ಹೀಗೊಂದು ಪ್ರೇಮ ಕಥೆ: ಪ್ರೀತಿಸಿದಾತನೊಂದಿಗೆ ಮದುವೆಯಾಗಲಿಲ್ಲ, ಮದುವೆಯಾಗುವವನ ಮೇಲೆ ಪ್ರೀತಿ ಇಲ್ಲ... ಆತ್ಮಹತ್ಯೆಯೇ ದಾರಿಯಾಯ್ತು!

Published : May 22, 2017, 09:46 PM ISTUpdated : Apr 11, 2018, 01:13 PM IST
ಹೀಗೊಂದು ಪ್ರೇಮ ಕಥೆ: ಪ್ರೀತಿಸಿದಾತನೊಂದಿಗೆ ಮದುವೆಯಾಗಲಿಲ್ಲ, ಮದುವೆಯಾಗುವವನ ಮೇಲೆ ಪ್ರೀತಿ ಇಲ್ಲ... ಆತ್ಮಹತ್ಯೆಯೇ ದಾರಿಯಾಯ್ತು!

ಸಾರಾಂಶ

ಕೊನೆಯದಾಗಿ ತನ್ನ ಹುಡುಗನನ್ನು ಮಾತಾಡಿಸಬೇಕು ಅಂತ ಅವಳಿಗೆ ಆಸೆ. ಅವನಿಗೆ ಫೋನಾಯಿಸಿ ಕರೆದಳು. ಅದೊಂದು ಸುಂದರ ಸಮುದ್ರ ತೀರ. ಕಣ್ಣೀರುಗಳು ಸಮುದ್ರದ ಉಪ್ಪುನೀರಿನೊಂದಿಗೆ ಬೆರೆಯತೊಡಗಿದವು. ಅವಳ ಮನಸ್ಸಿನಲ್ಲಿ ದುಃಖ ತಡೆಯಲಾಗಲಿಲ್ಲ.

ಅವನು ಅವಳನ್ನು ತುಂಬಾ ಪ್ರೀತಿಸುತ್ತಿದ್ದ. ಅವಳೂ ಅವನನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಳು. ಆದರೆ ಆ ಇಷ್ಟ ಬಹುಕಾಲ ಇರಲಿಲ್ಲ. ಅವರಿಬ್ಬರ ಪರಿಶುದ್ಧ ಪ್ರೇಮವನ್ನು ಕಂಡು ಭಗವಂತನಿಗೂ ಅಸೂಯೆ ಹುಟ್ಟಿತೆಂದು ಕಾಣಿಸುತ್ತೆ. ಹುಡುಗಿಗೆ ಬೇರೆಯ ಕಡೆ ಮದುವೆ ಫಿಕ್ಸ್ ಆಗಿ ಹೋಯ್ತು.

ಕೊನೆಯದಾಗಿ ತನ್ನ ಹುಡುಗನನ್ನು ಮಾತಾಡಿಸಬೇಕು ಅಂತ ಅವಳಿಗೆ ಆಸೆ. ಅವನಿಗೆ ಫೋನಾಯಿಸಿ ಕರೆದಳು. ಅದೊಂದು ಸುಂದರ ಸಮುದ್ರ ತೀರ. ಕಣ್ಣೀರುಗಳು ಸಮುದ್ರದ ಉಪ್ಪುನೀರಿನೊಂದಿಗೆ ಬೆರೆಯತೊಡಗಿದವು. ಅವಳ ಮನಸ್ಸಿನಲ್ಲಿ ದುಃಖ ತಡೆಯಲಾಗಲಿಲ್ಲ.

