
ಬೀದರ್(ಸೆ.20): ಇತ್ತೀಚೆಗೆ ಕೆಲ ರಾಜ್ಯಗಳಲ್ಲಿ ಶಿಶುಗಳ ಸಾವಿನ ಪ್ರಮಾಣ ಮಿತಿ ಮೀರಿದೆ. ಇಂತಹ ಸಂದರ್ಭದಲ್ಲೇ ನಮ್ಮ ರಾಜ್ಯದ ಗಡಿ ಜಿಲ್ಲೆ ಬೀದರ್ನಲ್ಲಿ ಕಳೆದ 4 ತಿಂಗಳಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಮಕ್ಕಳ ಸಾವು ಸಂಭವಿಸಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇದು ಸ್ವಲ್ಪ ಶಾಕಿಂಗ್ ಆದ್ರೂ ಸಹ, ಸತ್ಯ ಸಂಗತಿ. ಸುಮಾರು 137 ಮಕ್ಕಳು ಭೂಮಿಗೆ ಬಂದ ಮೇಲೆ ಸಾವನ್ನಪ್ಪಿದ್ರೆ, 72 ಕ್ಕೂ ಹೆಚ್ಚು ಮಕ್ಕಳು ತಾಯಿ ಹೊಟ್ಟೆಯಲ್ಲೇ ಕೊನೆಯುಸಿರೆಳೆದಿವೆ. ಇದಕ್ಕೆ ಬಹು ಮುಖ್ಯ ಕಾರಣ ಅಂದ್ರೆ ಅಪೌಷ್ಠಿಕತೆ ಅಂತ ಹೇಳಲಾಗ್ತಿದೆ. ಇನ್ನೂ ಕೆಲ ಶಿಶುಗಳು ವೈದ್ಯಕೀಯ ಸೌಲಭ್ಯ ಸಿಗದೆ ಮೃತಪಟ್ಟಿವೆ ಎಂಬ ಮಾತು ಸಹ ಕೇಳಿ ಬಂದಿದೆ.
ಬೀದರ್ ಜಿಲ್ಲೆಯಲ್ಲಿ ಸುಮಾರು 625 ಹಳ್ಳಿಗಳಿದ್ದು, ಎಷ್ಟೋ ಹಳ್ಳಿಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಭೇಟಿ ಸಹ ನೀಡಿಲ್ಲ. ಹೀಗೆ ಕಾಟಾಚಾರಕ್ಕೆ ಕರ್ತವ್ಯ ನಿರ್ವಹಿಸುತ್ತಿರೋದ್ರಿಂದ ಈ ಬಾರೀ ದುರಂತ ಸಂಭವಿಸುತ್ತಿದೆ ಅಂತ ಕೆಲ ಹೋರಾಟಗಾರರು ಹೇಳ್ತಿದ್ದಾರೆ.
ಅಪೌಷ್ಟಿಕತೆ ನಿವಾರಣೆಗೆ ಅಂತಾನೆ ಸರ್ಕಾರ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಆದ್ರೆ ಈ ಹಣವೆಲ್ಲಾ ಭ್ರಷ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಜೇಬು ಸೇರುತ್ತಿರೋದ್ರಿಂದ ಶಿಶುಗಳ ಸಾವಿನ ಸರಣಿ ನಡೆಯುತ್ತಿದೆ ಅಂತ ಸ್ಥಳಿಯರು ಹೇಳ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.