ಸಿಡಿದೆದ್ದ ಮಾಜಿ ಪ್ರಧಾನಿ: ಕಾವೇರಿಗಾಗಿ ಅಧಿಕೃತವಾಗಿ ಅಖಾಡಕ್ಕಿಳಿದ ದೇವೇಗೌಡರು!

By Internet DeskFirst Published Oct 1, 2016, 2:59 AM IST
Highlights

ಬೆಂಗಳೂರು(ಅ.01): ಕಾವೇರಿ ಜಲ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ರಾಜ್ಯದ ಪಾಲಿಗೆ ಮರಣಶಾಸನ ಬರೆಯುತ್ತಿದೆ. ಇದರಿಂದ ಸಿಡಿದೆದ್ದಿರುವ ಮಾಜಿ ಪ್ರಧಾನಿ ದೇವೇಗೌಡ ಅಧಿಕೃತವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಮೊದಲಿಂದಲೂ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಗೆ ಒತ್ತಾಯಿಸಿಕೊಂಡೇ ಜೆಡಿಎಸ್ ವರಿಷ್ಠರು ಬಂದಿದ್ದರು. ಈಗಲೂ ಇದೇ ನಿರ್ಧಾರಕ್ಕೆ ಬದ್ಧರಾಗಿದ್ದು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಇಂದಿನಿಂದ ಕಾವೇರಿ ಹೋರಾಟವನ್ನು ಅಹಿಂಸಾ ಮಾರ್ಗದಲ್ಲಿ ಮುಂದುವರಿಸಲಿದ್ದಾರೆ. ನಿನ್ನೆ ರಾತ್ರಿ ಈ ಬಗ್ಗೆ ಪುತ್ರ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ದೇವೇಗೌಡ್ರು ಚರ್ಚಿಸಿದ್ದಾರೆ. ಇವತ್ತು ಬೆಳಗ್ಗೆ 6.30ಕ್ಕೆ ಗಾಂಧಿ ಬಜಾರ್ ಬಳಿಯಿರುವ ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದು, ನಂತರ ಕೋಟೆ ವೆಂಕಟರಮಣ ದೇವಾಲಯಕ್ಕೆ ಪೂಜೆ ಸಲ್ಲಿಸಿ ವಿಧಾನಸೌಧದ ಬಳಿಯಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

Latest Videos

ಕಠಿಣ ಹೋರಾಟವಾದ ಅಹೋರಾತ್ರಿ ಧರಣಿಗೆ ಮುಂದಾಗಿರುವ ಮಾಜಿ ಪ್ರಧಾನಿಗಳಿಗೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಕೂಡ ಸಾಥ್ ನೀಡಲಿದ್ದಾರೆ.

click me!