ಅವನನ್ನು ತಬ್ಬಿಕೊಂಡಳು. ಬಿಟ್ಟು ಹೋಗುವ ಹುಡುಗಿ ತಬ್ಬಿಕೊಂಡು ಮತ್ತೆ ಪ್ರೇಮದ ನಿನಾದವನ್ನು ಗರಿಗೆದರುವಂತೆ ಮಾಡಿದಳು. ಬಿಡಿಸಿಕೊಳ್ಳಲಾಗದಂತಹ ಬಂಧಿಸಿ ಹಿಡಿದುಕೊಂಡ ಅವಳನ್ನು.. ಅವಳಲ್ಲಿ ಆಸೆಗಳು ಮೊಳಕೆಯೊಡೆಯತೊಡಗಿದವು. ಬಿಟ್ಟುಬಿಡು. ನಾನು ಹೊರಡಬೇಕು.. ನಾನು ನಿನ್ನವಳಲ್ಲ... ಪರಸ್ತ್ರೀ ನಾನು ಎಂದು ಅವನೆದೆಯಿಂದ ಬಿಡಿಸಿಕೊಳ್ಳಲು ತವಕಿಸಿದಳು.. ಇಲ್ಲ ಅವನ ಬಾಹು ಬಂಧನದ ಬಿಗಿಯಲ್ಲಿ ಅವಳು ಇನ್ನಷ್ಟು ಮೋಹಿತಳಾದಳು..

ಅವನನ್ನು ಇನ್ನಷ್ಟು ಬಿಗಿಯಾಗಿ ತಬ್ಬಿಕೊಂಡ. ತನ್ನ ತುಟಿಗಳನ್ನು ಕಿವಿಬಳಿ ತಂದಳು. ಇನ್ನೆಷ್ಟು ದಿನ ಈ ನಮ್ಮ ಪ್ರೇಮ? ನಾನು ನಿನ್ನು ಬಿಟ್ಟು ಹೋಗುತ್ತಿದ್ದೇನೆ. ಇಂದು ಮಾತ್ರವೇ ನಾನು ನಿನ್ನವಳು ಎಂದು ಕಿವಿಯಲ್ಲಿ ವಟಗುಟ್ಟಿದಳು.

ಅವನ ಕಣ್ಣೀರು ಅವಳ ಕತ್ತಿನ ಮೇಲೆ ಬಿತ್ತು.. ತಲೆ ಎತ್ತಿ ನೋಡಿದಳಾಕೆ. ಅರೆ.. ಅವನು ಅಳುತ್ತಿದ್ದಾನೆ... ಹೆಣ್ಣಿನಂತೆ ದುಃಖಿಸುತ್ತಿದ್ದಾನೆ. ಅವಳು ಸಮಾಧಾನ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಪ್ಪ ಅಮ್ಮನಿಗಾಗಿ ಬೇರೆ ಮದುವೆಯಗದೇ ಆಕೆಗೆ ವಿಧಿ ಇರಲಿಲ್ಲ.

ಮರೆಯದ ನೆನಪುಗಳನ್ನು ಕಣ್ಣೀರು ತೊಳೆದು ಹಾಕಲಿ ಎಂದು ಅವನನ್ನು ದುಃಖದಲ್ಲೇ ಬಿಟ್ಟು ಮುಂದಕ್ಕೆ ಹೋದಳು. ಸ್ವಲ್ಪ ದೂರ ಹೋಗಿ ಹಿಂದಿರುಗಿ ಬಂದಳು.. ಹೇ ನನಗೆ ಒಂದೇ ಒಂದು ಕೊನೆ ಆಸೆ ಇದೆ.. ನೆರವೇರಿಸ್ತೀಯ? ಎಂದು ಕೇಳಿದಳು.. ಪ್ರಿಯತಮೆಯ ಕೊನೆಯ ಆಸೆ.. ಸಾಯಿ ಎಂದರೆ ಕ್ಷಣಾರ್ಧದಲ್ಲೇ ಪ್ರಾಣ ಕೊಡಬಲ್ಲ. ಅಷ್ಟೋಂದು ಪ್ರೀತಿ ಅವಳ ಮೇಲೆ. ಆಯ್ತು ಏನು ಹೇಳು ಎಂದ ದುಗುಡದ ದನಿಯಲ್ಲಿ.

