ಸ್ಯಾರಿಡಾನ್ ಸೇರಿ 328 ಪ್ರಚಲಿತ ಔಷಧಗಳಿಗೆ ನಿಷೇಧ

By Web DeskFirst Published Sep 13, 2018, 2:05 PM IST
Highlights

ಅತ್ಯಂತ ಪ್ರಚಲಿತ ಔಷಧಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಇದೀಗ ಬ್ಯಾನ್ ಮಾಡಿದೆ. ಅದರಲ್ಲಿ ಸ್ಯಾರಿಡಾನ್ ಸೇರಿ 328 ಔಷಧಗಳಿವೆ. 

ನವದೆಹಲಿ :  ದೇಶದಲ್ಲಿ ಅನೇಕ ಸಮಯದ ಕಾನೂನು ಸಮರದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ 328 ರೀತಿಯ ಔಷಧಗಳನ್ನು ಬ್ಯಾನ್ ಮಾಡಿದೆ. 

ತಕ್ಷಣವೇ ಜಾರಿಗೆ ಬರುವಂತೆ ಬ್ಯಾನ್ ಮಾಡಲಾಗಿದೆ. ಅತ್ಯಂತ ಹೆಚ್ಚು ಪಾಪ್ಯುಲರ್ ಬ್ರಾಂಡ್ ಗಳಾದ ಸ್ಯಾರಿಡಾನ್, ಪ್ಯಾಂಡರ್ಮ್, ಗ್ಲೂಕೋನಾರ್ಮ್ ಪಿಜಿ, ಲ್ಯುಪಿಡಿಕ್ಲೋಕ್ಸ್,  ಸೇರಿದಂತೆ  ಹಲವು ಡೋಸ್ ಗಳಿಗೆ ನಿಷೇಧ ಹೇರಲಾಗಿದೆ. 

ಕಳೆದ 2 ವರ್ಷಗಳಿಂದಲೂ ಕೂಡ ಬ್ಯಾನ್ ಸಂಬಂಧ ಕಾನೂನು ಸಮರ ನಡೆಯುತ್ತಿದ್ದು, ಇದೀಗ ಅಧಿಕೃತವಾಗಿ ಬ್ಯಾನ್ ಮಾಡಲಾಗಿದೆ. ಡ್ರಗ್ ಅಂಡ್ ಟೆಕ್ನಿಕಲ್ ಅಡ್ವೈಸರ್ ಬೋರ್ಡ್ ಗೆ ಈ ಸಂಬಂಧ ಪರಿಶೀಲನೆ ನಡೆಸಲು ಕಳೆದ ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. 

ಇವುಗಳಲ್ಲಿ ಸೂಕ್ತವಾದ ಯಾವುದೇ ರೀತಿಯಾದ ಸೂಕ್ತ ಡೋಸೇಜ್ ಇಲ್ಲದ ಕಾರಣ ಬ್ಯಾನ್ ಮಾಡಲು ಸೂಚನೆ ನೀಡಲಾಗಿದೆ. ಇವುಗಳನ್ನು ತಯಾರು ಮಾಡುವುದು ಹಾಗೂ ಮಾರಾಟ ಮಾಡುವುದು ನಿಷೇಧ ಮಾಡಲಾಗಿದೆ. ಇನ್ನು 15 ರೀತಿಯ ಔಷಧಗಳ ಬಗ್ಗೆ ಸದ್ಯ ತನಿಖೆ ನಡೆಸಲಾಗುತ್ತಿದ್ದು ಈ ಸಂಬಂಧ ಇನ್ನು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. 

click me!