ತೊರೆದ ಶಾಸಕ ಮರಳಿ ಬಿಜೆಪಿಗೆ?

ಸಾರಾಂಶ

ಕೈ ತೊರೆದ ಮುಖಂಡ ಇದೀಗ ಮರಳಿ ಬಿಜೆಪಿಗೆ ಹೋಗ್ತಾರಾ..? ರಾಷ್ಟ್ರಮಟ್ಟದಲ್ಲಿಯೇ ನಡೆಯುತ್ತಿದೆಯಾ ಆಪರೇಷನ್ ಕಮಲ ..? ಹೀಗೊಂದು ಹೇಳಿಕೆ ಕೈ ನಾಯಕರೋರ್ವರು ನೀಡಿದ್ದಾರೆ. 

ತುಮಕೂರು [ಜು.2] : ಕಾಂಗ್ರೆಸ್ ಗೆ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು, ಸ್ಪೀಕರ್ ಇದನ್ನು ಕನ್ಫರ್ಮ್ ಮಾಡಿಲ್ಲ. ಆದರೆ ಇದರಲ್ಲಿ ಸತ್ಯ ಇರಬಹುದು  ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ. 

ತುಮಕೂರಿನಲ್ಲಿ ಮಾತನಾಡಿದ ಪರಮೇಶ್ವರ್,  ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಇದರಿಂದ ಸರ್ಕಾರದ ಸಂಖ್ಯಾಬಲವೂ ಕೂಡ ಕುಸಿಯುವುದಿಲ್ಲ  ಎಂದರು. 

‘ಕೈ’ ಶಾಸಕರ ರಾಜೀನಾಮೆ: ದೇವೇಗೌಡ್ರ ಲೆಕ್ಕಾಚಾರವೇ ಬೇರೆ!

ಶಾಸಕ ಆನಂದ್ ಸಿಂಗ್ ಅವರು ಜಿಂದಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆಯನ್ನೂ ಕೂಡ ನಮ್ಮ ಜೊತೆ ಮಾಡಿಲ್ಲ. ಈ ಸಂಬಂಧ ಈಗಾಗಲೇ ಉಪ ಸಮಿತಿ ರಚಿಸಿದ್ದೇವೆ. ಅವರ ಬಳಿ ಏನೂ ಹೇಳಿಲ್ಲ ಎಂದರು. 

ನಮಗಿರುವ ಮಾಹಿತಿ ಪ್ರಕಾರವಾಗಿ ಆಪರೇಷನ್ ಕಮಲ ನಡೆಯುತ್ತಿದೆ ಎನ್ನಲಾಗುತ್ತದೆ. ಆನಂದ್ ಸಿಂಗ್ ಜೊತೆ ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ. ಕೇಂದ್ರದಿಂದ ಆಪರೇಷನ್ ಕಮಲ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಇದೆ.  ಬಿಜೆಪಿಯಲ್ಲಿ ಉಸಿರುಕಟ್ಟುವ ವಾತಾವರಣ  ಇದೆ ಅನ್ನುವ ಬಿಜೆಪಿ ಶಾಸಕರು ಇದ್ದಾರೆ. ಅವರು ನಮ್ಮ ಬಳಿ ಅಸಮಾದಾನ ತೋಡಿಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