ಕೊನೆಯದಾಗಿ ನೀನು ನನಗೆ ಟಾಟ ಮಾಡು ಎಂದಳು.. ಹೇಗೆ ಮಾಡುತ್ತಾನೆ..? ಅಷ್ಟೋಂದು ನಿಶ್ಕಲ್ಮಶ ಮನಸ್ಸಿನಿಂದ ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಕೊಡುವ ಮನಸ್ಸು ಅವನಿಗೆ ಇರಲಿಲ್ಲ.. ಅವಳನ್ನು ನೋಡಿದ.. ಅವಳು ಮತ್ತೆ ಮತ್ತೆ ಕೆಳಿದಳು.. ಪ್ಲೀಸ್‌ ಕಣೋ.. ನೀನು ಕೊನೆಯದಾಗಿ ನನಗೆ ಟಾಟಾ ಮಾಡು.. ನೀನು ನಗು ನಗುತ್ತ ನನ್ನನ್ನು ಕಳಿಸಿಕೊಡು.. ನೀನು ಖುಷಿಯಿಂದ ಟಾಟಾ ಮಾಡಿ ನನ್ನನ್ನು ಕಳಿಸಿಕೊಟ್ಟರೆ ನನ್ನ ಮನಸ್ಸು ನಿರಾಳ ಆಗುತ್ತೆ. ಇಲ್ಲವಾದಲ್ಲಿ ನಿನಗೆ ಮೋಸ ಮಾಡಿದ ಭಾವನೆ ಕೊರಗುತ್ತಿರುತ್ತೆ, ಸಾಯೋವರೆಗೂ.. ಪ್ಲೀಸ್.. ಮಾಡು ಎಂದು ಅಂಗಲಾಚಿದಳು.. ಅವನು ಮಾಡಲೇ ಇಲ್ಲ..

ಅವಳು ದುಃಖದಲ್ಲೇ ಮನೆಗೆ ತೆರಳಿದಳು.. ಅವನು ಇಷ್ಟೋಂದು ಪ್ರೀತಿಸ್ತಾನೆ.. ನನ್ನನ್ನು ಕನಸಿನಲ್ಲೂ ಇನ್ನೊಬ್ಬರಿಗೆ ಬಿಟ್ಟುಕೊಡದಷ್ಟು ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾನೆ. ಅಂಥವನನ್ನೇ ಪಡೆದುಕೊಳ್ಳಲಾಗದ ನನ್ನ ಬದುಕನ್ನು ಇನ್ನಾರಿಗೋ ಕಾಮದ ದಾಹಕ್ಕೆ ಮುಡಿಪಾಗಿಡಬೇಕೆ? ಇದು ಎಷ್ಟು ಸರಿ ಎಂದು ದುಃಖಿಸತೊಡಗಿದಳು. ಅಪ್ಪ ಅಮ್ಮನ ಮಾತಿಗೂ ಎದುರಾಡದೇ, ಅವನ ನಿರ್ಮಲ ಪ್ರೀತಿಯನ್ನೂ ಬಿಟ್ಟುಕೊಡಲಾಗದೇ ಚಿಂತೆಗೀಡಾದಳು.. ಮನೆಯಲ್ಲಿ ಫ್ಯಾನ್ ಇತ್ತು.. ಅಲ್ಮೆರಾದಲ್ಲಿ ಆಕೆಯ ದಾವಣಿ ಇತ್ತು.. ಇಷ್ಟು ಸಾಕು ಬದುಕನ್ನು ದುಸ್ತರ ಮಾಡಿಕೊಳ್ಳಲು..

ಪ್ರೀತಿಸಿದವನನ್ನು ಒಂಟಿ ಮಾಡಿ ಬಿಟ್ಟು ಹೋದಳು.. ಮತ್ತೆಂದೂ ಬಾರದ ಲೋಕಕ್ಕೆ.. ಅವನು ಟಾಟಾ ಮಾಡಿಲ್ಲ ಅಂತ ಆವಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವನ ಮೇಲಿನ ಅಗಾಧ ಪ್ರೀತಿಯನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳುವ ಮನಸ್ಸಿಲ್ಲದೇ.. !

ಲೇಖನ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗರ್ಭಧರಿಸಿ 9 ತಿಂಗಳು ಪೂರೈಸಿದ ಹಸುವಿಗೆ ಸೀಮಂತ ಮಾಡಿದ ಮಂಡ್ಯ ರೈತ
ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