ಮಗುವಿನ ಅಳು ಕೇಳದಿರಲು ಸಹಪ್ರಯಾಣಿಕರಿಗೆ ಸಿಹಿ ಹಂಚಿದ ತಾಯಿ

By Web DeskFirst Published Jul 4, 2019, 4:56 PM IST
Highlights

ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೀರಿ ಆಗ ಇದ್ದಕ್ಕಿದ್ದಂತೆ ಮಗುವೊಂದು ಅಳಲು ಆರಂಭಿಸುತ್ತದೆ. ನಿಮಗೆ ಕಿರಿಕಿರಿ ಆದರೆ ಅದು ಮಗು...ಏನು ಮಾಡಲು ಸಾಧ್ಯವೇ ಇಲ್ಲ ತಾನೆ? ಆದರೆ ಇಲ್ಲೊಬ್ಬ ತಾಯಿ ಮಗುವಿನ ಕತೆ ಮಾತ್ರ ಮನ ಕಲಕುತ್ತದೆ.

ಬೆಂಗಳೂರು[ಜು. 04] ಇಲ್ಲೊಬ್ಬಳು ಮಹಾತಾಯಿ ತನ್ನ ಮಗುವಿನಿಂದ ಬೇರೆಯವರಿಗೆ ತೊಂದರೆ ಆಗಬಾರದು ಎಂದು ಮಾಡಿರುವ ಕೆಲಸ ನಿಜಕ್ಕೂ ಒಂದು ಕ್ಷಣ ನಮ್ಮನ್ನು ಎಮೋಶನಲ್ ಆಗಿಸುತ್ತದೆ.

10 ತಿಂಗಳ ಮಗುವನ್ನು ಕರೆದುಕೊಂಡು ಹೊರಟಿದ್ದ ತಾಯಿ ವಿಮಾನದ ಎಲ್ಲ ಪ್ರಯಾಣಿಕರ ಮನ ಗೆದ್ದಿದ್ದಾರೆ. ತನ್ನ ಮಗು ಅಳಲು ಆರಂಭಿಸಿದರೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ 200 ಚೀಲದಷ್ಟು ಚಾಕೊಲೇಟ್ ಮತ್ತು ಇಯರ್ ಪೋನ್ ಗಳನ್ನು ಪ್ರಯಾಣಿಕರಿಗೆ ಹಂಚಿದ್ದಾರೆ.

ದವೆ ಕರೋನಾ ಎಂಬ ಪ್ರಯಾಣಿಕರು ತಾಯಿಯ ಈ ಕೆಲಸವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ. ಚಾಕೋಲೇಟ್ ಪಟ್ಟಣದ ಜತೆ ತಾಯಿ ಒಂದು ಪತ್ರ ಸಹ ಇಟ್ಟಿದ್ದು ಎಲ್ಲರ ಮನಗೆದ್ದರು.ಹಲೋ. ನಾನು ಜುನ್ವೋ.. ನಾನು ಯುಎಸ್ ಎಗೆ ನನ್ನ ಅಜ್ಜಿ ಮತ್ತು ಚಿಕ್ಕಮ್ಮನ ನೋಡಲು ತೆರಳುತ್ತಿದ್ದು ಇದು ನನ್ನ ಮೊದಲ ವಿಮಾನ ಪ್ರಯಾಣ.. ನಾನು ಸ್ವಲ್ಪ ಹೆದರಿದ್ದೇನೆ ಯಾಕಂದರೆ ಮೊದಲೆ ಹೇಳಿದಂತೆ ಇದು ನನ್ನ ಮೊದಲ ವಿಮಾನಯಾನ.

ಆಕ್ಸಿಜನ್ ಸಿಲಿಂಡರ್ ನೊಂದಿಗೆ IAS ಬರೆದವಳಿಗೊಂದು ಸಲಾಂ

ನಾನು ಅಳುವ ಮತ್ತು ಕೂಗುವ ಸಾಧ್ಯತೆ ಹೆಚ್ಚಿಗೆ ಇದೆ. ನಾನು ಸಾಧ್ಯವಾದಷ್ಟು ಸುಮ್ಮನೆ ಇರಲು ಪ್ರಯತ್ನ ಮಾಡುತ್ತೇನೆ.. ಒಂದು ವೇಳೆ ಅಳು ಬಂದರೆ ದಯವಿಟ್ಟು ನನ್ನ ಕ್ಷಮಿಸಿ.. ಅಮ್ಮ ನೀಡಿರುವ ಸಿಹಿ ಮತ್ತು ಇಯರ್ ಪೋನ್ ಬಳಸಿ... ನಿಮ್ಮ ಪ್ರಯಾಣ ಎಂಜಾಯ್ ಮಾಡಿ..ಧನ್ಯವಾದ.. ಉಳಿದ ಕೆಲ ಪ್ರಯಾಣಿಕರು ಸಹ ತಾಯಿ ಮತ್ತು ಮಗುವಿನ ಪ್ರಯಾಣದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

click me!