ಅಬ್ಬಾ...! ರನ್ ವೇ ಮಧ್ಯದಲ್ಲಿ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಮತ್ತೊಂದು ವಿಮಾನ! ಮುಂದೇನಾಯಿತು?

By Internet DeskFirst Published Oct 1, 2016, 3:01 AM IST
Highlights

ನೆವಾಡಾ(ಅ.01): ನೋಡುಗರಿಗೇ ಶಾಕ್ ತಗುಲಿಸುವಂತಹ ಘಟನೆಯೊಂದು ಕಳೆದ ವಾರ ಅಮೆರಿಕಾದಲ್ಲಿ ನಡೆದಿದ್ದು, ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸೆಪ್ಟೆಂಬರ್ 18 ರಂದು ರೆನೋ ನ್ಯಾಷನಲ್ ಚಾಂಪಿಯನ್'ಷಿಪ್'ನಲ್ಲಿ ನಡೆದ ಈ ಘಟನೆಯಲ್ಲಿ ರನ್'ವೇ ಮಧ್ಯದಲ್ಲಿ ನಿಲ್ಲಿಸಿದ್ದ ವಿಮಾನವೊಂದಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ವಿಮಾನ ಡಿಕ್ಕಿ ಹೊಡೆದಿದೆ.  

ಸ್ಪರ್ಧಾಳು ಥಾಮ್ ರಿಚ್ಚರ್ಡ್ ವಿಮಾನವನ್ನು ಚಲಾಯಿಸುತ್ತಿದ್ದ ವಿಮಾನದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ದೃಶ್ಯಾವಳಿಗಳು ದಾಖಲಾಗಿದ್ದು, ಹಿಂದಿನ ವಿಮಾನ ಡಿಕ್ಕಿ ಹೊಡೆದ ರಭಸಕ್ಕೆ ಈ ವಿಮಾನ ಯಾವ ರೀತಿ ತಿರುಗಿದೆ ಎಂಬುವುದು ಇದರಲ್ಲಿ ಸ್ಪಷ್ಟವಾಗಿದೆ.

ವಾಸ್ತವವಾಗಿ ವಿಮಾನದಲ್ಲುಂಟಾದ ತಾಂತ್ರಿಕ ದೋಷದಿಂದಾಗಿ ರನ್ ವೇ ಮಧ್ಯದಲ್ಲೇ ತನ್ನ ವಿಮಾನವನ್ನು ಥಾಮ್ ರಿಚ್ಚರ್ಡ್ ನಿಲ್ಲಿಸಬೇಕಾಯಿತು. ಆದರೆ ವಿಮಾನದಲ್ಲುಂಟಾದ ಈ ಸಮಸ್ಯೆಯ ಕುರಿತು ಇತರ ಸ್ಪರ್ಧಾಳುಗಳಿಗೆ ಮಾಹಿತಿ ಇರಲಿಲ್ಲ. ಹೀಗಾಗಿ ಹಿಂದಿನಿಂದ ವೇಏಗವಾಘಿ ಆಗಮಿಸಿದ ವಿಮಾನ ನಿಲ್ಲಿಸಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ರಿಚ್ಚರ್ಡ್'ನ ಕೈಗಳಿಗೆ ಮಾತ್ರವಷ್ಟೇ ಗಾಯಗಳಾಗಿವೆ.

ವಿಡಿಯೋವನ್ನು ಫೇಸ್'ಬುಕ್'ನಲ್ಲಿ ಶೇರ್ ಮಾಡಿರುವ ಥಾಮ್ ರಿಚ್ಚರ್ಡ್ 'ಇನ್ನು ಕೇವಲ ನಾಲ್ಕು ಫೀಟ್ ಎಡಭಾಗಕ್ಕೆ ನಾನು ಬಿದ್ದಿದ್ದರೆ ಅಪ್ಪಚ್ಚಿಯಾಗುತ್ತಿದ್ದೆ. ಈ ಘಟನೆ ಗನ್'ನಿಂದ ಹೊರಟ ಬುಲೆಟ್'ನ್ನು ಮೂರ್ಖನನ್ನಾಗಿಸಿದಂತಿತ್ತು. ಇದಕ್ಕೆ ಶಿಕ್ಷೆ ಎಂಬಂತೆ ನಣಾಉ ಕೈ ಮುರಿದುಕೊಂಡಿದ್ದೇನೆ. ಇದನ್ನು ನಾನು ಅನುಭವಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

 

 

click me!